ಮಾರುತಿ ಕಾರಿನ ಪ್ರವರ್ತಕ ಒಸಾಮು ಸುಝುಕಿ ನಿಧನ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಝುಕಿಯ ರೂವಾರಿ ಒಸಾಮು ಸುಝುಕಿ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1982ರಲ್ಲಿ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಮಾರುತಿ ಉದ್ಯೋಗ್ ಎಂಬ ಕಂಪನಿಯನ್ನು ಆರಂಭಿಸಿದ್ದರು.
ಟೋಕಿಯೋ: ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಝುಕಿಯ ರೂವಾರಿ ಒಸಾಮು ಸುಝುಕಿ ಅವರು ಡಿ.25ರಂದು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುಝುಕಿ ಅವರ ಅಂತ್ಯಸಂಸ್ಕಾರವನ್ನು ಪರಿವಾರದ ಸಮ್ಮುಖದಲ್ಲಿ ನೆರವೇರಿಸಿದ್ದಾಗಿ ಅವರ ಹಿರಿಯ ಪುತ್ರ ತೊಶಿಹಿರೋ ಸುಝುಕಿ ಹೇಳಿದ್ದಾರೆ.
ಭಾರತಕ್ಕೆ ಮಾರುತಿ ಕಾರು ತಂದಿದ್ದರು:
1930ರ ಜ.30ರಂದು ಜಪಾನ್‌ನ ಜೆರೊದಲ್ಲಿ ಜನಿಸಿದ ಒಸಾಮು, ಬ್ಯಾಂಕ್ ಉದ್ಯೋಗಿಯಾಗಿದ್ದರು. ಬಳಿಕ 1958ರಲ್ಲಿ ತಮ್ಮ ಪತ್ನಿಯ ಅಜ್ಜ ಸ್ಥಾಪಿಸಿದ್ದ ಸುಝುಕಿ ಕಂಪನಿಯನ್ನು ಸೇರಿದ್ದು, ಅದೇ ಕಂಪನಿಯಲ್ಲಿ ಅಧ್ಯಕ್ಷ (1978), ಚೇರ್‌ಮನ್ (2000) ಹುದ್ದೆಗಳನ್ನಲಂಕರಿಸಿದ್ದರು. ಇವರ ಅವಧಿಯಲ್ಲಿ ಜನರಲ್ ಮೋಟಾರ್ಸ್, ವೋಕ್ಸ್‌ವ್ಯಾಗನ್‌ನಂತಹ ಕಂಪನಿಗಳೊಂದಿಗೆ ಕೈಜೋಡಿಸಿದ ಸುಝುಕಿ 1980ರ ದಶಕದಲ್ಲಿ ಭಾರತವನ್ನೂ ಪ್ರವೇಶಿಸಿತು.
ಇದನ್ನೂ ಓದಿ: 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಮಲಗಿದ್ದ ಸಿಂಗ್ ಎಬ್ಬಿಸಿ ಮಂತ್ರಿ ಮಾಡಿದರು!
1982ರಲ್ಲಿ ಭಾರತ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದನ್ವಯ ಮಾರುತಿ ಉದ್ಯೋಗ್ ಎಂಬ ಕಂಪನಿಯನ್ನು ಶುರು ಮಾಡಲಾಯಿತು. ಈ ಜಂಟಿ ಉದ್ಯಮದ ಫಲವಾಗಿ ಸೃಷ್ಟಿಯಾದ ಮಾರುತಿ 800 ಇಲ್ಲಿನ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಇಂದಿಗೂ ಮಾರುತಿ ಸುಝುಕಿ ಭಾರತದ ಅತಿ ದೊಡ್ಡ ಕಾರು ಉತ್ಪಾದಕವಾಗಿದೆ.
2016ರಲ್ಲಿ ಕಂಪನಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುಝುಕಿ ಆ ಬಳಿಕವೂ ಅದರ ಏಳಿಗೆಗೆ ಶ್ರಮಿಸಿದರು. ಮೂಲತಃ ಮತ್ಸುಡಾ ಕುಟುಂಬಕ್ಕೆ ಸೇರಿದ ಇವರು ತಮ್ಮ ಪತ್ನಿಯ ಕಡೆಯ ಉಪನಾಮವನ್ನು ಉಳಿಸಿಕೊಂಡದ್ದು ವಿಶೇಷ.
ಇದನ್ನೂ ಓದಿ: ಅಸ್ಸಾಂನಿಂದ ರಾಜ್ಯಸಭಾ ಸದಸ್ಯರಾಗಿದ್ದ ಸಮಯದಲ್ಲಿ ಮಾಜಿ ಸಿಎಂ ಸೈಕಿಯಾ ಮನೆಯಲ್ಲಿ ಬಾಡಿಗೆಗಿದ್ದ ಸಿಂಗ್