ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಮೆರಿಕದಲ್ಲಿ ಬುಧವಾರ ವಿಮಾನ ಸೇವೆಯನ್ನು ಬಂದ್‌ ಮಾಡಲಾಗಿದೆ. ಅಮೆರಿಕಕ್ಕೆ ಬರುವ, ಹೋಗುವ ಹಾಗೂ ಅಮೆರಿಕದ ಒಳಗೆ ಸಂಚಾರ ಮಾಡುವ 400ಕ್ಕೂ ಅಧಿಕ ವಿಮಾನಗಳನ್ನು ಕೆಳಗಿಳಿಸಲಾಗಿದೆ. 

ವಾಷಿಂಗ್ಟನ್‌ (ಜ. 11): ನೋಟಿಸ್‌ ಟು ಏರ್‌ ಮಿಷನ್ಸ್‌ (ಎನ್‌ಓಟಿಎಎಂ) ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಮೆರಿಕದಲ್ಲಿ ಬುಧವಾರ ಎಲ್ಲಾ ವಿಮಾನಗಳು ಸ್ಥಗಿತಗೊಂಡಿವೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಕನಿಷ್ಠ 760 ವಿಮಾನಗಳ ವಿಳಂಬವಾಗಿ ಅಮೆರಿಕಕ್ಕೆ ಪ್ರಯಾಣ ಮಾಡುತ್ತಿವೆ ಅಥವಾ ಕೆಲ ಸಮಯದ ಮಟ್ಟಿಗೆ ಭೂಮಿಯ ಮೇಲೆಯೇ ಇರಲಿದೆ. ಅಮೆರಿಕದ ನಾಗರಿಕ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ ಕೂಡ ಇದನ್ನು ಖಚಿತಪಡಿಸಿದೆ. ಫೆಡರಲ್ ಏವಿಯೇಷನ್ ಏಜೆನ್ಸಿ ಈ ಕುರಿತಾಗಿ ಮುನ್ನೆಚ್ಚರಿಕೆ ನೋಟಿಸ್‌ ಅನ್ನು ನೀಡಿದೆ. ನೋಟಮ್ (ವಿಮಾನ ಕಾರ್ಯಾಚರಣೆಗಳಿಗೆ ಸೂಚನೆ) ವ್ಯವಸ್ಥೆಯು 'ವಿಫಲವಾಗಿದೆ'. ಅದು ಯಾವಾಗ ಸರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಶೀಘ್ರ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Scroll to load tweet…


ಎನ್‌ಬಿಸಿ ನ್ಯೂಸ್ ಪ್ರಕಾರ, ಸುಮಾರು 400 ವಿಮಾನಗಳು ನಿಗದಿತ ಪ್ರದೇಶ ತಲುಪುವುದು ವಿಳಂಬವಾಗುತ್ತಿವೆ. ಇವುಗಳಲ್ಲಿ ದೇಶೀಯ ಮತ್ತು ಸಾಗರೋತ್ತರ ವಿಮಾನ ಕಾರ್ಯಾಚರಣೆಗಳು ಸೇರಿವೆ. ಅಮೆರಿಕ ಕಾಲಮಾನದ ಪ್ರಕಾರ ಬೆಳಗ್ಗೆ 5.31ರ ಸುಮಾರಿಗೆ ಈ ತಾಂತ್ರಿಕ ದೋಷ ಬೆಳಕಿಗೆ ಬಂದಿದೆ. ಆದರೆ, ಇದಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ತಾಂತ್ರಿಕ ಸಿಬ್ಬಂದಿ ವ್ಯವಸ್ಥೆಯನ್ನು ದುರಸ್ತಿ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಏವಿಯೇಷನ್‌ನ ವೆಬ್‌ಸೈಟ್‌ ತಿಳಿಸಿದೆ.

ಆಕಾಶದಲ್ಲಿ ವಿಮಾನ ಹಾರಾಟ: ವಿಮಾನದೊಳಗೆ ಪ್ರಯಾಣಿಕರ ಹೋರಾಟ

ಇದುವರೆಗೆ 760 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಅಥವಾ ವಿಳಂಬಗೊಳಿಸಲಾಗಿದೆ. ಫ್ಲೈಟ್ ಟ್ರ್ಯಾಕರ್ FlightAware.com ಪ್ರಕಾರ, 91 ವಿಮಾನಗಳನ್ನು ರದ್ದುಗೊಳಿಸಲಾಗಿದೆ. 'ಕಂಪ್ಯೂಟರ್ ಸಿಸ್ಟಮ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಇದು ಸಂಭವಿಸಿದೆ. ಈಗಾಗಲೇ ಸಮಸ್ಯೆ ಏನು ಎನ್ನುವುದು ಹೊತ್ತಾಗಿದೆ. ಶೀಘ್ರದಲ್ಲೇ ವಿಮಾನ ಕಾರ್ಯಾಚರಣೆಯನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಎಫ್‌ಎಎ ಹೊಸ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟಲ್ಲಿ ಗೋ‌ ಫಸ್ಟ್ ಏರ್ಲೈನ್ಸ್ ನಿರ್ಲಕ್ಷ್ಯ, ಪ್ರಯಾಣಿಕರಿಂದ ಭಾರೀ ಆಕ್ರೋಶ

ನೋಟಮ್‌ ಎಂದರೇನು?: ಏರ್ ಮಿಷನ್‌ಗಳಿಗೆ ಸೂಚನೆಯು ಅಥವಾ ನೋಟಮ್‌, ಸಂಪೂರ್ಣ ವಿಮಾನ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದೆ. ಇದರ ಮೂಲಕವೇ ವಿಮಾನಗಳು ಟೇಕಾಫ್ ಅಥವಾ ಲ್ಯಾಂಡಿಂಗ್ ಬಗ್ಗೆ ಮಾಹಿತಿ ಪಡೆಯುತ್ತವೆ. ನೋಟಮ್‌ ನೈಜ ಸಮಯದ ಡೇಟಾವನ್ನು ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಏರ್‌ಪೋರ್ಟ್ ಕಾರ್ಯಾಚರಣೆಗಳು ಅಥವಾ ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ ನೀಡುತ್ತದೆ. ಇದರ ನಂತರ ಎಟಿಸಿ ಅದನ್ನು ಪೈಲಟ್‌ಗಳಿಗೆ ರವಾನಿಸುತ್ತದೆ. ನೈಸರ್ಗಿಕ ವಿಕೋಪಗಳು ಮತ್ತು ಇತರ ಸಮಸ್ಯೆಗಳನ್ನು ಸಹ ಈ ವ್ಯವಸ್ಥೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.