ಅಮೆರಿಕ ಅಧ್ಯಕ್ಷಗೆ ಭದ್ರತೆ ಕೊಡುವ ಸೀಕ್ರೆಟ್ ಸರ್ವಿಸ್‌ನಲ್ಲಿ ಕೊರೋನಾ, 130 ಸಿಬ್ಬಂದಿಗೆ ಸೋಂಕು!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೂತನ ಅಧ್ಯಕ್ಷ ಜೋ ಬೈಡೆನ್ ಹಾಗೂ ವೈಟ್ ಹೌಸ್‌ಗೆ ಭದ್ರತೆ ಒದಗಿಸುವ ಸಿಬ್ಬಂದಿಗೆ ಕೊರೋನಾ| 30ಕ್ಕೂ ಅಧಿಕ ಸೀಕ್ರೆಟ್ ಏಜೆಂಟ್‌ಗಳು ಕ್ವಾರಂಟೈನ್|
ವಾಷಿಂಗ್ಟನ್(ನ.14): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೂತನ ಅಧ್ಯಕ್ಷ ಜೋ ಬೈಡೆನ್ ಹಾಗೂ ವೈಟ್ ಹೌಸ್‌ಗೆ ಭದ್ರತೆ ಒದಗಿಸುವ ಅಮೆರಿಕದ ಸೀಕ್ರೆಟ್ ಸರ್ವಿಸ್ ಗಾರ್ಡ್‌ಗಳಿಗೆ ಕೊರೋನಾ ಸೋಂಕು ತಗುಲಿದೆ. ಅಮೆರಿಕದ ಮಾಧ್ಯಮ ಶುಕ್ರವಾರ ಈ ಮಾಹಿತಿ ಬಹಿರಂಗಪಡಿಸಿದೆ. ವಾಷಿಂಗ್ಟನ್ ಪೋಸ್ಟ್ ಅನ್ವಯ ಇಲ್ಲಿನ 130ಕ್ಕೂ ಅಧಿಕ ಸೀಕ್ರೆಟ್ ಏಜೆಂಟ್‌ಗಳು ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕರೆ ಬಂದ ಕಾರಣ ಅಥವಾ ಖುದ್ದು ಕೊರೋನಾ ಸೋಂಕು ತಗುಲಿದ ಪರಿಣಾಮ ಕ್ವಾರಂಟೈನ್‌ನಲ್ಲಿದ್ದಾರೆ.
ಈ ಸೀಕ್ರೆಟ್ ಸರ್ವಿಸ್‌ನ ಗಾರ್ಡ್‌ಗಳು ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ರ್ಯಾಲಿಗೆ ತೆರಳಿದ್ದ ವೇಳೆ ಅಧಿಕ ಮಂದಿ ಈ ಸೋಂಕಿಗೆ ಗಗುರಿಯಾಗಿದ್ದಾರೆ.ಇಲ್ಲಿ ಅನೇಕ ಅಧಿಕಾರಿಗಳು ಹಾಗೂ ಬಹುತೇಕ ಮಂದಿ ಮಾಸ್ಕ್ ಧರಿಸದೆ ಭಾಗಿಯಾಗಿದ್ದರು. ಸೋಂಕಿತ ಗಾರ್ಡ್‌ಗಳು ಕಳೆದ ಮೂರು ವಾರದಿಂದ ಶ್ವೇತ ಭವನದಲ್ಲಿ ನಡೆದ ಅನೆಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್ ಮೂರರಂದು ಎಲೆಕ್ಷನ್ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಇದರಲ್ಇ ಭಾಗವಹಿಸಿದ್ದ ಅನೇಕ ಮಂದಿ ಮಾಸ್ಕ್ ಧರಿಸದೆ ಬಂದಿದ್ದರು. ಹೀಗಾಗೇ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂಬ ಮಾತುಗಳೂ ಕೇಳಿ ಬಂದಿವೆ.