Asianet Suvarna News Asianet Suvarna News

ಭಾರತದಲ್ಲಿ ಸಿಖ್ಖರು ಪೇಟ ಧರಿಸಲಿಕ್ಕೂ ಆಗ್ತಿಲ್ಲ, ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಎಂಬುದಿಲ್ಲ: ರಾಹುಲ್‌ ಗಾಂಧಿ

ರಾಹುಲ್‌ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಆರ್‌.ಪಿ. ಸಿಂಗ್‌ ಹಾಗೂ ಕೇಂದ್ರ ಸಚಿವ ಹರ್ದೀಪ್‌ ಪುರಿ, ‘1984ರಲ್ಲಿ ಸಿಖ್‌ ಹತ್ಯಾಕಾಂಡ ನಡೆಸಿದ ಕಾಂಗ್ರೆಸ್‌ ಪಕ್ಷವೇ ಇದೀಗ ಓಲೈಕೆ ರಾಜಕಾರಣಕ್ಕಾಗಿ ಇಂಥ ಮಾತುಗಳನ್ನು ಆಡುತ್ತಿದೆ. ರಾಹುಲ್‌ಗೆ ಧೈರ್ಯವಿದ್ದರೆ ಭಾರತಕ್ಕೆ ಬಂದು ಈ ಮಾತುಗಳನ್ನು ಪುನರುಚ್ಚರಿಸಲಿ. ಅವರನ್ನು ನ್ಯಾಯಾಲಯದ ಮೆಟ್ಟಿಲೇರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

no religious freedom in India Says  Leader of Opposition in Lok Sabha Rahul Gandhi grg
Author
First Published Sep 11, 2024, 4:45 AM IST | Last Updated Sep 11, 2024, 4:45 AM IST

ವಾಷಿಂಗ್ಟನ್‌(ಸೆ.11):  ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಕೆಲವು ಸಂಘಟನೆಗಳು ವರ್ಷ ವರ್ಷ ಸಲ್ಲದ ಆರೋಪ ಮಾಡುತ್ತಿರುವ ನಡುವೆಯೇ, ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅವರು ‘ಸಿಖ್‌ ಸಮುದಾಯಕ್ಕೆ ಪೇಟ ಧರಿಸಲು ಅವಕಾಶ ನೀಡುತ್ತಿಲ್ಲ’ ಎಂದು ಉದಾಹರಣೆ ನೀಡಿದ್ದಾರೆ.

ರಾಹುಲ್‌ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಆರ್‌.ಪಿ. ಸಿಂಗ್‌ ಹಾಗೂ ಕೇಂದ್ರ ಸಚಿವ ಹರ್ದೀಪ್‌ ಪುರಿ, ‘1984ರಲ್ಲಿ ಸಿಖ್‌ ಹತ್ಯಾಕಾಂಡ ನಡೆಸಿದ ಕಾಂಗ್ರೆಸ್‌ ಪಕ್ಷವೇ ಇದೀಗ ಓಲೈಕೆ ರಾಜಕಾರಣಕ್ಕಾಗಿ ಇಂಥ ಮಾತುಗಳನ್ನು ಆಡುತ್ತಿದೆ. ರಾಹುಲ್‌ಗೆ ಧೈರ್ಯವಿದ್ದರೆ ಭಾರತಕ್ಕೆ ಬಂದು ಈ ಮಾತುಗಳನ್ನು ಪುನರುಚ್ಚರಿಸಲಿ. ಅವರನ್ನು ನ್ಯಾಯಾಲಯದ ಮೆಟ್ಟಿಲೇರಿಸುತ್ತೇವೆ’ ಎಂದು ಸವಾಲು ಹಾಕಿದ್ದಾರೆ.

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇದೆ, ಚೀನಾದಲ್ಲಿ ಇಲ್ಲ: ರಾಹುಲ್‌ ಗಾಂಧಿ

ವರ್ಜೀನಿಯಾದ ಹೆರ್ನ್‌ಡಾನ್‌ನಲ್ಲಿ ಸಿಖ್‌ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಭಾರತದಲ್ಲೀಗ ಯುದ್ಧ ನಡೆಯುತ್ತಿರುವುದು ಸಿಖ್ಖರಿಗೆ ಪೇಟ ಧರಿಸಲು ಅವಕಾಶ ನೀಡಬೇಕೋ? ಬೇಡವೋ? ಎಂಬುದರ ಬಗ್ಗೆ. ಸಿಖ್ಖರಿಗೆ ಕಡಾ ಧರಿಸಲು ಅವಕಾಶ ನೀಡಬೇಕೋ? ಬೇಡವೋ? ಎಂಬುದರ ಬಗ್ಗೆ. ಇಂಥದ್ದರ ಬಗ್ಗೆಯೇ ಇದೀಗ ಭಾರತದಲ್ಲಿ ಯುದ್ಧ ನಡೆಯುತ್ತಿದೆ. ಜೊತೆಗೆ ಇದು ಕೇವಲ ಸಿಖ್ಖರಿಗೆ ಮಾತ್ರ ಸಂಬಂಧಪಟ್ಟಿಲ್ಲ. ಬದಲಾಗಿ ಎಲ್ಲಾ ಧರ್ಮೀಯರಿಗೂ ಹೀಗೆ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ’ ಎಂದಿದ್ದಾರೆ.

ಬಿಜೆಪಿ ತಿರುಗೇಟು:

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌.ಪಿ.ಸಿಂಗ್‌, 1984ರಲ್ಲಿ 3000ಕ್ಕೂ ಹೆಚ್ಚು ಸಿಖ್ಖರ ಪೇಟಾ ಕಿತ್ತೆಸೆದು, ಅವರ ಗಡ್ಡ ಬೋಳಿಸಿ ಅವರನ್ನು ಹತ್ಯೆ ಮಾಡಲಾಯಿತು. ಆದರೆ ತಮ್ಮದೇ ಸರ್ಕಾರದ ಅವಧಿಯ ಇತಿಹಾಸದ ಈ ಪುಟಗಳ ಬಗ್ಗೆ ರಾಹುಲ್‌ ಪ್ರಸ್ತಾಪ ಮಾಡಲಿಲ್ಲ. ನಿಮಗೆ ಧೈರ್ಯವಿದ್ದರೆ ಇದೇ ಮಾತುಗಳನ್ನು ಭಾರತದಲ್ಲಿ ಬಂದು ಪುನರುಚ್ಚಾರ ಮಾಡಿ. ನಾನು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ ಮೆಟ್ಟಿಲೇರಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ಪಾಕಿಸ್ತಾನದಲ್ಲಿ ಧರ್ಮ ಬದಲಿಸುತ್ತಿರೋ ಜನರು; ಹೆಚ್ಚಾಗ್ತಿದೆ ಹಿಂದೂಗಳ ಸಂಖ್ಯೆ!

ಇನ್ನು ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್ ಪುರಿ ಮಾತನಾಡಿ ‘ನಾನು 6 ದಶಕಗಳಿಂದ ಹೆಮ್ಮೆಯಿಂದ ಪೇಟಾ ಧರಿಸುತ್ತಿದ್ದೇನೆ. ಅದಕ್ಕಿಂತ ಹೆಚ್ಚಿನ ಸಮಯದಿಂದ ಕಡ ಧರಿಸುತ್ತಿದ್ದೇನೆ. ನಮ್ಮ ಸರ್ಕಾರ ಸಿಖ್‌ ಸಮುದಾಯದ ಇತರೆ ಸಮಸ್ಯೆಗಳನ್ನೂ ಬಗೆಹರಿಸಿದೆ. ಸಿಖ್‌ ಸಮುದಾಯ ಹಿಂದೆಂದಿಗಿಂತ ಈಗ ಹೆಚ್ಚು ಸುರಕ್ಷಿತ ಭಾವನೆಯಲ್ಲಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮಾತನಾಡಿ, ‘ಸಿಖ್‌ ಹತ್ಯಾಕಾಂಡ ಇತಿಹಾಸದ ಹೊಂದಿರುವ ಕಾಂಗ್ರೆಸ್‌ ಇಂದು ನಮಗೆ ನೀತಿಪಾಠ ಮಾಡುತ್ತಿದೆ. 99 ಸೀಟು ಗೆಲ್ಲಲಾದವರು 400 ಸೀಟು ಗೆಲ್ಲುವ ಮಾತುಗಳನ್ನು ಮಾಡುತ್ತಿದ್ದಾರೆ’ ಎಂದು ರಾಹುಲ್‌ ವಿರುದ್ಧ ಹರಿಹಾಯ್ದಿದ್ದಾರೆ.

Latest Videos
Follow Us:
Download App:
  • android
  • ios