ಪ್ರಧಾನಿ ಇಮ್ರಾನ್ ಖಾನ್ ಉಚ್ಚಾಟನೆಗೆ ಬಿಗಿ ಪಟ್ಟು; ಪಾಕಿಸ್ತಾನ ವಿರೋಧ ಪಕ್ಷಗಳ ಮೈತ್ರಿ!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಕ್ಷಣವೇ ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದೆ. ರಾಜೀನಾಮೆ ನೀಡದಿದ್ದರೆ ಉಚ್ಚಾಟನೆಗೆ ಪಾಕಿಸ್ತಾನ ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ.  ಇಷ್ಟೇ ಅಲ್ಲ ದೇಶವ್ಯಾಪಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.

Opposition parties launched an alliance and demand PM Imran Khan immediate resignation

ಇಸ್ಲಾಮಾಬಾದ್(ಸೆ.21): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉಚ್ಚಾಟನೆಗೆ ಪಾಕಿಸ್ತಾನ ವಿರೋಧ ಪಕ್ಷಗಳು ಒಂದಾಗಿದೆ. ಎಲ್ಲಾ ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಇದೀಗ ಪಾಕಿಸ್ತಾನದಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಇದೀಗ ಇಮ್ರಾನ್ ಖಾನ್ ಕುರ್ಚಿ ಅಲುಗಾಡುತ್ತಿದ್ದು, ಇಮ್ರಾನ್ ಖಾನ್ ಗಡಿ ವಿಚಾರ ಕೆಣಕುವ ಸಾಧ್ಯತೆ ಇದೆ.

ಕಾಶ್ಮೀರಕ್ಕಾಗಿ ನಿರಂತರ ಹೋರಾಟ; ಗುಡುಗಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!

ಪಾಕಿಸ್ತಾನ ಆಲ್ ಪಾರ್ಟಿ ಕಾನ್ಫೆರೆನ್ಸ್  ಆಯೋಜಿಸಿದ ಸಭೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಪಾಕಿಸ್ತಾನ ಮುಸ್ಲೀಂ ಲೀಗ್, ಜಾಮಿಯಾತ್ ಉಲೆಮಾ ಇ ಇಸ್ಲಾಂ, ಸೇರಿದಂತೆ ಹಲವು ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡು ಇಮ್ರಾನ್ ಖಾನ್ ಉಚ್ಚಾಟನೆಗೆ ನಿರ್ಧರಿಸಿದೆ. ಇಷ್ಟೇ ಅಲ್ಲ ಎಲ್ಲಾ ವಿರೋಧ ಪಕ್ಷಗಳು ಮೈತ್ರಿ ಮಾಟಿಕೊಂಡು, ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (PDM) ಒಕ್ಕೂಟ ಆರಂಭಿಸಿದೆ.

ಇಮ್ರಾನ್ ಜನಪ್ರಿಯತೆ ಕುಸಿತ: ಪಾಕ್‌ ಸರ್ಕಾರ ಮತ್ತೆ ಸೇನೆ ಹಿಡಿತಕ್ಕೆ?

ಪ್ರಧಾನಿ ಇಮ್ರಾನ್ ಖಾನ್ ಆಡಳಿತಕ್ಕೇರಲು ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ.  ಅಸಮರ್ಪಕ ಆಡಳಿತ ಅಂತ್ಯಗೊಳಿಸಬೇಕು, ಮತ್ತೆ ಚುನಾವಣೆ ನಡೆಸಬೇಕು. ನ್ಯಾಯಸಮ್ಮತವಾದ ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು PDM ಒಕ್ಕೂಟ ಜನಾಂದಲೋನ ನೆಡಸಲು ಮುಂದಾಗಿದೆ.

ಪಾಕಿಸ್ತಾನ ಸೇನೆಯನ್ನು ಉಲ್ಲೇಖಿಸಿ,  ದೇಶದ ಆಂತರಿಕ ವ್ಯವಹಾರಗಳಲ್ಲಿ ಹೆಚ್ಚುತ್ತಿರುವ ಹಸ್ತಕ್ಷೇಪ ಹಾಗೂ ಇದರಿನಿಂದ ನಿರ್ಮಾಣವಾಗಿರುವ ಆತಂಕ ಪರಿಸ್ಥಿತಿ ರಾಷ್ಟ್ರದ ಸ್ಥಿರತೆ ಹಾಗೂ ಆಡಳಿತಕ್ಕೆ ಅಪಾಯ ಎಂದು PDM ಹೇಳಿದೆ. ಇಮ್ರಾನ್ ಖಾನಾ ತಕ್ಷಣವೇ ರಾಜೀನಾಮೆ ನೀಡಬೇಕು. ಇದು ಸಾಧ್ಯವಾಗದಿದ್ದರೆ, ವಿರೋಧ ಪಕ್ಷಗಳ ಮೈತ್ರಿ ಕೂಟ ಇಮ್ರಾನ್ ಖಾನ್ ಉಚ್ಚಾಟನೆ ಮಾಡಲಿದೆ ಎಂದಿದೆ

ಮೈತ್ರಿ ಕೂಟ ಇದಕ್ಕಾಗಿ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿ  ಪ್ರತಿಭಟನೆಗಳು ಹಂತ ಹಂತವಾಗಿ ಪ್ರಾರಂಭಿಸಲಿದ್ದೇವೆ. ಮೊದಲ ಹಂತ ಆಕ್ಟೋಬರ್‌ನಲ್ಲಿ, ಎರಡನೇ ಹಂತದ ಪ್ರತಿಭಟನೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಬೃಹತ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಯಲಿದೆ ಎಂದು  ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ ಎಚ್ಚರಿಕೆ ನೀಡಿದೆ.

Latest Videos
Follow Us:
Download App:
  • android
  • ios