Asianet Suvarna News Asianet Suvarna News

Nirav Modi: ನೀರವ್ ಮೋದಿ ಅತ್ಯಾಪ್ತ ಈಜಿಪ್ಟಿನಿಂದ ಗಡೀಪಾರು..ಸಿಬಿಐ ಕಸ್ಟಡಿಗೆ!

* ನೀರವ್‌ ಹಗರಣ: ಪ್ರಮುಖ ಆರೋಪಿ ಈಜಿಪ್ಟಿನಿಂದ ಗಡೀಪಾರು
* ನೀರವ್‌ನ ಮ್ಯಾನೇಜರ್‌ಗೆ 14 ದಿನಗಳ ಸಿಬಿಐ ಕಸ್ಟಡಿ
* ಭಾರತದ ಬ್ಯಾಂಕ್‌ಗಳಿಗೆ ವಂಚನೆ
* ಇಂಗ್ಲೆಂಡ್ ನಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ

Nirav Modi s close aide Subhash Shankar Parab sent to 14-day CBI custody till April 26 mah
Author
Bengaluru, First Published Apr 13, 2022, 4:24 AM IST

ಮುಂಬೈ (ಏ. 13) ವಜ್ರದ ವ್ಯಾಪಾರಿ ನೀರವ್‌ ಮೋದಿಯ ((Nirav Modi)) 7000 ಕೋಟಿ ರು. ಬ್ಯಾಂಕ್‌ ವಂಚನೆಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಭಾಷ್‌ ಶಂಕರ್‌ ಪರಬ್‌ರನ್ನು(Subhash Shankar Parab)  ಸುದೀರ್ಘ ರಾಜತಾಂತ್ರಿಕ ಹಾಗೂ ಕಾನೂನು ಪ್ರಕ್ರಿಯೆಯ ನಂತರ ಈಜಿಪ್ಟ್ (Egypt) ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ.

ಈಜಿಪ್ಟಿನ ಕೈರೋದಲ್ಲಿ ನೀರವ್‌ ತಮ್ಮನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿದ ಪರಬ್‌ನನ್ನು ಸ್ವತಃ ಸಿಬಿಐ ಅಧಿಕಾರಿಗಳೇ ಭಾರತಕ್ಕೆ ಕರೆ ತಂದಿದ್ದಾರೆ. ನೀರವ್‌ನ ಫೈರ್‌ಸ್ಟಾರ್‌ ಡೈಮಂಡ್‌್ಸ ಕಂಪನಿಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದ ಇವರನ್ನು ಮುಂಬೈಗೆ ಕರೆತರಲಾಯಿತು. ಬಳಿಕ ವಿಶೇಷ ಸಿಬಿಐ ನ್ಯಾಯಾಧೀಶ ವಿ.ಸಿ ಭರ್ಡೆಯೆದುರು ಪರಬ್‌ನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಆದೇಶದ ಮೇಲೆ 14 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿದೆ.

ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

ವಿಜಯ್ ಮಲ್ಯ,  ಚೋಕ್ಸಿ, ನೀರವ್ ಮೋದಿಯಿಂದ ಈವರೆಗೂ 18 ಸಾವಿರ ಕೋಟಿ ವಸೂಲಿ: ದೇಶದ ಬ್ಯಾಂಕ್ ಗಳಿಗೆ ವಂಚನೆ ಮಾಡಿ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ (Vijay Mallya), ನೀರವ್ ಮೋದಿ  ಹಾಗೂ ಮೇಹುಲ್ ಚೋಕ್ಸಿಯಿಂದ (Mehul Choksi) ಈವರೆಗೂ 18 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಬ್ಯಾಂಕ್ ಗಳಿಗೆ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಭಾರತದಲ್ಲಿ, 4,700 ಪಿಎಂಎಲ್‌ಎ (ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್) (PMLA) ಪ್ರಕರಣಗಳನ್ನು ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ ಮತ್ತು ನ್ಯಾಯಾಲಯದ ಮುಂದೆ ಬಾಕಿ ಇರುವ ಅಪರಾಧಗಳ ಒಟ್ಟು ಆದಾಯವು ₹ 67,000 ಕೋಟಿಗಳಷ್ಟಿದೆ ಎಂದು ಕೇಂದ್ರ  ಹೇಳಿತ್ತು. ಕೇಂದ್ರದ ಪರವಾಗಿ  ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಗಳು ನೀಡುತ್ತಿರುವ ರಕ್ಷಣೆಯಿಂದಾಗಿ ದೊಡ್ಡ ಮೊತ್ತದ ಹಣ ಇನ್ನೂ ಹೇಗೆ ಈ ಉದ್ಯಮಿಗಳಲ್ಲಿ ಸಿಲುಕಿಕೊಂಡಿದೆ ಮತ್ತು ಚೇತರಿಕೆಯ ಹಂತವನ್ನು ದಾಟಿಲ್ಲ ಎನ್ನುವುದನ್ನು ವಿವರಿಸಲು ಈ ಅಂಕಿಅಂಶ ನೀಡಿದ್ದರು.

"ಸಾವಿರಾರು ಕೋಟಿ ವಂಚನೆ ಮಾಡಿ ದೇಶ ತೊರೆದಿರುವ ಕೆಲವರು ನ್ಯಾಯಾಲಯಗಳ ರಕ್ಷಣೆಯನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ಬಲವಂತ ರಹಿತ ಕ್ರಮಗಳನ್ನು ನೀಡುವ ಮೂಲಕ ನ್ಯಾಯಾಲಯಗಳು ₹ 67000 ಕೋಟಿಗಳನ್ನು ಹಿಡಿದಿಟ್ಟುಕೊಂಡಿವೆ" ಎಂಬ ಮಾಹಿತಿಯನ್ನು ನೀಡಿದ್ದರು.

ನೀರವ್ ಗೆ ಖಿನ್ನತೆ:  ವಜ್ರೋದ್ಯಮಿ ನೀರವ್‌ ಮೋದಿ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಮಾಃಇತಿಯೂ ಬಂದಿತ್ತು. ದೇಶ ಬಿಟ್ಟು ಓಡಿ ಹೋದ ನೀರವ್ ಆತ್ಮಹತ್ಯೆಗೂ ಮುಂದಾಗಿದ್ದರು ಎಂಬ ವರದಿಗಳು ಬಂದಿದ್ದವು.


 

Follow Us:
Download App:
  • android
  • ios