ಕಾರ್ಗಿಲ್‌ ಕದನ ನಡೆದು 24 ವರ್ಷಗಳು ಕಳೆದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ತಮ್ಮಿಂದ ತಪ್ಪಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಘಟನೆಗೆ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರ್ರಫ್‌ ಕಾರಣ ಎಂದು ಹೇಳಿದ್ದಾರೆ.

ಲಾಹೋರ್‌ (ಮೇ.29): ಕಾರ್ಗಿಲ್‌ ಕದನ ನಡೆದು 24 ವರ್ಷಗಳು ಕಳೆದ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ತಮ್ಮಿಂದ ತಪ್ಪಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಘಟನೆಗೆ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್‌ ಮುಷರ್ರಫ್‌ ಕಾರಣ ಎಂದು ಹೇಳಿದ್ದಾರೆ.

ಲಾಹೋರ್‌ನಲ್ಲಿ ಪಿಎಂಎಲ್‌-ಎನ್‌ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ ಬಳಿಕ ನವಾಜ್‌ ಮಾತನಾಡಿದರು. ‘ನಾನು ಪ್ರಧಾನಿಯಾಗಿದ್ದಾಗ 1998ರ ಮೇ 28ರಂದು ನಾವು 5 ಅಣು ಬಾಂಬ್‌ ಪರೀಕ್ಷೆ ನಡೆಸಿದೆವು. ಇದಾದ ಬಳಿಕ 1999ರ ಫೆ.21ರಂದು ಭಾರತದ ಪ್ರಧಾನ ಮಂತ್ರಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ‘ಸಾಹೇಬ್‌’ ಅವರು ಉಭಯ ದೇಶಗಳ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವ ಸದುದ್ದೇಶದಿಂದ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದಾದ ಕೆಲವೇ ತಿಂಗಳಲ್ಲಿ ಕಾರ್ಗಿಲ್‌ ದುರಂತ ಸಂಭವಿಸಿತು. ಇದಕ್ಕೆ ಅಂದಿನ ಸೇನಾ ಮುಖ್ಯಸ್ಥ ಮುಷರಫ್‌ ಕಾರಣರಾಗಿದ್ದರು ಎಂದು ಹೇಳಿದರು.

ಬಿ.ಎಲ್‌.ಸಂತೋಷ್‌ ಸೆರೆಗೆ ಸಂಚು ರೂಪಿಸಿದ್ದ ತೆಲಂಗಾಣ ಮಾಜಿ ಸಿಎಂ ಕೆಸಿಆರ್

ಅಲ್ಲದೇ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಟೀಕಿಸಿದ ನವಾಜ್‌,‘ನಾವು ನಡೆಸಿದ ಅಣು ಪರೀಕ್ಷೆಯನ್ನು ತಡೆಯಲು ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್‌ 41 ಸಾವಿರ ಕೋಟಿ ರು. (5 ಬಿಲಿಯನ್‌ ಡಾಲರ್‌) ನೀಡಲು ಮುಂದಾಗಿದ್ದರು. ಆದರೆ ನಾನು ನಿರಾಕರಿಸಿದ್ದೆ. ಅದೇ ಇಮ್ರಾನ್‌ ಆಗಿದ್ದರೆ ಸ್ವೀಕರಿಸುತ್ತಿದ್ದರು’ ಎಂದು ಕಿಡಿಕಾರಿದರು.

 74 ವರ್ಷದ ಷರೀಫ್ ಅವರು 2017 ರಲ್ಲಿ ಪಾಕಿಸ್ತಾನದ ಆಗಿನ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ ಅವರು ತನ್ನ ಮೇಲಿನ ಸುಳ್ಳು ಆರೋಪದಲ್ಲಿ ಹೇಗೆ ಪ್ರಧಾನಿ ಕಚೇರಿಯಿಂದ ಹೊರ ಹಾಕಲ್ಪಷ್ಟಿದ್ದು ಹೇಗೆ ಎಂಬುದರ ಕುರಿತು ಮಾತನಾಡಿದರು. ನನ್ನ ಮೇಲಿನ ಎಲ್ಲಾ ಕೇಸ್ ಗಳು ಸುಳ್ಳು, ಆದರೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸ್ಥಾಪಕ ನಾಯಕ ಇಮ್ರಾನ್ ಖಾನ್ ವಿರುದ್ಧದ ಪ್ರಕರಣಗಳು ನಿಜ ಎಂದರು.

ಈಶಾನ್ಯದಲ್ಲಿ ರೆಮಲ್‌ ಚಂಡಮಾರುತ ಎಫೆಕ್ಟ್, ಒಂದೇ ದಿನ 37 ಸಾವು!

ಷರೀಫ್ ಅವರ ಕಿರಿಯ ಸಹೋದರ ಪ್ರಧಾನಿ ಶೆಹಬಾಜ್ ಷರೀಫ್ ಬಗ್ಗೆ ಮಾತನಾಡಿ 'ನಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಗಳನ್ನು ಮಾಡಲಾಯಿತು ಆದರೆ ಶೆಹಬಾಜ್ ನನಗೆ ನಿಷ್ಠರಾಗಿದ್ದರು. ಶೆಹಬಾಜ್ ಕೂಡ ಈ ಹಿಂದೆ ಪ್ರಧಾನಿಯಾಗಲು ನನ್ನನ್ನು ತೊರೆಯುವಂತೆ ಕೇಳಲಾಯಿತು ಎಂಬ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದರು. ಪಿಎಂಎಲ್-ಎನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷವನ್ನು ಬಲಪಡಿಸುವ ಪ್ರಯತ್ನ ಮಾಡಲಾಗುವುದು ಎಂದರು.