ಇಂಗ್ಲೆಂಡ್(ನ.23): ಕೊರೋನಾ ವೈರಸ್ ವಿರುದ್ಧ ಹೋರಾಡಲು ಆಕ್ಸ್‌ಫರ್ಡ್ ಈಗಾಗಲೇ ಲಸಿಕೆ ಅಭಿವೃದ್ಧಿಯಲ್ಲಿ ನಿರತವಾಗಿದೆ. ಸತತ ಪ್ರಯತ್ನ ಹಾಗೂ ಸಂಶೋಧನೆಗೆ ಫಲ ಸಿಕ್ಕಿದೆ. ಆಕ್ಸ್‌ಫರ್ಡ್ ಲಸಿಕೆ 2 ಡೋಸ್‌ನಲ್ಲಿ ಶೇಕಡಾ 70 ರಷ್ಟು ಪರಿಣಾಮಕಾರಿ ಅನ್ನೋದು ಪ್ರಯೋಗದಲ್ಲಿ ಸಾಬೀತಾಗಿದೆ. 

ಏಪ್ರಿಲ್‌ಗೆ ಆಕ್ಸ್‌ಫರ್ಡ್‌ ಲಸಿಕೆ ಮಾರುಕಟ್ಟೆಗೆ: 1000 ರೂ.ದರ?

ಆಕ್ಸ್‌ಫರ್ಡ್ ಯುನಿವರ್ಸಿಟಿ ಆತಂರಿಕ ಮಾಹಿತಿ ಬಹಿರಂಗ ಪಡಿಸಿದೆ. ಆಕ್ಸ್‌ಫರ್ಡ್ ಲಸಿಕೆ ಕೇವಲ 2 ಡೋಸೇಜ್‌ನಲ್ಲಿ ಕೊರೋನಾ ವಿರುದ್ಧ 70.4% ಪರಿಣಾಮಕಾರಿಯಾಗಿದೆ.  3 ಹಂತದ ಡೋಸೇಜ್ ಲಸಿಕೆ ತೆಗದುಕೊಂಡರೆ ಶೇಕಡಾ 90 ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಆಕ್ಸ್‌ಫರ್ಡ್ ಯುನಿವರ್ಸಿಟಿ ಹೇಳಿದೆ.

 

ಇನ್ನು ಆಕ್ಸ್‌ಫರ್ಡ್ ಲಸಿಕೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಜನಸಾಮಾನ್ಯರಿಗೂ ಸುಲಭವಾಗಿ ಸಿಗಲಿದೆ. ಆಕ್ಸ್‌ಫರ್ಡ್ ಯುನಿವರ್ಸಿಟಿ ಲಸಿಕೆ ಇದೀಗ ಕೊರೋನಾ ಸೋಂಕಿತರಿಗೆ ಅಶಾಕಿರಣವಾಗಿದೆ.