Asianet Suvarna News Asianet Suvarna News

ಸರ್ವಾಧಿಕಾರಿ ಕಿಮ್ ಜಾಂಗ್ ಆರೋಗ್ಯ ಗಂಭೀರ, ಮಾಹಿತಿ ಬಹಿರಂಗ ಪಡಿಸಿದ ಸೋದರಿ!

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೀವ್ರ ಅಸ್ವಸ್ಥಗೊಂಡಿದ್ದಾರೆ. ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿಮ್ ಜಾಂಗ್ ಉನ್ ಆರೋಗ್ಯ ಮಾಹಿತಿಯನ್ನು ಸರ್ವಾಧಿಕಾರಿ ಸಹೋದರಿ ಬಹಿರಂಗ ಪಡಿಸಿದ್ದಾರೆ.
 

North Korea Supreme Leader Kim Jong Un suffer from High fever sister reveals health Update ckm
Author
Bengaluru, First Published Aug 11, 2022, 7:16 PM IST

ಉ.ಕೊರಿಯಾ(ಆ.11): ಉತ್ತರ ಕೊರಿಯಾ ಸರ್ವಾಧಿಕಾರಿ ಕಿನ್ ಜಾಂಗ್ ಉನ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಉತ್ತರ ಕೊರಿಯಾದಲ್ಲಿ ಕೋವಿಡ್ ಸ್ಫೋಟಕ ಬೆನ್ನಲ್ಲೇ ಕಿನ್ ಜಾಂಗ್ ಉನ್ ಆರೋಗ್ಯ ಕ್ಷೀಣಿಸಿದೆ. ಉತ್ತರ ಕೊರಿಯಾದಲ್ಲೀಗ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಇದರ ನಡುವೆ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಕೂಡ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಿಮ್ ಜಾಂಗ್ ಉನ್ ಆರೋಗ್ಯ ಕುರಿತು ಸ್ವತಃ ಜಾಂಗ್ ಸಹೋದರಿ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಆದರೆ ಕಿಮ್ ಜಾಂಗ್ ಉನ್‌ರಲ್ಲಿ ಕೋವಿಡ್ ಕಾಣಿಸಿಕೊಂಡಿದೆಯಾ ಅನ್ನೋ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ಕಿಮ್ ಜಾಂಗ್ ಉನ್ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸರ್ವಾಧಿಕಾರಿ ಸಹೋದರಿ ಕಿಮ್ ಯೋ ಜೊಂಗ್ ಆರೋಗ್ಯದ ಕುರಿತ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕೋವಿಡ್ ಮೊದಲ ಅಲೆ ಬಳಿ ಕಿಮ್ ಜಾಂಗ್ ಉನ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿರಲಿಲ್ಲ. ಕಿಮ್ ಜಾಂಗ್ ಉನ್ ಕೂಡ ಯಾವುದೇ ಸಮಾರಂಭಗಳಲ್ಲಿ, ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಮಾತುಗಳಿಗೆ ಪುಷ್ಠಿ ಸಿಕ್ಕಿತ್ತು. ಆದರೆ ಈ ಬಾರಿ ಕಿಮ್ ಜಾಂಗ್ ಉನ್ ಆರೋಗ್ಯ ಕುರಿತು ಸ್ವತಃ ಸಹೋದರಿ ಮಾಹಿತಿ ನೀಡಿದ್ದಾರೆ. ಕಿಮ್ ಜಾಂಗ್ ಉನ್ ಗಂಭೀರವಾಗಿ ಆಸ್ವಸ್ಥಗೊಂಡಿದ್ದಾರೆ. ಆದರೆ ಜನರ ಮೇಲಿನ ಕಾಳಜಿಯಿಂದ ಒಂದು ಕ್ಷಣ ವಿಶ್ರಾಂತಿ ಪಡೆಯಲು ಇಚ್ಚಿಸುತ್ತಿಲ್ಲ ಎಂದು ಸಹೋದರಿ ಹೇಳಿದ್ದಾರೆ .

ಕಿಮ್ ಆಡೋ ಸಾವಿನ ಆಟದ ಭಯಾನಕ ವಿಡಿಯೋ !

ಕಿಮ್ ಜಾಂಗ್ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಂಡು ಜನರ ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸಹೋದರಿ ಹೇಳಿದ್ದಾರೆ. ಅಲ್ಲಿಯವರೆಗೆ ಎಲ್ಲರೂ ಜಾಗರೂಕತೆಯಿಂದ ಇರಬೇಕು. ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಜನರ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ. ಹೀಗಾಗಿ ಕಿಮ್ ಜಾಂಗ್ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಜನರು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು ಎಂದಿದ್ದಾರೆ. 

ಕಳೆದೊಂದು ವರ್ಷದಿಂದ ಕಿಮ್ ಜಾಂಗ್ ಉನ್ ಆರೋಗ್ಯ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಹೆಚ್ಚು ತೂಕ ಹಾಗೂ ನಿರಂತರವಾಗಿ ಧೂಮಪಾನ ಮಾಡುವ ಕಿಮ್ ಜಾಂಗ್ ಉನ್ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಕಿಮ್ ಜಾನ್ ಮತ್ತೆ ಅಧಿಕಾರ ನಡೆಸುವುದು ಅಸಾಧ್ಯದ ಮಾತು ಅನ್ನೋ ಮಾತುಗಳು ಕೇಳಿಬಂದಿದೆ. ಕಳೆದ ತಿಂಗಳ ಕಿಮ್ ಜಾಂಗ್ 17 ದಿನ ಮಾಧ್ಯ, ಸಭೆ , ಸಮಾರಂಭಗಳಿಂದ ದೂರ ಉಳಿದಿದ್ದರು. ಆದರೆ ಕಳೆದ ಬುಧವಾರ ನಡೆದ ಆಡಳಿತರೂಢ ಪಕ್ಷದ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕ್ವಾರಂಟೈನ್ ಯುದ್ಧ ಗೆದ್ದಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಕುರಿತು ಸೂಕ್ಷ್ಮವಾಗಿ ಹೇಳಿದ್ದರು. 

ಹೊಸ ಜಾಹೀರಾತಿನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ: ಬಿಳಿ ಕುದುರೆ ಏರಿದ ಕಿಮ್ ಜಾಂಗ್ ಸಂದೇಶವೇನು?

ಇದೀಗ ಜ್ವರದಿಂದ ಬಳಲುತ್ತಿರುವ ಮಾಹಿತಿ ಬಹಿರಂಗವಾಗಿರುವ ಕಾರಣ ಕಿಮ್ ಜಾಂಗ್ ಉನ್ ಮತ್ತೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
 

Follow Us:
Download App:
  • android
  • ios