ಭಾರತ ಹಾಗೂ ಪಾಕಿಸ್ತಾನ ಯುದ್ಧದ ನಡುವೆ ಮೂಗು ತೂರಿಸಿ ಮುಖಭಂಗ ಅನುಭವಿಸಿದ್ದ ಡೋನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ ಇರಾನ್ ನಡುವೆ ಕದನ ವಿರಾಮ ಘೋಷಿಸಿ ಮತ್ತೆ ಮುಖಂಭ ಅನುಭವಿಸಿದ್ದಾರೆ.
ನವದೆಹಲಿ (ಜೂ.24) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ಇಸ್ರೇಲ್ ಹಾಗೂ ಇರಾನ್ ಎರಡೂ ದೇಶಗಳು ಸಂಪೂರ್ಣ ಕದನ ವಿರಾಮ ಒಪ್ಪಿಕೊಂಡಿದೆ ಎಂದು ಡೋನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವ ನೀಡಿದ ಖಡಕ್ ಉತ್ತರಿಂದ ಟ್ರಂಪ್ ಮುಖಭಂಗ ಅನುಭವಿಸಿದ್ದಾರೆ. ಕದನ ವಿರಾಮ ಕುರಿತು ಯಾವುದೇ ಒಪ್ಪಿಗೆ ಸೂಚಿಸಿಲ್ಲ. ಯಾವ ಕದನ ವಿರಾಮವೂ ಇಲ್ಲ. ಆದರೆ ಇಸ್ರೇಲ್ ಅಪ್ರಚೋದಿತ ಹಾಗೂ ಅಕ್ರಮ ದಾಳಿಯನ್ನು ನಿಲ್ಲಿಸಿದೆ. ಹೀಗಾಗಿ ನಾವು ಪ್ರತಿ ದಾಳಿ ಮಾಡಿಲ್ಲ ಅಷ್ಟೇ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಗ್ಚಿ ಹೇಳಿದ್ದಾರೆ.
ಇರಾನ್ ಸ್ಪಷ್ಟನೆ ಏನು?
ನಾವು ಈಗಲೂ ಸ್ಪಷ್ಟವಾಗಿ ಹೇಳುತ್ತಿದ್ದೇವೆ, ನಾವು ಯುದ್ಧ ಆರಂಭಿಸಿಲ್ಲ. ಇಸ್ರೇಲ್ ಮೊದಲು ನಮ್ಮ ಮೇಲೆ ಅನಗತ್ಯವಾಗಿ ದಾಳಿ ಆರಂಭಿಸಿತ್ತು. ನಾವು ಈ ಯುದ್ಧ ಆರಂಭಿಸಿಲ್ಲ. ಸದ್ಯದ ಕ್ಷಣದ ವರೆಗೆ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ. ಆದರೆ ಇಸ್ರೇಲ್ ಸೇನೆಗಳು ದಾಳಿಯನ್ನು ನಿಲ್ಲಿಸಿದೆ. ಬೆಳಗಿನ ಜಾವ 4 ಗಂಟೆಯಿಂದ (ಟೆಹ್ರಾನ್ ಸಮಯ) ಇಸ್ರೇಲ್ ಇರಾನ್ ಮೇಲ ದಾಳಿ ಮಾಡಿಲ್ಲ. ದಾಳಿ ಮಾಡಿದ ಕಾರಣ ನಮಗೆ ಪ್ರತಿ ದಾಳಿ ಮಾಡುವ ಯಾವುದೇ ಉದ್ದೇಶವಿಲ್ಲ. ಕದನ ವಿರಾಮ ಕುರಿತ ಒಪ್ಪಂದವನ್ನು ಇರಾನ್ ಮಿಲಿಟರಿ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಸೈಯದ್ ಅಬ್ಬಾಸ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕೊನೆಯ ಉಸಿರಿನವರೆಗೆ ಹೋರಾಟ ಖಚಿತ
ಇಸ್ರೇಲ್ ದಾಳಿ ನಿಲ್ಲಿಸಿದ ಕಾರಣ ನಾವು ಪ್ರತಿ ದಾಳಿ ನಿಲ್ಲಿಸಿದ್ದೇವೆ ಎಂದು ಸೈಯದ್ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ. ಇಸ್ರೇಲ್ ಆಕ್ರಮಣ ನೀತಿಗೆ ಇರಾನ್ ಸ್ಪಷ್ಟ ಉತ್ತರ ನೀಡಿದ್ದೇವೆ. ಇರಾನ್ ತನ್ನ ಕೊನೆಯ ಉಸಿರಿನವರೆಗೆ ಹೋರಾಡಲಿದೆ. ಇರಾನ್ ದೇಶಕ್ಕಾಗಿ ಕೊನೆಯವರೆಗೂ ಹೋರಾಟ ನಡೆಸಿದೆ. ಧೈರ್ಯ ಹಾಗೂ ಸಾಹಸ ತೋರಿದ ಇಸ್ರೇಲ್ ಶಸಸ್ತ್ರ ಪಡೆಗೆ ಧನ್ಯವಾದ. ಇರಾನ್ ಜನತೆ ಒಗ್ಗಟ್ಟಿನಿಂದ ಇರಾನ್ ಸೇನೆಗೆ ಧನ್ಯವಾದ ಹೇಳುತ್ತಿದೆ. ಯಾವುದೇ ಶತ್ರು ನಮ್ಮ ಮೇಲೆ ದಾಳಿ ನಡೆಸಿದರೆ ನಮ್ಮ ಹೋರಾಟ ಕೊನೆಯ ಉಸಿರಿನವರೆಗೂ ಇರಲಿದೆ ಎಂದು ವಿದೇಶಾಂಗ ಸಚಿವ ಸ್ಪಷ್ಟಪಡಿಸಿದ್ದಾರೆ.
ಸದ್ಯ ಯುದ್ಧ ಅಂತ್ಯಗೊಂಡಿದೆ. ಆದರೆ ಇದು ಕದನ ವಿರಾಮ ಅಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ನಮ್ಮ ಮೇಲೆ ದಾಳಿ ಮಾಡಿದರೆ ಪ್ರತಿ ದಾಳಿ ಶತಕ ಸಿದ್ಧ ಎಂದು ಇರಾನ್ ಹೇಳಿದೆ. ಈ ಮೂಲಕ ಡೋನಾಲ್ಡ್ ಟ್ರಂಪ್‌ಗೆ ತೀವ್ರ ಮುಖಭಂಗವಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ದಾಳಿ ನಡುವೆ ಮಧ್ಯಪ್ರವೇಶಿಸಿ ಯುದ್ದ ನಿಲ್ಲಿಸಲು ಮಧ್ಯಸ್ಥಿತಿಕೆ ವಹಿಸಿದ್ದೇನೆ ಎಂದು ಟ್ರಂಪ್ ಘೋಷಿಸಿದ್ದರು. ಆದರೆ ಟ್ರಂಪ್ ಹೇಳಿಕೆಯನ್ನು ಭಾರತ ನಿರಾಕರಿಸಿತ್ತು. ಇಷ್ಟೇ ಅಲ್ಲ ಪ್ರಧಾನಿ ಮೋದಿ ನೇರವಾಗಿ ಟ್ರಂಪ್ ಜೊತೆಗಿನ ಮಾತುಕತೆಯಲ್ಲಿ ಯಾರ ಮಧ್ಯಸ್ಥಿತಿಕೆಯಿಂದ ದಾಳಿ ನಿಲ್ಲಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಶಾಂತಿ ನೊಬೆಲ್ ಪ್ರಶಸ್ತಿ ಬಯಸುತ್ತಿರುವ ಟ್ರಂಪ್‌ಗೆ ಭಾರಿ ಮುಖಭಂಗವಾಗಿತ್ತು. ಇದೀಗ ಮಧ್ಯಪ್ರಾಚ್ಯದ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ ಬೆನ್ನಲ್ಲೇ ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿದೆ ಎಂದು ಟ್ರಂಪ್ ಘೋಷಿಸಿದ್ದರು.ಇದರ ಬೆನ್ನಲ್ಲೇ ಇರಾನ್ ಸ್ಪಷ್ಟೆ ನೀಡುವ ಮೂಲಕ ಟ್ರಂಪ್ ಎರಡನೇ ಬಾರಿಗೆ ಮುಖಭಂಗ ಅನುಭವಿಸಿದ್ದಾರೆ.
ಇರಾನ್ ಮೇಲೆ ದಾಳಿ ನಡೆಸಿದರೆ ಪ್ರತಿ ದಾಳಿ ಅದೇ ಕ್ಷಣದಲ್ಲಿ ನಡೆಯಲಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ.