Asianet Suvarna News Asianet Suvarna News

ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

* ಪಂಜಾಬ್‌ ನ್ಯಾಷ​ನಲ್‌ ಬ್ಯಾಂಕ್‌ಗೆ 13,500 ಕೋಟಿ ರು. ವಂಚನೆ

* ವಂಚನೆ ಎಸ​ಗಿದ ಪ್ರಕ​ರ​ಣ​ದಲ್ಲಿ ಮಾಫಿ ಸಾಕ್ಷಿ​ಯಾ​ಗಲು ಒಪ್ಪಿದ ವಜ್ರೋ​ದ್ಯಮಿ ನೀರವ್‌ ಮೋದಿ

* ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

Nirav Modi Sister Pays 17 Crores To Probe Agency After Turning Approver pod
Author
Bangalore, First Published Jul 2, 2021, 10:01 AM IST

ನವ​ದೆ​ಹ​ಲಿ(ಜು.02): ಪಂಜಾಬ್‌ ನ್ಯಾಷ​ನಲ್‌ ಬ್ಯಾಂಕ್‌ಗೆ 13,500 ಕೋಟಿ ರು. ವಂಚನೆ ಎಸ​ಗಿದ ಪ್ರಕ​ರ​ಣ​ದಲ್ಲಿ ಮಾಫಿ ಸಾಕ್ಷಿ​ಯಾ​ಗಲು ಒಪ್ಪಿದ ವಜ್ರೋ​ದ್ಯಮಿ ನೀರವ್‌ ಮೋದಿ ಸೋದರಿ ಪೂರ್ವಿ ಮೋದಿ ಅವರು ತನಿಖಾ ಸಂಸ್ಥೆ​ಯಾದ ಜಾರಿ ನಿರ್ದೇ​ಶ​ನಾ​ಲ​ಯ(ಇ.ಡಿ)ಕ್ಕೆ ಒಟ್ಟಾರೆ 17.25 ಕೋಟಿ ರು. ಸಂದಾಯ ಮಾಡಿ​ದ್ದಾರೆ ಎಂದು ತಿಳಿ​ದು​ಬಂದಿದೆ.

ಪಿಎ​ನ್‌​ಬಿ​ಗೆ ಬಹು​ಕೋಟಿ ವಂಚನೆ ಎಸ​ಗಿದ ನೀರವ್‌ ಮೋದಿ ವಿರು​ದ್ಧದ ತನಿ​ಖೆಗೆ ಸಹ​ಕ​ರಿ​ಸು​ವು​ದಾಗಿ ಇ.ಡಿ​ಗೆ ಭರ​ವಸೆ ನೀಡಿದ ಹಿನ್ನೆ​ಲೆ​ಯಲ್ಲಿ ತನಿಖಾ ಸಂಸ್ಥೆಯು ಪೂರ್ವಿ ಮತ್ತು ಅವರ ಪತಿ ಮಯಾಂಕ್‌ ಮೆಹ್ತಾ ಅವ​ರಿಗೆ ಕ್ಷಮಾ​ಪಣೆ ನೀಡಿತ್ತು.

ಈ ಬಗ್ಗೆ ಗುರು​ವಾರ ಮಾಹಿತಿ ನೀಡಿದ ಇ.ಡಿ, ‘ತಮ್ಮ ಸೋದರ ನೀರವ್‌ ಮೋದಿ ಪರ​ವಾಗಿ ಲಂಡ​ನ್‌​ನ​ಲ್ಲಿ​ರುವ ಬ್ಯಾಂಕ್‌​ವೊಂದ​ರಲ್ಲಿ ತನ್ನ ಹೆಸ​ರಿ​ನಲ್ಲಿ ಖಾತೆ ತೆರೆ​ಯ​ಲಾ​ಗಿತ್ತು. ಆದರೆ ಖಾತೆ​ಯ​ಲ್ಲಿದ್ದ ಹಣವು ತನಗೆ ಸೇರಿ​ದ್ದಲ್ಲ. ಜೊತೆಗೆ ತನಿ​ಖೆಗೆ ಪೂರ್ತಿ ಸಹ​ಕಾರ ನೀಡು​ವು​ದಾಗಿ ಹೇಳಿದ ಹಿನ್ನೆ​ಲೆ​ಯಲ್ಲಿ ತನ್ನ ಹೆಸ​ರಿ​ನ​ಲ್ಲಿದ್ದ ಹಣ​ವನ್ನು ಪೂರ್ವಿ ಮೋದಿ ಭಾರತ ಸರ್ಕಾ​ರದ ಇ.ಡಿ ಖಾತೆಗೆ ರವಾ​ನಿ​ಸಿ​ದ್ದಾಳೆ’ ಎಂದಿದೆ.

Follow Us:
Download App:
  • android
  • ios