Asianet Suvarna News Asianet Suvarna News

ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ: ಇಸ್ರೇಲ್!

* ಕದ್ದಾಲಿಕೆ ಆರೋಪ ಬೆನ್ನಲ್ಲೇ ಪೆಗಾಸಸ್‌ ನಿರ್ಮಾತೃ ಸಮರ್ಥನೆ

* ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ

* ಟೀಕಾಕಾರರನ್ನು ಕದ್ದಾಲಿಸುವುದು ಕಳವಳಕಾರಿ: ಅಮೆರಿಕ ಅತೃಪ್ತಿ

NSO says Pegasus helps millions to sleep well at night walk safely on streets pod
Author
Bangalore, First Published Jul 25, 2021, 9:16 AM IST

ಜೆರುಸಲೇಂ/ವಾಷಿಂಗ್ಟನ್‌(ಜು.25): ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ದೇಶದಲ್ಲಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವಾಗಲೇ, ಆ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸಿದ ಇಸ್ರೇಲಿ ಕಂಪನಿ ಎನ್‌ಎಸ್‌ಒ ಪ್ರಬಲವಾಗಿ ಸಮರ್ಥಿಸಿಕೊಂಡಿದೆ. ವಿಶ್ವಾದ್ಯಂತ ಕೋಟ್ಯಂತರ ಜನರು ನೆಮ್ಮದಿಯಿಂದ ಮಲಗಲು ಹಾಗೂ ಬೀದಿಗಳಲ್ಲಿ ಸುರಕ್ಷಿತವಾಗಿ ನಡೆದಾಡುತ್ತಿರುವುದಕ್ಕೆ ಪೆಗಾಸಸ್‌ನಂತಹ ಸಾಫ್ಟ್‌ವೇರ್‌ಗಳು ಕಾರಣ ಎಂದು ಹೇಳಿದೆ.

ಎನ್‌ಎಸ್‌ಒ ವಕ್ತಾರರು ಈ ಬಗ್ಗೆ ಮಾತನಾಡಿ, ‘ಪೆಗಾಸಸ್‌ ತಂತ್ರಜ್ಞಾನವನ್ನು ನಾವು ಬಳಸುತ್ತಿಲ್ಲ ಅಥವಾ ಗ್ರಾಹಕರು ಸಂಗ್ರಹಿಸುವ ದತ್ತಾಂಶಕ್ಕೂ ನಮಗೆ ಸಂಪರ್ಕ ಇಲ್ಲ. ವಿಶ್ವಾದ್ಯಂತ ಇರುವ ತನಿಖಾ ಸಂಸ್ಥೆಗಳು ಹಾಗೂ ಗುಪ್ತಚರ ಸಂಸ್ಥೆಗಳಿಗೆ ಈ ತಂತ್ರಾಂಶಗಳು ನೆರವಾಗುತ್ತಿವೆ. ಅಪರಾಧ, ಭಯೋತ್ಪಾದನೆ, ಶಿಶುಕಾಮ ಜಾಲಗಳು ಗೂಢಲಿಪಿ ಆ್ಯಪ್‌ಗಳನ್ನು ಬಳಸಿ ಅವಿತಿದ್ದು, ಅವುಗಳ ತನಿಖೆ ನಡೆಸಲು ಸಹಾಯಕವಾಗುತ್ತಿವೆ’ ಎಂದು ತಿಳಿಸಿದೆ.

ಬೇಹುಗಾರಿಕೆಗೆ ಅಮೆರಿಕ ಆಕ್ಷೇಪ:

ಆದರೆ ಅಮೆರಿಕ ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದೆ. ‘ನಾಗರಿಕ ಸಮಾಜ, ಸರ್ಕಾರದ ಟೀಕಾಕಾರರು ಹಾಗೂ ಪತ್ರಕರ್ತರನ್ನು ನ್ಯಾಯಾಂಗೇತರ ವಿಧಾನಗಳನ್ನು ಬಳಸಿ ಬೇಹುಗಾರಿಕೆ ನಡೆಸುವುದರ ವಿರುದ್ಧ ನಾವೂ ಇದ್ದೇವೆ. ಇದು ಕಳವಳಕಾರಿ. ಭಾರತದಲ್ಲಿನ ಪೆಗಾಸಸ್‌ ಬೇಹುಗಾರಿಕೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ’ ಎಂದು ಹೇಳಿದೆ.

Follow Us:
Download App:
  • android
  • ios