ಇಸ್ಲಾಮಾಬಾದ್‌ (ಡಿ. 20): ದೇಶದ್ರೋಹ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪರ್ವೇಜ್‌ ಮುಷರ್ರಫ್‌, ಒಂದು ವೇಳೆ ಶಿಕ್ಷೆ ಜಾರಿಗೂ ಮುನ್ನವೇ ಸಾವನ್ನಪ್ಪಿದರೆ, ಅವರ ಶವವನ್ನು ಇಸ್ಲಾಮಾಬಾದ್‌ನಲ್ಲಿರುವ ಸೆಂಟ್ರಲ್‌ ಸ್ಕ್ವೇರ್‌ನಲ್ಲಿ ಮೂರು ದಿನ ನೇತುಹಾಕಬೇಕು ಎಂದು ಕೋರ್ಟ್‌ ಹೇಳಿದೆ.

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ!

ಮಾಜಿ ಅಧ್ಯಕ್ಷ ಮುಷರ್ರಫ್‌ಗೆ ಗಲ್ಲು ಶಿಕ್ಷೆ ಆದೇಶ ನೀಡಿದ್ದ ಪೇಶಾವರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ವಕಾರ್‌ ಅಹಮದ್‌ ಸೇಠ್‌ ಬರೆದಿದ್ದ 167 ಪುಟಗಳ ತೀರ್ಪಿನಲ್ಲಿ ಈ ಅಂಶವಿದೆ. ಮೃತ ದೇಹವನ್ನು ಇಸ್ಲಾಮಾಬಾದ್‌ನ ಡಿ- ಚೌಕ್‌ವರೆಗೂ ತಂದು, ಬಳಿಕ 3 ದಿನ ನೇತುಹಾಕಬೇಕು ಎಂದು ನ್ಯಾಯಮೂರ್ತಿ ಆದೇಶಿಸಿದ್ದಾರೆ.

ಜೈಲು ಪಾಲಾಗುವ ಭೀತಿಯಿಂದಲೇ ಮುಷರ್ರಫ್‌ 3 ವರ್ಷಗಳ ಹಿಂದೆಯೇ ದೇಶ ತೊರೆದು, ಹಾಲಿ ದುಬೈನಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮುಷರ್ರಫ್‌ ಸದ್ಯ ಆಸ್ಪತ್ರೆಯಲ್ಲಿದ್ದಾರೆ.