North Korea: ಶತ್ರು ದೇಶದ ಸಿನೆಮಾ ವೀಕ್ಷಿಸಿದ ಬಾಲಕನಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ!
- ದಕ್ಷಿಣ ಕೊರಿಯಾದ ನಿಷೇಧಿತ ಚಲನಚಿತ್ರವನ್ನು ಐದು ನಿಮಿಷಗಳ ಕಾಲ ವೀಕ್ಷಿಸಿದ್ದ ಹದಿಹರೆಯದ ಬಾಲಕ
- ಶತ್ರು ದೇಶದ ಸಿನೆಮಾ ವೀಕ್ಷಿಸಿದ್ದಕ್ಕೆ ಉತ್ತರ ಕೊರಿಯಾ ಬಾಲಕನಿಗೆ ಜೈಲು
- 5 ನಿಮಿಷ ಸಿನಿಮಾ ನೋಡಿದ್ದೇ ಮಹಾ ಅಪರಾಧವಾಯ್ತು!
ಸಿಯೋಲ್ (ಡಿ.6): ಉತ್ತರ ಕೊರಿಯಾ (North Korea) ತನ್ನ ವಿಚಿತ್ರ ನಿಯಮಗಳಿಗೆ ಹೆಸರುವಾಸಿಯಾಗಿದೆ. ಇದೀಗ ನಿಷೇಧಿತ ಚಲನಚಿತ್ರವನ್ನು ಐದು ನಿಮಿಷಗಳ ಕಾಲ ವೀಕ್ಷಿಸಿದ್ದಕ್ಕಾಗಿ ಹದಿಹರೆಯದ ಬಾಲಕನಿಗೆ 14 ವರ್ಷಗಳ ಜೈಲು ಶಿಕ್ಷೆ ( prison) ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ ನಡೆದಿದೆ. ಅಲ್ಲಿನ ಯಂಗನ್ ಪ್ರಾಂತ್ಯದ ವಿದ್ಯಾರ್ಥಿಯೊಬ್ಬ ದಕ್ಷಿಣ ಕೊರಿಯಾದ (South Korea) ‘ದ ಅಂಕಲ್’ (The Uncle) ಎಂಬ ಸಿನಿಮಾ ನೋಡಿದ್ದೇ ಮಹಾ ಅಪರಾಧವಾಗಿ, ತಮ್ಮ ವಿರೋಧಿ ದೇಶದ ಸಿನಿಮಾ ನೋಡಿದ ಅಪರಾಧಕ್ಕಾಗಿ ಈ ಶಿಕ್ಷೆಯಾಗಿದೆ. ಹುಡುಗನನ್ನು (Student) ನವಂಬರ್ 30ರಂದು, ಹೈಸಾನ್ ಸಿಟಿಯ ಪ್ರಾಥಮಿಕ ಮತ್ತು ಮಧ್ಯಮ ಶಾಲೆಯಲ್ಲಿ ಚಲನಚಿತ್ರ ವೀಕ್ಷಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ದಕ್ಷಿಣ ಕೊರಿಯಾ ಹಾಗೂ ಅಮೆರಿಕಗಳನ್ನು ತನ್ನ ಪರಮ ವೈರಿಗಳು ಎಂದು ಪರಿಗಣಿಸಿರುವ ಉತ್ತರ ಕೊರಿಯಾದಲ್ಲಿ, ಆ ದೇಶಗಳ ಸಾಂಸ್ಕೃತಿಕ ಸರಕುಗಳನ್ನು ನಿಷೇಧಿಸಲಾಗಿದೆ. ಇಂಥ ಸರಕುಗಳ ಆಮದು ಅಥವಾ ಬಳಕೆ ಕಂಡು ಬಂದಲ್ಲಿ ತೀವ್ರ ಶಿಕ್ಷೆ ನೀಡುವ ಕಾನೂನು ಅಲ್ಲಿದೆ.
Kim Jong Un: ಉ. ಕೊರಿಯಾದಲ್ಲಿ ಲೆದರ್ ಜಾಕೆಟ್ ಬ್ಯಾನ್, ಕಿಮ್ ಫ್ಯಾಷನ್ ಕಾಪಿ ಮಾಡ್ತಾರಂತ ಈ ಆದೇಶ!
"ದಕ್ಷಿಣ ಕೊರಿಯಾದ ಚಿತ್ರಗಳ ರೆಕಾರ್ಡಿಂಗ್‌ಗಳು, ಪುಸ್ತಕಗಳು, ಹಾಡುಗಳು, ಚಿತ್ರಗಳು ಹಾಗೂ ಫೋಟೋಗಳನ್ನು ನೇರವಾಗಿ ವೀಕ್ಷಿಸಿದ, ಆಲಿಸಿದವರಿಗೆ ಮಾತ್ರವಲ್ಲ ಇಟ್ಟುಕೊಂಡವರಿಗೆ ಕೂಡ ಐದಕ್ಕಿಂತ 15 ವರ್ಷಗಳವರೆಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ," ಎಂದು ಕಾನೂನಿದೆ.
ಕಳೆಗುಂದಿದ ಮುಖ: ಕಿಮ್‌ಜಾಂಗ್ ಆರೋಗ್ಯದ ಬಗ್ಗೆ ಆತಂಕ!
ಸರ್ವಾಧಿಕಾರಿಯ ವಿಚಿತ್ರ ನಿಯಮಗಳು: ಉತ್ತರ ಕೊರಿಯಾ ಹುಚ್ಚುಚ್ಚು ಆದೇಶಗಳಿಗೆ ಹೆಸರುವಾಸಿ. ಇಷ್ಟು ಮಾತ್ರವಲ್ಲ ಅನೇಕ ವಿಚಾರಗಳು ಉತ್ತರ ಕೊರಿಯಾದಲ್ಲಿ ನಿಷೇಧದಲ್ಲಿದೆ. ಇಲ್ಲಿ ಜನರು ಲೆದರ ಕೋಟ್ ಧರಿಸಿದರೆ ಶಿಕ್ಷೆಗೆ ಗುರಿಯಾಗುತ್ತಾರೆ. ಏಕೆಂದರೆ ಲೆದರ್ ಕೋಟ್ ಧರಿಸುವುದು ಆಡಳಿತಗಾರ ಕಿಮ್ ಜಾಂಗ್ ಉನ್ ನ ಪ್ರಧಾನ ಶೈಲಿಯಾಗಿವೆ.ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರ ಫ್ಯಾಷನ್ ಅನ್ನು ಯಾರೂ ನಕಲು ಮಾಡಬಾರದು ಎಂದು ಈ ನಿಯಮವನ್ನು ಜಾರಿಗೆ ತರಲಾಗಿದೆ.
ಕಾಫಿ 7,000 ರೂ, ಬಾಳೆ ಹಣ್ಣಿಗೆ 3,300 ರೂ; ಆಹಾರ ಕ್ಷಾಮಕ್ಕೆ ತತ್ತರಿಸಿದ ಉ.ಕೊರಿಯಾ ಜನ!
2019 ರಲ್ಲಿ ಜನಪ್ರಿಯವಾದ ಲೆದರ್ ಟ್ರೆಂಚ್ ಕೋಟ್: 2019 ರಲ್ಲಿ ಮೊದಲು ಕಿಮ್ ಈ ಕೋಟ್ ಧರಿಸಿದ್ದ. ಬಳಿಕ ಇದು ಶ್ರೀಮಂತ ವರ್ಗದಲ್ಲಿ ಜನಪ್ರಿಯವಾಯಿತು. ಹೆಚ್ಚಿನ ಸಂಖ್ಯೆಯ ಜನರು ಚೀನಾದಿಂದ ಅಂತಹ ಕೋಟ್‌ಗಳನ್ನು ಆರ್ಡರ್ ಮಾಡಲು ಪ್ರಾರಂಭಿಸಿದರು. ದಿ ಸ್ಟಾರ್‌ನ ವರದಿಯ ಪ್ರಕಾರ, ಅಂತಹ ಕೋಟ್ ಧರಿಸಿರುವುದು ಕಿಮ್ ಜಾಂಗ್‌ಗೆ (Kim Jong Un) ಅವಮಾನವಾಗಿದೆ. ಬಂಡವಾಳಶಾಹಿ ಜೀವನಶೈಲಿ ಮತ್ತು ಯುವಕರ ಮೇಲೆ ಪಾಶ್ಚಿಮಾತ್ಯ ದೇಶಗಳ ಪ್ರಭಾವಗಳ ಬೀರಬಾರದು ಎಂಬ ಉದ್ದೇಶದಿಂದ ಕಿಮ್ ಜಾನ್ ಜೀನ್ಸ್, ಹಚ್ಚೆ ಹಾಕಿಸಿಕೊಳ್ಳುವುದು, ಕ್ರೀಡಾ ಹೇರ್ ಸ್ಟೈಲ್ ಮುಂತಾದವುಗಳಿಗೆ ನಿಷೇಧ ಹೇರಿದ್ದಾನೆ.
ಲೈಂಗಿಕ ತೃಪ್ತಿಗಾಗಿ ಮಹಿಳಾ ಸ್ಕ್ವಾಡ್ ಇಟ್ಟುಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ!
ಆಹಾರ ಬಿಕ್ಕಟ್ಟು: ದೇಶದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು ಎದುರಾಗಿದ್ದು, ಜನರು 2025 ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಕಿಮ್ ಜಾಂಗ್ ಉನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದ. ಕೋವಿಡ್ನಿಂದ ತತ್ತರಿಸಿರುವ ಕೊರಿಯಾಗೆ ಇತ್ತೀಚೆಗೆ ಸುರಿದ ಭಾರಿ ಮಳೆಯು ದೊಡ್ಡ ಹೊಡೆತ ನೀಡಿದೆ. ಅತಿವೃಷ್ಟಿಯಿಂದಾಗಿ ಬೆಳೆಗಳು ನೆಲಕಚ್ಚಿದ್ದು, ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ. ಹಣಕಾಸಿನ ಕೊರತೆಯಿಂದಾಗಿ ಹೊರ ದೇಶಗಳಿಂದಲೂ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಲ್ಲದೇ ಕಿಮ್ ಜಾಂಗ್ ಉನ್ ಅವರ ವರ್ತನೆಯಿಂದಾಗಿ ಅಂತರಾಷ್ಟ್ರೀಯ ನಿರ್ಬಂಧಗಳನ್ನೂ ಎದುರಿಸುತ್ತಿದ್ದು, ಕಳೆದ ದಶಕದಲ್ಲಿ ಉತ್ತರ ಕೊರಿಯಾದ ಪರಿಸ್ಥಿತಿ ಹದಗೆಟ್ಟು ಹೋಗಿದೆ.