Asianet Suvarna News

ಪಾಕ್‌ನಲ್ಲಿ 60 ಹಿಂದುಗಳು ಇಸ್ಲಾಂಗೆ ಬಲವಂತ ಮತಾಂತರ!

* ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಮಾಲ್ಟಿಎಂಬಲ್ಲಿ 60ಕ್ಕೂ ಹೆಚ್ಚು ಹಿಂದೂಗಳ ಮತಾಂತರ

* ಮಾಲ್ಟಿನಗರಸಭಾ ಅಧ್ಯಕ್ಷ ಅಬ್ದುಲ್‌ ರಾಫ್‌ ನಿಝಾಮನಿ ಅವರ ಸಮ್ಮುಖದಲ್ಲಿ 60 ಹಿಂದೂಗಳಿಗೆ ಇಸ್ಲಾಂ ಪ್ರಮಾಣವಚನ

* ನನ್ನ ಸಮ್ಮುಖದಲ್ಲಿ ಇಸ್ಲಾಂ ಮತ ಸ್ವೀಕರಿಸಿದವರಿಗೆ ಒಳ್ಳೆಯದಾಗಲಿ

Pakistan 60 Hindus forcibly converted to Islam in Sindh pod
Author
Bangalore, First Published Jul 12, 2021, 12:35 PM IST
  • Facebook
  • Twitter
  • Whatsapp

ಇಸ್ಲಾಮಾಬಾದ್‌(ಜು.12): ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಮಾಲ್ಟಿಎಂಬಲ್ಲಿ 60ಕ್ಕೂ ಹೆಚ್ಚು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂಬ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಮಾಲ್ಟಿನಗರಸಭಾ ಅಧ್ಯಕ್ಷ ಅಬ್ದುಲ್‌ ರಾಫ್‌ ನಿಝಾಮನಿ ಅವರ ಸಮ್ಮುಖದಲ್ಲಿ 60 ಹಿಂದೂಗಳಿಗೆ ಇಸ್ಲಾಂ ಪ್ರಮಾಣವಚನ ಬೋಧಿಸಲಾಗಿದೆ. ಜೊತೆಗೆ, ‘ನನ್ನ ಸಮ್ಮುಖದಲ್ಲಿ ಇಸ್ಲಾಂ ಮತ ಸ್ವೀಕರಿಸಿದವರಿಗೆ ಒಳ್ಳೆಯದಾಗಲಿ’ ಎಂದು ಅಬ್ದುಲ್‌ ಕರೆ ಕೊಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.2ರಷ್ಟುಮಾತ್ರ ಇರುವ ಹಿಂದೂಗಳ ಪೈಕಿ ಬಹುತೇಕರು ಸಿಂಧ್‌ ಪ್ರಾಂತ್ಯದಲ್ಲೇ ನೆಲೆಸಿದ್ದಾರೆ. ಇದೀಗ ಅವರನ್ನು ಬಲವಂತವಾಗಿ ಮತಾಂತರಿಸುವ ಕೃತ್ಯಕ್ಕೆ ಪಾಕ್‌ ಮುಂದಾಗಿದೆ.

Follow Us:
Download App:
  • android
  • ios