ಮಹಿಳಾ ಕಾರ್ಮಿಕರ ಸಂಶೋಧನೆಗೆ ಹಾರ್ವರ್ಡ್‌ ವಿವಿ ಪ್ರೊಫೆಸರ್‌ಗೆ ಅರ್ಥಶಾಸ್ತ್ರ ನೊಬೆಲ್‌, ಜಗತ್ತಿನ 3ನೇ ಮಹಿಳೆ

ಮಹಿಳಾ ಕಾರ್ಮಿಕರ ಕುರಿತು ಸಂಶೋಧನೆ ನಡೆಸಿದ ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಅರ್ಥಶಾಸ್ತ್ರ ನೊಬೆಲ್‌ ಲಭಿಸಿದೆ. ಈ ಪುರಸ್ಕಾರಕ್ಕೆ ಭಾಜನರಾದ 3ನೇ ಮಹಿಳೆ ಕ್ಲಾಡಿಯಾ ಆಗಿದ್ದಾರೆ.  

Nobel Prize in economics goes to Harvard University professor Claudia Goldin gow

ಸ್ಟಾಕ್‌ಹೋಮ್‌ (ಅ.10): ಮಹಿಳಾ ಕಾರ್ಮಿಕರ ಕುರಿತು ಸಂಶೋಧನೆ ನಡೆಸಿದ ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕ್ಲಾಡಿಯಾ ಗೋಲ್ಡಿನ್‌ ಎಂಬುವರಿಗೆ ಈ ಸಾಲಿನ ಪ್ರತಿಷ್ಠಿತ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಕ್ಲಾಡಿಯಾ (77) ಸಂಶೋಧನೆ ನಡೆಸಿದ್ದಾರೆ. ಇವರು ಜಗತ್ತಿನಲ್ಲೇ ಅರ್ಥಶಾಸ್ತ್ರದ ನೊಬೆಲ್‌ ಪಡೆಯುತ್ತಿರುವ 3ನೇ ಮಹಿಳೆಯಾಗಿದ್ದಾರೆ. ಸ್ಟಾಕ್‌ಹೋಮ್‌ನ ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್‌ ಸೈನ್ಸಸ್‌ 8 ಕೋಟಿ ರು. ಮೊತ್ತದ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ನೀಡುತ್ತದೆ.

31 ವರ್ಷ ಶಿಕ್ಷೆಗೊಳಗಾಗಿ ಜೈಲಲ್ಲಿರುವ ಇರಾನ್‌ ಮಹಿಳಾ ಹಕ್ಕುಗಳ ಹೋರಾಟಗಾರ್ತಿಗೆ ನೊಬೆಲ್

ಸಂಶೋಧನೆ ಏನು?: ‘ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಸಮಾಜಕ್ಕೆ ಬಹಳ ಮುಖ್ಯ. ಮಹಿಳೆಯರಿಗೆ ಈ ವಿಷಯದಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಕ್ಲಾಡಿಯಾ ಅತ್ಯಂತ ಮುಖ್ಯವಾದ ಸಂಶೋಧನೆ ಮಾಡಿದ್ದಾರೆ. ಅವರು ಎತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ’ ಎಂದು ಪ್ರಶಸ್ತಿಯನ್ನು ಪ್ರಕಟಿಸುವಾಗ ರಾಯಲ್‌ ಸ್ವೀಡಿಶ್‌ ಅಕಾಡೆಮಿ ಹೇಳಿದೆ.

ಆಗ ಕೆಮಿಸ್ಟ್ರಿಯಲ್ಲಿ ಫೇಲ್‌ : ಈಗ ರಸಾಯನಶಾಸ್ತ್ರದಲ್ಲಿ ನೊಬೆಲ್‌: ವಿಜ್ಞಾನಿ ಬವೆಂಡಿ ರೋಚಕ ಕಹಾನಿ

ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರು ಹಾಗೂ ಪುರುಷರ ನಡುವೆ ಇರುವ ಅಂತರ, ಹೇಗೆ ಅದು ಕಾಲಕ್ರಮೇಣ ಕಡಿಮೆಯಾಗಿದೆ, ಈಗಲೂ ಮಹಿಳೆಯರು ಹೇಗೆ ತಾರತಮ್ಯ ಎದುರಿಸುತ್ತಿದ್ದಾರೆ, ಈ ಸಮಸ್ಯೆ ಎಷ್ಟು ಸಂಕೀರ್ಣವಾದುದು, ಅದಕ್ಕೆ ಕಾರಣವೇನು ಎಂಬುದನ್ನು ಕ್ಲಾಡಿಯಾ ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios