ಪಾಕ್‌ ಮಾಜಿ ಅಧ್ಯಕ್ಷಗೆ ಬಹು ಅಂಗಾಂಗ ವೈಫಲ್ಯ: ಪರ್ವೇಜ್ ಮುಷರಫ್ ಸ್ಥಿತಿ ಗಂಭೀರ

ಪಾಕಿಸ್ತಾನದ ಪದಚ್ಯುತ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಸ್ಥಿತಿ ಗಂಭೀರವಾಗಿದ್ದು, ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಅವರ ಆರೋಗ್ಯ ಅತ್ಯಂತ ವಿಷಮ ಸ್ಥಿತಿಯಲ್ಲಿದ್ದು, ಬದುಕಿ ಉಳಿಯುವ ಸಾಧ್ಯತೆ ತುಂಬಾ ಕ್ಷೀಣ’ ಎಂದು ಅವರ ಕುಟುಂಬದವರೇ ಹೇಳಿದೆ. 

Organs malfunctioning recovery not possible says Pervez Musharrafs family gvd

ಲಾಹೋರ್‌/ದುಬೈ (ಜೂ.11): ಪಾಕಿಸ್ತಾನದ ಪದಚ್ಯುತ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಸ್ಥಿತಿ ಗಂಭೀರವಾಗಿದ್ದು, ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಅವರ ಆರೋಗ್ಯ ಅತ್ಯಂತ ವಿಷಮ ಸ್ಥಿತಿಯಲ್ಲಿದ್ದು, ಬದುಕಿ ಉಳಿಯುವ ಸಾಧ್ಯತೆ ತುಂಬಾ ಕ್ಷೀಣ’ ಎಂದು ಅವರ ಕುಟುಂಬದವರೇ ಹೇಳಿದೆ. ಮುಷರ್ರಫ್‌ ದೇಹಸ್ಥಿತಿ ಬಗ್ಗೆ ಶುಕ್ರವಾರ ಸಂಜೆ ನಾನಾ ಪುಕಾರುಗಳು ಎದ್ದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರ ಕುಟುಂಬ ‘ಅಂಗಾಂಗಗಳನ್ನು ಬಾಧಿಸುವ ‘ಅಮಿಲಾಯ್ಡೊಸಿಸ್‌’ ಎಂಬ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. 

ಕಳೆದ 3 ವಾರದಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಆದರೆ ಈಗ ಅವರು ಚೇತರಿಸಿಕೊಳ್ಳಲು ಆಗದಂಥ ಸ್ಥಿತಿಗೆ ತಲುಪಿದ್ದಾರೆ.  ಅವರ ಅಂಗಾಂಗಗಳು ವಿಫಲಗೊಳ್ಳುತ್ತಿವೆ. ಅವರಿಗಾಗಿ ಪ್ರಾರ್ಥಿಸಿ’ ಎಂದು ಟ್ವೀಟರ್‌ನಲ್ಲಿ ಕೇಳಿಕೊಂಡಿದೆ. ಆದರೆ, ‘ಮುಷರ್ರಫ್‌ ವೆಂಟಿಲೇಟರ್‌ನಲ್ಲಿ ಇಲ್ಲ’ ಎಂದು ಕುಟುಂಬ ಸ್ಪಷ್ಟಪಡಿಸಿದೆ. ಅಮಿಲಾಯ್ಡೊಸಿಸ್‌ ಎಂಬುದು ಅಪರೂಪದ ಕಾಯಿಲೆ ಆಗಿದ್ದು, ದೇಹದ ಅಂಗಾಗಂಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ಪ್ರೊಟೀನ್‌ಗಳು ಸೃಷ್ಟಿಆಗುತ್ತವೆ ಹಾಗೂ ಅಂಗಾಂಗ ವೈಫಲ್ಯ ಸಂಭವಿಸುತ್ತದೆ. 

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ, ಸುದ್ದಿ ವೈರಲ್

ಇದಕ್ಕೂ ಮುನ್ನ ಮಾತನಾಡಿದ್ದ ಪಾಕ್‌ ವಾರ್ತಾ ಸಚಿವ ಫವಾದ್‌ ಚೌಧರಿ, ‘ಮುಷರ್ರಫ್‌ ವೆಂಟಿಲೇಟರ್‌ನಲ್ಲಿದ್ದಾರೆ’ ಎಂದಿದ್ದರು. ನವಾಜ್‌ ಷರೀಫ್‌ರನ್ನು 1999ರಲ್ಲಿ ಕ್ಷಿಪ್ರಕ್ರಾಂತಿ ಮೂಲಕ ಕೆಳಗಿಳಿಸಿ, ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಮುಷರ್ರಫ್‌ ಅವರು ಪಾಕ್‌ ಅಧ್ಯಕ್ಷರಾಗಿದ್ದರು. 1999ರಿಂದ 2008ರವರೆಗೆ ಪಾಕಿಸ್ತಾನ ಆಳಿದ್ದ ಮುಷರ್ರಫ್‌, ಪಾಕ್‌ನಲ್ಲಿ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದು, ದೇಶ ತೊರೆದು 2016ರಿಂದ ಯುಎಇನಲ್ಲಿ ವಾಸವಿದ್ದಾರೆ.

ದೆಹಲಿಯಲ್ಲಿ ಹುಟ್ಟಿದ್ದ ಮುಷರಫ್: ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ದೆಹಲಿಯಲ್ಲಿ ಜನಿಸಿದ್ದ ಪರ್ವೇಜ್ ಮುಷರಫ್, ಬಳಿಕ ಕರಾಚಿ ಹಾಗೂ ಇಸ್ತಾನ್ ಬುಲ್ ನಲ್ಲಿ ಬೆಳೆದರು.   ಅವರು ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಗಣಿತವನ್ನು ಅಧ್ಯಯನ ಮಾಡಿದರು ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿಯೂ ಶಿಕ್ಷಣ ಪಡೆದರು. ಪರ್ವೇಜ್ ಮುಷರಫ್ ಅವರು 1961 ರಲ್ಲಿ ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯನ್ನು ಪ್ರವೇಶಿಸಿದರು ಮತ್ತು 1964 ರಲ್ಲಿ ಪಾಕಿಸ್ತಾನದ ಸೇನೆಗೆ ನಿಯೋಜಿಸಲ್ಪಟ್ಟರು ಮತ್ತು ಅಫ್ಘಾನ್ ಆಂತರಿಕ ಯುದ್ಧದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.

ಪಾಕ್ ಮಾಜಿ ಅಧ್ಯಕ್ಷರನ್ನು ಭೇಟಿಯಾದ 'KGF-2' ನಟ ಸಂಜಯ್ ದತ್; ಫೋಟೋ ವೈರಲ್

ಸೆಪ್ಟೆಂಬರ್ 2001 ರಿಂದ 2007 ರಲ್ಲಿ ಮಿಲಿಟರಿಗೆ ರಾಜೀನಾಮೆ ನೀಡುವವರೆಗೆ, ಮುಷರಫ್ ಅವರ ಅಧ್ಯಕ್ಷ ಸ್ಥಾನವು ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಹಗರಣಗಳಿಂದ ಪ್ರಭಾವಿತವಾಗಿತ್ತು, ಇದು ದೇಶದಲ್ಲಿ ಮತ್ತು ಅಂತರರಾಷ್ಟ್ರೀಯ ಸಮುದಾಯದಲ್ಲಿ ಅವರ ಅಧಿಕಾರದ ಕುರಿತಾಗಿ ಪ್ರಶ್ನೆ ಎತ್ತುವಂತೆ ಮಾಡಿತ್ತು. ಅಕ್ಟೋಬರ್ 2001 ರಲ್ಲಿ, ಇಬ್ಬರು ಭೌತವಿಜ್ಞಾನಿಗಳಾದ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಮತ್ತು ಚೌಧರಿ ಅಬ್ದುಲ್ ಮಜೀದ್ ಅವರನ್ನು ಬಂಧಿಸಲು FIA ನೇತೃತ್ವದ ತಂಡಕ್ಕೆ ಆದೇಶ ನೀಡಿದ್ದರು. 2000ರಲ್ಲಿ ಇವರಿಬ್ಬರು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು ಎನ್ನುವ ಆರೋಪವನ್ನು ಮುಷರಫ್ ಮಾಡಿದ್ದರು.

Latest Videos
Follow Us:
Download App:
  • android
  • ios