2000 ವರ್ಷ ಬಳಿಕವೂ ಚೀನಾದಲ್ಲಿ ಸಂಸ್ಕೃತ ಜನಪ್ರಿಯ: ಚೀನೀ ಪಂಡಿತ!
ಭಾರತದ ಪುರಾತನ ಭಾಷೆ ಸಂಸ್ಕೃತ| 2000 ವರ್ಷ ಬಳಿಕವೂ ಚೀನಾದಲ್ಲಿ ಸಂಸ್ಕೃತ ಜನಪ್ರಿಯ: ಚೀನೀ ಪಂಡಿತ!
ಬೀಜಿಂಗ್(ಏ.12): ಭಾರತದ ಪುರಾತನ ಭಾಷೆ ಸಂಸ್ಕೃತ ಚೀನಾಗೆ ಬಂದು ಬರೋಬ್ಬರಿ 2000 ವರ್ಷಗಳು ಗತಿಸಿದರೂ ದೇಶದಲ್ಲಿ ಸಂಸ್ಕೃತ ಭಾಷೆ ಇನ್ನೂ ಜನಪ್ರಿಯವಾಗಿದೆ. ಚೀನಾ ಪ್ರಭುತ್ವ ಮತ್ತು ವಿದ್ವಾಂಸರ ಮೇಲೆ ಶತಮಾನಗಳಿಂದಲೂ ಪ್ರಭಾವ ಬೀರಿದೆ ಎಂದು ಇಲ್ಲಿನ ಪ್ರಸಿದ್ಧ ಪ್ರಾಧ್ಯಾಪಕ ವಾಂಗ್ ಬಾಂಗ್ವೈ ಅವರು ಅಭಿಪ್ರಾಯಪಟ್ಟಿದ್ದಾರೆ.
70 ವರ್ಷದ ವಿದ್ಯಾರ್ಥಿನಿಗೆ ಚಿನ್ನದ ಪದಕ!
ಬಾಂಬ್ವೈ ಅವರು ಚೀನಾ ಜನಪ್ರಿಯ ಸಂಸ್ಕೃತ ವಿದ್ವಾಂಸರೂ ಹೌದು. ತಾವಿರುವ ಪೇಕಿಂಗ್ ವಿಶ್ವವಿದ್ಯಾಲಯವು ಸಂಸ್ಕೃತವನ್ನು ಪಠ್ಯವಾಗಿ ಆರಂಭಿಸಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಚೀನಾಕ್ಕೆ ಸಂಸ್ಕೃತ ಭಾಷೆ ಪರಿಚಯಿಸಿದ ಕ್ರಿ.ಪೂ 4ನೇ ಶತಮಾನದ ಭಾರತೀಯ ವಿದ್ವಾಂಸ ಕಾಮರಾಜೀವ ಅವರಿಗೆ ಧನ್ಯವಾದ ಅರ್ಪಿಸಿದರು.
'ಸರ್ವೇ ಸಂತು ನಿರಾಮಯಃ' ಸಂಸ್ಕೃತ ಶ್ಲೋಕದೊಂದಿಗೆ 13 ನಗರ ತಲುಪಿದ ಲಸಿಕೆ
2000 ವರ್ಷಗಳ ಹಿಂದೆ ಕಾಶ್ಮೀರದ ಕಾಮರಾಜೀವ ಅವರು ಬೌದ್ಧ ಸೂತ್ರಗಳನ್ನು ಚೀನೀ ಭಾಷೆಗೆ ಭಾಷಾಂತರಿಸಿದ್ದರು. ಇದಾದ ನಂತರದಲ್ಲಿ ಚೀನಾದ ಬೌದ್ಧ ಭಿಕ್ಷುಕರು ಭಾರತದ ಪುಸ್ತಕಗಳನ್ನು ಚೀನಾ ಭಾಷೆಗೆ ಭಾಷಾಂತರಿಸಲು ಆರಂಭಿಸಿದರು. ಅಲ್ಲಿಂದ ಚೀನಾದಲ್ಲಿ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನೆ ಆರಂಭವಾಯಿತು