ನಯಾಗರ ಜಲಪಾತದಲ್ಲಿ ಕೇಸರಿ, ಬಿಳಿ, ಹಸಿರು | ಭಾರತದ ಕೊರೋನಾ ಹೋರಾಟಕ್ಕೆ ಬೆಂಬಲ

ಕೆನಡಾ(ಏ.30): ಭಾರತ ಕೊರೋನಾ ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವ ಸಂದರ್ಭದಲ್ಲಿ ಕೆನಡಾದ ಒಂಟಾರಿಯೋದಲ್ಲಿ ನಯಾಗರ ಜಲಪಾತ ತ್ರಿವರ್ಣದಲ್ಲಿ ಬೆಳಗಿತು. ಧುಮ್ಮಿಕ್ಕುವ ಜಲಪಾತದಲ್ಲಿ ಭಾರತದ ರಾಷ್ಟ್ರಧ್ವಜದ ಬಣ್ಣಗಳು ಬೆಳಗಿದ್ದು, ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

ಕೆನಡಾದ ಒಂಟಾರಿಯೊದಲ್ಲಿನ ನಯಾಗರ ಜಲಪಾತವು ಭಾರತದ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಬೆಳಗಿ ಈ ಕಷ್ಟದ ಸಂದರ್ಭದಲ್ಲಿ ಒಗ್ಗಟ್ಟಿನ ಮತ್ತು ಭರವಸೆಯ ಬೆಂಬಲವನ್ನು ನೀಡಿದೆ.

ಆದಷ್ಟು ಬೇಗ ಭಾರತ ಬಿಡಿ: ಅಮೆರಿಕ ಸೂಚನೆ

ಭಾರತದಲ್ಲಿ ಈಗ ಕೊರೋನಾ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ, ಕೊರೋನಾದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಭಾರತಕ್ಕೆ ಭರವಸೆ ಮತ್ತು ಭಾರತದೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಇಂದು ರಾತ್ರಿ 9.30ರಿಂದ 10 ಗಂಟೆಯ ತನಕ ನಯಾಗರಾ ಫಾಲ್ಸ್‌ ಭಾರತದ ರಾಷ್ಟ್ರಧ್ವಜದ ತ್ರಿವರ್ಣದಲ್ಲಿ ಬೆಳಗಲಿದೆ. ಎಂದು ನಯಾಗರ ಪಾರ್ಕ್ಸ್, ಒಂಟಾರಿಯೋ 56 ಕಿಮೀ ಹೊರಾಂಗಣ ಸಹಾಸ ಮ್ಯೂಸಿಯಂ ಟ್ವೀಟ್ ಮಾಡಿತ್ತು.

Scroll to load tweet…

ವಿಶ್ವದ ನೈಸರ್ಗಿಕ ಅದ್ಭುತಗಳ ಅಭ್ಯರ್ಥಿ ಎಂದೂ ಕರೆಯಲಾಗುವ ನಯಾಗರಾ ಜಲಪಾತ ಒಂದು ವರ್ಷದಲ್ಲಿ ಇದು ಎರಡನೇ ಬಾರಿಗೆ ಭಾರತದ ಧ್ವಜದ ಬಣ್ಣಗಳಲ್ಲಿ ಪ್ರಕಾಶಿಸಲ್ಪಟ್ಟಿದೆ. ಈ ಹಿಂದೆ, ಕಳೆದ ಆಗಸ್ಟ್‌ನಲ್ಲಿ ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಯಾಗರವನ್ನು ತ್ರಿವರ್ಣದಲ್ಲಿ ಬೆಳಗಿಸಲಾಗಿತ್ತು.

ಮಂಜುಗಡ್ಡೆಯಾದ ನಯಾಗರಾ: ವೈರಲ್ ಆಯ್ತು ಫಾಲ್ಸ್ ಬ್ಯೂಟಿ!

ಟ್ವಿಟ್ಟರ್ನಲ್ಲಿ ಜನ ನಯಾಗರಾ ಉದ್ಯಾನವನದ ಪ್ರದರ್ಶನ ಮೆಚ್ಚಿ #StayStrongIndia ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಇಂಡಿಯಾದೊಂದಿಗೆ ಬೆಂಬಲ ಮತ್ತು ಐಕಮತ್ಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು ನೆಟ್ಟಿಗರು ಕಮೆಂಟಿಸಿದ್ದಾರೆ.

Scroll to load tweet…

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona