ಅಯ್ಯೋ ದೇವಾ... 10 ದಿನಗಳ ಕಾಲ ನಗುವುದಕ್ಕೂ ನಿಷೇಧ ಹೇರಿದ North Korea
- ನಗುವುದಕ್ಕೂ ನಿಷೇಧ ಹೇರಿದ ಉತ್ತರ ಕೊರಿಯಾ
- ಇಲ್ಲಿನ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಇಲ್ 10 ನೇ ಪುಣ್ಯತಿಥಿ ಹಿನ್ನೆಲೆ
- 10 ದಿನ ನಾಗರಿಕರ ನಗುವಿಗೂ ನಿಷೇಧ ಹೇರಿದ ಉತ್ತರ ಕೊರಿಯಾ
ಉತ್ತರ ಕೊರಿಯಾ(ಡಿ .17): ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗಿರುವ ಉತ್ತರ ಕೊರಿಯಾದಲ್ಲಿ ದಿನಕ್ಕೊಂದು ಚಿತ್ರ ವಿಚಿತ್ರ ಕಾನೂನುಗಳು ಜಾರಿಗೆ ಬರುತ್ತಿವೆ. ಇಲ್ಲಿನ ಮಾಜಿ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಇಲ್(Kim Jong Il) ಅವರ ನಿಧನದ 10ನೇ ಪುಣ್ಯ ತಿಥಿ ಸಲುವಾಗಿ ಇನ್ನು 10 ದಿನಗಳ ಕಾಲ ಉತ್ತರ ಕೊರಿಯಾದಲ್ಲಿ ಯಾರೂ ನಗುವಂತಿಲ್ಲ. ಇಂದು(ಡಿ. 17) ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ ಪುಣ್ಯ ತಿಥಿ. ಈ ಹಿನ್ನೆಲೆ ನಗುವುದು ಸೇರಿದಂತೆ ದೇಶದ ನಾಗರಿಕರಿಗೆ ಹಲವು ಕಾರ್ಯಗಳಿಗೆ ಇಲ್ಲಿನ ಸರ್ವಾಧಿಕಾರಿ ಆಡಳಿತವೂ ನಿಷೇಧ ಹೇರಿದೆ.
"
ಇನ್ನು 10 ದಿನಗಳ ಕಾಲ ಉತ್ತರ ಕೊರಿಯನ್ನರು ಮದ್ಯಪಾನ ಮಾಡುವುದು ನಗುವುದು, ದಿನಸಿಗಾಗಿ ಶಾಪಿಂಗ್ ಮಾಡುವುದು ಅಥವಾ ವಿರಾಮ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. 10 ದಿನಗಳ ಶೋಕಾಚರಣೆಯ ಅವಧಿಯಲ್ಲಿ ನಿಷೇಧದ ಯಾವುದೇ ಉಲ್ಲಂಘನೆ ಮಾಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾಗರಿಕರಿಗೆ ಇಲ್ಲಿನ ಸರ್ವಾಧಿಕಾರಿ ಆಡಳಿತ ಎಚ್ಚರಿಕೆ ನೀಡಿದೆ.
ಈ ಹಿಂದೆ ಶೋಕಾಚರಣೆಯ ಸಮಯದಲ್ಲಿ ಮದ್ಯಪಾನ ಮಾಡಿ ಅಥವಾ ಕುಡಿದು ಸಿಕ್ಕಿಬಿದ್ದ ಅನೇಕರನ್ನು ಬಂಧಿಸಿ ಸೈದ್ಧಾಂತಿಕ ಅಪರಾಧಿಗಳೆಂದು ಪರಿಗಣಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಉತ್ತರ ಕೊರಿಯಾದ ನಾಗರಿಕರೊಬ್ಬರು ಹೇಳಿದ್ದಾರೆ. ಮದ್ಯಪಾನ ಮಾಡಿದ ಅನೇಕರನ್ನು ಅಂದು ಕರೆದೊಯ್ಯಲಾಯಿತು ಮತ್ತೆಂದು ಅವರನ್ನು ನಾವು ನೋಡಿಲ್ಲ. ಶೋಕಾಚರಣೆಯ ಅವಧಿಯಲ್ಲಿ, ಅಂತ್ಯಕ್ರಿಯೆಯ ವಿಧಿಗಳು ಅಥವಾ ಸೇವೆಗಳನ್ನು ಕೈಗೊಳ್ಳಲು ಅಥವಾ ಜನ್ಮದಿನಗಳನ್ನು ಆಚರಿಸಲು ಕೂಡ ಯಾರಿಗೂ ಅನುಮತಿ ಇಲ್ಲ.
Kim Jong Un: ಉ. ಕೊರಿಯಾದಲ್ಲಿ ಲೆದರ್ ಜಾಕೆಟ್ ಬ್ಯಾನ್, ಕಿಮ್ ಫ್ಯಾಷನ್ ಕಾಪಿ ಮಾಡ್ತಾರಂತ ಈ ಆದೇಶ!
ಆದಾಗ್ಯೂ, ಶೋಕಾಚರಣೆಯ ಅವಧಿಗೆ ಜನರಿಗೆ ಸೂಕ್ತ ಮನಸ್ಥಿತಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪೊಲೀಸರು ತಿಂಗಳ ಆರಂಭದಲ್ಲಿಯೇ ಇದೇ ರೀತಿಯ ಆದೇಶವನ್ನು ವಿಧಿಸಿದ್ದಾರೆ ಎಂದು ಸುದ್ದಿ ಮೂಲವೊಂದು ಹೇಳಿದೆ. ಉತ್ತರ ಕೊರಿಯಾ ಕಿಮ್ ಜಾಂಗ್ ಇಲ್ ಅವರ ಜೀವನವನ್ನು ಸ್ಮರಿಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದೆ. ಇವುಗಳಲ್ಲಿ ಅವರ ಛಾಯಾಗ್ರಹಣ ಮತ್ತು ಕಲೆಯ ಸಾರ್ವಜನಿಕ ಪ್ರದರ್ಶನ, ಸಂಗೀತ ಕಚೇರಿ ಮತ್ತು ಅವರ ಹೆಸರಿನಿಂದ ಕರೆಯುವ ಹೂವಾದ 'ಕಿಮ್‌ಜೊಂಗಿಲಿಯಾ'ದ ಪ್ರದರ್ಶನ ಇದೆ ಎಂದು ಸರ್ವಾಧಿಕಾರಿ ಕಿಂಗ್ ಜಾಂಗ್ ಉನ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ನಿಷೇಧಿತ ಚಲನಚಿತ್ರವನ್ನು ಐದು ನಿಮಿಷಗಳ ಕಾಲ ವೀಕ್ಷಿಸಿದ್ದಕ್ಕಾಗಿ ಹದಿಹರೆಯದ ಬಾಲಕನಿಗೆ 14 ವರ್ಷಗಳ ಜೈಲು ಶಿಕ್ಷೆ ( prison) ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿತ್ತು. ಅಲ್ಲಿನ ಯಂಗನ್ ಪ್ರಾಂತ್ಯದ ವಿದ್ಯಾರ್ಥಿಯೊಬ್ಬ ದಕ್ಷಿಣ ಕೊರಿಯಾದ (South Korea) ‘ದ ಅಂಕಲ್’ (The Uncle) ಎಂಬ ಸಿನಿಮಾ ನೋಡಿದ್ದೇ ಮಹಾ ಅಪರಾಧವಾಗಿ, ತಮ್ಮ ವಿರೋಧಿ ದೇಶದ ಸಿನಿಮಾ ನೋಡಿದ ಅಪರಾಧಕ್ಕಾಗಿ ಈ ಶಿಕ್ಷೆಯಾಗಿದೆ. ಹುಡುಗನನ್ನು (Student) ನವಂಬರ್ 30ರಂದು, ಹೈಸಾನ್ ಸಿಟಿಯ ಪ್ರಾಥಮಿಕ ಮತ್ತು ಮಧ್ಯಮ ಶಾಲೆಯಲ್ಲಿ ಚಲನಚಿತ್ರ ವೀಕ್ಷಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
North Korea: ಶತ್ರು ದೇಶದ ಸಿನೆಮಾ ವೀಕ್ಷಿಸಿದ ಬಾಲಕನಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ!
ದಕ್ಷಿಣ ಕೊರಿಯಾ ಹಾಗೂ ಅಮೆರಿಕಗಳನ್ನು ತನ್ನ ಪರಮ ವೈರಿಗಳು ಎಂದು ಪರಿಗಣಿಸಿರುವ ಉತ್ತರ ಕೊರಿಯಾದಲ್ಲಿ, ಆ ದೇಶಗಳ ಸಾಂಸ್ಕೃತಿಕ ಸರಕುಗಳನ್ನು ನಿಷೇಧಿಸಲಾಗಿದೆ. ಇಂಥ ಸರಕುಗಳ ಆಮದು ಅಥವಾ ಬಳಕೆ ಕಂಡು ಬಂದಲ್ಲಿ ತೀವ್ರ ಶಿಕ್ಷೆ ನೀಡುವ ಕಾನೂನು ಅಲ್ಲಿದೆ. ದಕ್ಷಿಣ ಕೊರಿಯಾದ ಚಿತ್ರಗಳ ರೆಕಾರ್ಡಿಂಗ್‌ಗಳು, ಪುಸ್ತಕಗಳು, ಹಾಡುಗಳು, ಚಿತ್ರಗಳು ಹಾಗೂ ಫೋಟೋಗಳನ್ನು ನೇರವಾಗಿ ವೀಕ್ಷಿಸಿದವರಿಗೆ, ಆಲಿಸಿದವರಿಗೆ ಮಾತ್ರವಲ್ಲ ಇಟ್ಟುಕೊಂಡವರಿಗೆ ಕೂಡ ಐದಕ್ಕಿಂತ 15 ವರ್ಷಗಳವರೆಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಅಲ್ಲಿ ಕಾನೂನಿದೆ.