* ಎಲ್ಲಾ ನಾಲ್ಕೂ ಡೋಸ್‌ ಬೇರೆ ಬೇರೆ ಕಂಪನಿಗಳದ್ದು* ಒಮಿಕ್ರೋನ್‌ ತಡೆಗೆ ಇಸ್ರೇಲ್‌, ಜರ್ಮನಿಯಲ್ಲಿ 4ನೇ ಡೋಸ್‌ 

ಫ್ರಾಂಕ್‌ಫರ್ಟ್‌(ಡಿ.24): ಒಮಿಕ್ರೋನ್‌ ವೈರಸ್‌ ಅನ್ನು ಯಶಸ್ವಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ 4 ಡೋಸ್‌ ಲಸಿಕೆ ನೀಡಲು ಇಸ್ರೇಲ್‌ ಮತ್ತು ಜರ್ಮನಿ ಸರ್ಕಾರಗಳು ನಿರ್ಧರಿಸಿದೆ. ಮತ್ತೊಂದೆಡೆ ಬ್ರಿಟನ್‌ ಕೂಡಾ ಇದೇ ಹಾದಿ ಹಿಡಿಯುವ ಸುಳಿವು ನೀಡಿದೆ.

Add Asianetnews Kannada as a Preferred SourcegooglePreferred

ಲಸಿಕೆ ವಿತರಣೆಯಲ್ಲಿ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿರುವ ಇಸ್ರೇಲ್‌ನಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆದ್ಯತೆ ಮೇರೆಗೆ 4ನೇ ಡೋಸ್‌ ಲಸಿಕೆ ನೀಡಲು ಆರಂಭಿಸಲಾಗಿದೆ. ದೇಶದಲ್ಲಿ ಪ್ರಸಕ್ತ ನಿತ್ಯ ಸರಾಸರಿ 1000ದ ಆಸುಪಾಸಿನ ಕೇಸು ದಾಖಲಾಗುತ್ತಿದ್ದು, 1-10 ಸಾವು ದಾಖಲಾಗುತ್ತಿದೆ. ಸೋಂಕು, ಸಾವು ಕಡಿಮೆ ಇದ್ದರೂ, ಒಮಿಕ್ರೋನ್ನಿಂದ ದೇಶ ಜನತೆ ರಕ್ಷಣೆಗೆ 4ನೇ ಡೋಸ್‌ಗೆ ಮೊರೆ ಹೋಗಲಾಗಿದೆ ಎಂದು ಸರ್ಕಾರ ಹೇಳಿದೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ ಜರ್ಮನಿಯ ಆರೋಗ್ಯ ಸಚಿವ ಕಾಲ್‌ರ್‍ ಲಾಟರ್‌ಬ್ಯಾಚ್‌, ‘ಜನವರಿ ಮಧ್ಯ ಭಾಗದ ವೇಳೆ ದೇಶದಲ್ಲಿ ಒಮಿಕ್ರೋನ್‌ ಅತಿ ಹೆಚ್ಚು ಹಬ್ಬಿದ ವೈರಸ್‌ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಒಮಿಕ್ರೋನ್‌ ವೈರಸ್‌ ಅನ್ನು ಯಶಸ್ವಿಯಾಗಿ ತಡೆಯಲು 4ನೇ ಡೋಸ್‌ ಅಗತ್ಯವಿದೆ. ಹೀಗಾಗಿ ನಾವು 4ನೇ ಡೋಸ್‌ ನೀಡಲು ನಿರ್ಧರಿಸಿದ್ದೇವೆ ಎಂದು ಪ್ರಕಟಿಸಿದ್ದಾರೆ. ದೇಶದಲ್ಲಿ 3ನೇ ಡೋಸ್‌ ಆಗಿ ಮಾರ್ಡೆನಾ ನೀಡಲಾಗಿತ್ತು. ಆದರೆ ಇದೀಗ 4ನೇ ಡೋಸ್‌ ಆಗಿ ನೀಡಲು ಬಯೋಎನ್‌ ಟೆಕ್‌, ನೋವಾವ್ಯಾಕ್ಸ್‌, ವಾಲ್‌ನೇವಾ ಲಸಿಕೆಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಲು ಆರ್ಡರ್‌ ಸಲ್ಲಿಸಿದೆ.

ದೇಶದಲ್ಲಿ ನಿತ್ಯ ಸರಾಸರಿ 45000ಕ್ಕೂ ಹೆಚ್ಚು ಕೇಸು ದಾಖಲಾಗುತ್ತಿದ್ದು, 400-500 ಜನರು ಸಾವನ್ನಪ್ಪುತ್ತಿದ್ದಾರೆ. ಇದುವರೆಗೂ 69 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 1.10 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಚೀನಾದಲ್ಲಿ ಮತ್ತೆ ಕೊರೋನಾ ಹಾಹಾಕಾರ

ಒಮಿಕ್ರೋನ್‌ ವೈರಸ್‌ ಅನ್ನು ಯಶಸ್ವಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ 4 ಡೋಸ್‌ ಲಸಿಕೆ ನೀಡಲು ಇಸ್ರೇಲ್‌ ಮತ್ತು ಜರ್ಮನಿ ಸರ್ಕಾರಗಳು ನಿರ್ಧರಿಸಿದೆ. ಮತ್ತೊಂದೆಡೆ ಬ್ರಿಟನ್‌ ಕೂಡಾ ಇದೇ ಹಾದಿ ಹಿಡಿಯುವ ಸುಳಿವು ನೀಡಿದೆ.