Asianet Suvarna News Asianet Suvarna News

BREAKING: ಇಂಗ್ಲೆಂಡ್‌ ಕೋರ್ಟ್‌ನಲ್ಲಿ ನೀರವ್‌ ಮೋದಿ ಅರ್ಜಿ ವಜಾ: ಭಾರತಕ್ಕೆ ಶೀಘ್ರದಲ್ಲೇ ಹಸ್ತಾಂತರ

Nirav Modi to be extradited to India: ಬ್ಯಾಂಕ್‌ಗಳಿಗೆ ಕೋಟ್ಯಂತರ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ನೀರವ್‌ ಮೋದಿ ವಿರುದ್ಧದ ಪ್ರಕರಣದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ. ಸದ್ಯದಲ್ಲೇ ಭಾರತಕ್ಕೆ ನೀರವ್‌ ಮೋದಿಯನ್ನು ಇಂಗ್ಲೆಂಡ್‌ ಸರ್ಕಾರ ಹಸ್ತಾಂತರಿಸಲಿದೆ.

Nirav Modi loses appeal in UK court will be extradited to india soon
Author
First Published Nov 9, 2022, 4:35 PM IST

ನವದೆಹಲಿ: ಸಾವಿರಾರು ಕೋಟಿ ಬ್ಯಾಂಕ್‌ಗಳಿಗೆ ವಂಚಿಸಿ ಭಾರತದಿಂದ ಪರಾರಿಯಾಗಿದ್ದ ಉದ್ಯಮಿ ನೀರವ್‌ ಮೋದಿಯ ಅರ್ಜಿ ಇಂಗ್ಲೆಂಡ್‌ ಕೋರ್ಟ್‌ನಲ್ಲಿ ವಜಾಗೊಂಡಿದೆ. ನೀರವ್‌ ಮೋದಿಯನ್ನು ಇಂಗ್ಲೆಂಡ್‌ ಸರ್ಕಾರ ಶೀಘ್ರದಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ. ಇದು ಭಾರತ ಸರ್ಕಾರಕ್ಕ ಸಿಕ್ಕ ಜಯವಾಗಿದ್ದು, ಕಳೆದೆರಡು ವರ್ಷಗಳಿಂದ ಸತತ ಕಾನೂನು ಹೋರಾಟ ನಡೆಸಲಾಗಿತ್ತು. ಭಾರತದಿಂದ ತಲೆಮರೆಸಿಕೊಂಡಿದ್ದ ನೀರವ್‌ ಮೋದಿ ಇಂಗ್ಲೆಂಡ್‌ಗೆ ಕೆಲಸದ ವೀಸಾ ಮೂಲಕ ಹೋಗಿದ್ದರು. ಅದಾದ ನಂತರ ಭಾರತ ಸಿಬಿಐ ಮುಖಾಂತರ ಇಂಟರ್‌ಪೋಲ್‌ನಲ್ಲಿ ರೆಡ್‌ ಕಾರ್ನರ್‌ ನೊಟೀಸ್‌ ಜಾರಿಗೊಳಿಸಿತ್ತು. ಭಾರತಕ್ಕೆ ನೀರವ್‌ ಮೋದಿಯನ್ನು ಹಸ್ತಾಂತರಿಸುವಂತೆ ಕೋರಿತ್ತು. ಆದರೆ ನೀರವ್‌ ಮೋದಿ ಇಂಗ್ಲೆಂಡ್‌ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಗಡಿಪಾರಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅರ್ಜಿ:

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಗಡಿಪಾರು ಭೀತಿ ಎದುರಿಸುತ್ತಿದ್ದ ವಜ್ರೋದ್ಯಮಿ ನೀರವ್‌ ಮೋದಿಗೆ, ಈ ಆದೇಶದ ವಿರುದ್ಧ ಖಿನ್ನತೆ ಮತ್ತು ಆತ್ಮಹತ್ಯೆ ಅಪಾಯದ ಅಂಶಗಳಡಿ ಮೇಲ್ಮನವಿ ಸಲ್ಲಿಸಲು ಲಂಡನ್‌ನ ಹೈಕೋರ್ಟ್‌ ಅನುಮತಿ ನೀಡಿದೆ.

ಒಂದು ವೇಳೆ ಈ ಮೇಲ್ಮನವಿಯಲ್ಲಿ ನೀರವ್‌ ಮೋದಿ ವಾದ ಅಂಗೀಕಾರಗೊಂಡರೆ, ಬ್ರಿಟನ್‌ ಸರ್ಕಾರ, ನೀಮೋನನ್ನು ಭಾರತಕ್ಕೆ ಗಡಿಪಾರು ಮಾಡಲು ನಿರಾಕರಿಸಬಹುದಾಗಿರುತ್ತದೆ.

ಇದನ್ನೂ ಓದಿ: ನೀಮೋ ಪತ್ನಿ ಬಂಧನಕ್ಕೆ ಇಂಟರ್‌ಪೋಲ್‌ನಿಂದ ಜಾಗತಿಕ ವಾರೆಂಟ್‌!

ಪ್ರಕರಣ ಸಂಬಂಧ ಈಗಾಗಲೇ ನೀರವ್‌ ಮೋದಿ ಖಿನ್ನತೆಗೆ ಒಳಗಾಗಿದ್ದಾರೆ. ಅಲ್ಲದೆ ಗಡಿಪಾರು ಮಾಡಿದರೆ ನೀಮೋ ಅವರನ್ನು ಇಡಲಾಗುವ ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಹೀಗಾಗಿ ಗಡಿಪಾರಿಗೆ ಅವಕಾಶ ಕೊಡಬಾರದು ಎಂದು ನೀರವ್‌ ಮೋದಿ ಪರ ವಕೀಲರು ವಾದಿಸಿದ್ದರು. ಇದನ್ನು ಆಲಿಸಿದ ನ್ಯಾ. ಮಾರ್ಟಿನ್‌ ಚಾಂಬರ್‌ಲೇನ್‌, ಎರಡೂ ಅಂಶಗಳು ವಾದಕ್ಕೆ ಅರ್ಹವಾಗಿವೆ. ಜೊತೆಗೆ ನೀಮೋ ಅವರನ್ನು ಆತ್ಮಹತ್ಯೆಯಿಂದ ತಡೆಯುವಂಥ ವ್ಯವಸ್ಥೆ ಇದೆಯೇ ಇಲ್ಲವೇ ಎಂಬ ಅಂಶ ಕೂಡಾ ವಾದದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಗಡಿಪಾರು ಪರ ತೀರ್ಪು ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಲಾಗಿತ್ತು. 

ಇದನ್ನೂ ಒದಿ: ಭಾರತದ ಜೈಲಲ್ಲಿ ಇಲಿ ಇವೆ, ಗಡೀಪಾರು ಮಾಡಬೇಡಿ: ನೀರವ್‌ ಮೋದಿ ಮನವಿ

 

ನೀರವ್ ಮೋದಿ ವಿರುದ್ಧ ಪ್ರಕರಣ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಇದೀಗ 253 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದೆ. ಬ್ಯಾಂಕ್ ಖಾತೆಯಲ್ಲಿದ್ದ ಹಣ, ವಜ್ರ ವೈಡೂರ್ಯ, ಚಿನ್ನಾಭರಣ, ರತ್ನ ಸೇರಿದಂತೆ ಚಿರಾಸ್ತಿಗಳನ್ನು ಇಡಿ ವಶಪಡಿಸಿಕೊಂಡಿದೆ. ಇದರೊಂದಿಗೆ ಇಡಿ ಅಧಿಕಾರಿಗಳು ವಶಪಡಿಸಿಕೊಂಡ ನೀರವ್ ಮೋದಿ ಒಟ್ಟು ಆಸ್ತಿಗಳ ಮೊತ್ತ 2,650 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹಾಂಕ್‌ಕಾಂಗ್‌ನಲ್ಲಿರುವ ನೀರವ್ ಮೋದಿ ವಜ್ರ ಹಾಗೂ ಚಿನ್ನಾಭರಣ ಕಂಪನಿಯಿಂದ ಈ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.  ನೀರವ್ ಮೋದಿ ಅವರ  2,396.45 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಪೈಕಿ ಇಡಿ ಅಧಿಕಾರಿಗಳು 2018ರಲ್ಲಿ  1,389 ಕೋಟಿ ರೂಪಾಯಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು ವಶಕ್ಕೆ ಪಡೆದಿತ್ತು.

ಈ ಎಲ್ಲಾ ಚರಾಸ್ತಿಗಳು ಹಾಂಕಾಂಗ್‌ನಲ್ಲಿ(Nirav Modi Properties) ಜಪ್ತಿ ಮಾಡಲಾಗಿದೆ. ಎಲ್ಲಾ ಆಭರಣಗಳು ಮತ್ತು ರತ್ನಗಳನ್ನು ಖಾಸಗಿ ಬ್ಯಾಂಕುಗಳ ಭದ್ರತೆಯಲ್ಲಿ ನೀರವ್‌ ಮೋದಿ ಗ್ರೂಪ್‌ ಆಫ್‌ ಕಂಪನೀಸ್‌ ಹೆಸರಿನಲ್ಲಿ ಇಡಲಾಗಿತ್ತು. ಇವುಗಳೆಲ್ಲವನ್ನೂ ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ.(enforcement directorate) ತಿಳಿಸಿದೆ. 2 ಬಿಲಿಯನ್‌ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ(PNB Case) ಪ್ರಕರಣದ ನಂತರ ನೀರವ್‌ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾನೆ.

ಇದನ್ನೂ ಓದಿ: ನೀರವ್ ಗಡೀಪಾರಾದರೆ ಆತ್ಮಹತ್ಯೆ ಸಾಧ್ಯತೆ!

ಭಾರತದ ಬ್ಯಾಂಕ್‌ಗೆ ಬರೋಬ್ಬರಿ 7,000 ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿಯನ್ನು ಗಡೀಪಾರು ಮಾಡಲು ಎಲ್ಲಾ ಸಹಕಾರ ನೀಡುವುದಾಗಿ ಹಿಂದಿನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಬೋರಿಸ್ ಜಾನ್ಸನ್ ರಾಜಕೀಯ ಬಿಕ್ಕಟ್ಟಿನಿಂದ ರಾಜೀನಾಮೆ ನೀಡಿದ್ದಾರೆ. ಬ್ರಿಟನ್‌ನಲ್ಲಿ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆಯಲ್ಲಿದೆ. ಹೀಗಾಗಿ ಸದ್ಯ ಗಡೀಪಾರು ವಿಚಾರ ಮಂದಗತಿಯಲ್ಲಿ ಸಾಗಿದೆ. 

ನೀರವ್ ಮೋದಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸುಭಾಷ್‌ ಶಂಕರ್‌ ಪರಬ್‌ರನ್ನು ಸುದೀರ್ಘ ರಾಜತಾಂತ್ರಿಕ ಹಾಗೂ ಕಾನೂನು ಪ್ರಕ್ರಿಯೆಯ ನಂತರ ಈಜಿಪ್‌್ಟನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈಜಿಪ್ಟಿನ ಕೈರೋದಲ್ಲಿ ನೀರವ್‌ ತಮ್ಮನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ಆರೋಪಿಸಿದ ಪರಬ್‌ನನ್ನು ಸ್ವತಃ ಸಿಬಿಐ ಅಧಿಕಾರಿಗಳೇ ಭಾರತಕ್ಕೆ ಕರೆ ತಂದಿದ್ದಾರೆ. ನೀರವ್‌ನ ಫೈರ್‌ಸ್ಟಾರ್‌ ಡೈಮಂಡ್‌ ಕಂಪನಿಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದ ಇವರನ್ನು ಮುಂಬೈಗೆ ಕರೆತರಲಾಯಿತು. ಸಿಬಿಐ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. 

ಇದನ್ನೂ ಓದಿ: ಇಡಿ ಖಾತೆಗೆ 17 ಕೋಟಿ ಹಾಕಿದ ನೀಮೋ ಸೋದರಿ ಪೂರ್ವಿ ಮೋದಿ!

ನೀರವ್‌ ಮೋದಿಗೆ ಅಮೆರಿಕದಲ್ಲೂ ಹಿನ್ನಡೆ:

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಸಾವಿರಾರು ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿಗೆ ಅಮೆರಿಕ ಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ. ತಮ್ಮ ಮೇಲಿರುವ ವಂಚನೆ ಕೇಸು ವಜಾಗೊಳಿಸುವಂತೆ ನೀರವ್‌ ಮೋದಿ ಹಾಗೂ ಆತನ ಇಬ್ಬರು ಸಹವರ್ತಿಗಳಾದ ಮಿಹಿರ್‌ ಬನ್ಸಾಲಿ ಮತ್ತು ಅಜಯ್‌ ಗಾಂಧಿ ನ್ಯೂಯಾರ್ಕ್ ಕೋರ್ಟ್‌ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಜಾಗೊಳಿಸಿರುವ ಅಮೆರಿಕ ಕೋರ್ಟ್‌ ತನಿಖೆಗೆ ಮೂವರು ಸದಸ್ಯರ ಸಮಿತಿ ರಚಿಸಿದೆ. ಸದ್ಯ ಬ್ರಿಟನ್‌ ಜೈಲಿನಲ್ಲಿರುವ ನೀರವ್‌ ಮೋದಿ ಅಮೆರಿಕದಲ್ಲೂ ಸಾಲ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾನೆ. ರಿಚರ್ಡ್‌ ಲೆವಿನ್‌ ಎಂಬುವವರು ಕೋರ್ಟ್‌ ಮೊರೆಹೋಗಿದ್ದು, 15 ದಶಲಕ್ಷ ಡಾಲರ್‌ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios