ಪೇಶಾವರ(ಫೆ.07): ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಭಾರತದ ಪ್ರಖ್ಯಾತ ನಟ ದಿಲಿಪ್‌ ಕುಮಾರ್‌ ಅವರ ಪೂರ್ವಜರಿಗೆ ಸೇರಿದ ಮನೆಗೆ ಅದರ ಹಾಲಿ ಮಾಲೀಕ 25 ಕೋಟಿ ರು. ಬೇಡಿಕೆ ಇಟ್ಟಿದ್ದಾರೆ.

ಒಟ್ಟಾರೆ 1087 ಚದರ ಅಡಿ ವ್ಯಾಪ್ತಿಯಲ್ಲಿರುವ ದಿಲಿಪ್‌ ಕುಮಾರ್‌ರ ಪೂರ್ವಜರಿಗೆ ಸೇರಿದ ನಿವಾಸವನ್ನು ಹಾಜಿ ಲಾಲ್‌ ಮೊಹಮ್ಮದ್‌ ಅವರು 2005ರಲ್ಲಿ 51 ಲಕ್ಷ ರು.ಗೆ ಕೊಟ್ಟು ಖರೀದಿಸಿದ್ದರು. ಇದಕ್ಕೆ ಇದೀಗ ಪ್ರಾಂತೀಯ ಸರ್ಕಾರವು 80.56 ಲಕ್ಷ ರು. ಬೆಲೆ ನಿಗದಿ ಮಾಡಿದ್ದು, ಅದನ್ನು ರಾಷ್ಟ್ರೀಯ ಪರಂಪರೆ ಕಟ್ಟಡ ಎಂದು ಘೋಷಣೆ ಮಾಡಿದೆ.

ಆದರೆ ಈ ಆಸ್ತಿಯನ್ನು 16 ವರ್ಷಗಳ ಹಿಂದೆಯೇ 51 ಲಕ್ಷ ರು. ನೀಡಿ ಖರೀದಿಸಿದ್ದೇನೆ. ಆದರೆ ಇದೀಗ ಈ ಆಸ್ತಿಗೆ ಸರ್ಕಾರ ಕೇವಲ 80 ಲಕ್ಷ ರು. ಬೆಲೆ ನಿಗದಿ ಮಾಡಿರುವುದು ಅನ್ಯಾಯ. ಈ ಆಸ್ತಿಗೆ 25 ಕೋಟಿ ರು. ಬೇಡಿಕೆ ಇಡುವುದಾಗಿ ಹಾಜಿ ಲಾಲ್‌ ಮೊಹಮ್ಮದ್‌ ತಿಳಿಸಿದ್ದಾರೆ.