ನೇರಪ್ರಸಾರದಲ್ಲಿ ವೃತ್ತಿಪರತೆ ಮೆರೆದ ವಾರ್ತಾವಾಚಕಿಯ ಘಟನೆ ವರದಿಯಾಗಿದೆ. ಉಜ್ಬೇಕಿಸ್ತಾನದ ಸುದ್ದಿ ವಾಚಕಿಯೊಬ್ಬರು ಸುದ್ದಿ ಓದುವಾಗ ಕುರ್ಚಿ ಬಿದ್ದರೂ ವಿಚಲಿತರಾಗದೆ, ಸನ್ನಿವೇಶವನ್ನು ನಿಭಾಯಿಸಿ ವೃತ್ತಿಪರತೆ ಮೆರೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಂಕರ್‌ನ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಸಂದರ್ಭಗಳಲ್ಲಿ ವೃತ್ತಿಧರ್ಮ ಕಾಪಾಡಿಕೊಳ್ಳುವುದು ಮುಖ್ಯವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕೆಲವೊಮ್ಮೆ ಉದ್ಯೋಗ ಸ್ಥಳಗಳಲ್ಲಿ ಊಪ್ಸ್ ಎನ್ನುವ ಘಟನೆಗಳು ನಡೆದು ಬಿಡುತ್ತವೆ. ಆದರೆ, ಕೆಲವು ವೃತ್ತಿಯಲ್ಲಿ ಇರುವವರು ಅದನ್ನು ಸಂಭಾಳಿಸಿಕೊಂಡು ಏನೂ ಆಗದವರ ರೀತಿಯಲ್ಲಿ ಇರಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮಾಡೆಲಿಂಗ್ ಕ್ಷೇತ್ರ, ಸಿನಿಮಾ ಕ್ಷೇತ್ರ ಇಂಥ ಬಣ್ಣದ ಲೋಕದಲ್ಲಿ ಇರುವವರು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭಗಳಲ್ಲಿ ಏನಾದರೂ ಎಡವಟ್ಟು ಆಗಿಬಿಟ್ಟರೆ ಕ್ಯಾಮೆರಾ ಕಣ್ಣು ಅವರ ಮೇಲೆಯೇ ನೆಟ್ಟಿರುವ ಕಾರಣ, ಅಲ್ಲಿಯೇ ಏನೋ ಅಡ್ಜಸ್ಟ್ ಮಾಡಿಕೊಳ್ಳುವುದು ಅನಿವಾರ್ಯವಾಗಿ ಬಿಡುತ್ತದೆ. ಇದು ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ, ಎಷ್ಟೋ ಸಂದರ್ಭಗಳಲ್ಲಿ ಸಾಮಾನ್ಯ ಜನರಿಗೂ ಇದು ಆಗುವುದು ಉಂಟೆನ್ನಿ.
ಆದರೆ ಟಿ.ವಿಯ ನೇರಪ್ರಸಾರದಲ್ಲಿ ಇರುವಾಗಲೇ ಎಡವಟ್ಟು ಆಗಿಬಿಟ್ಟರೆ? ಕೋವಿಡ್ ಸಮಯದಲ್ಲಿ, ವರ್ಚುವಲ್ ಮೀಟಿಂಗ್ಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ನೋಡಬಾರದ, ಕೇಳಬಾರದ ಘಟನೆಗಳೆಲ್ಲವೂ ನಡೆದು ಬಿಟ್ಟಿವೆ. ಮೀಟಿಂಗ್ ನಡೆಯುತ್ತಿದ್ದ ಸಂದರ್ಭಗಳಲ್ಲಿ ಮನೆಯೊಳಗೆ ಆಗಿರುವ ಏನೇನೋ ಘಟನೆಗಳೆಲ್ಲವೂ ಖುಲ್ಲಂಖುಲ್ಲಾ ರಿವೀಲ್ ಆಗಿದ್ದು ಇದೆ. ಇದು ವರ್ಚುವಲ್ ಮೀಟಿಂಗ್ ಮಾತಾದರೆ, ವಾರ್ತಾ ವಾಚಕರು ಎಂದರೆ ನ್ಯೂಸ್ ರೀಡರ್ ಸುದ್ದಿ ಓದುವಾಗಲೇ ನೇರಪ್ರಸಾರದಲ್ಲಿ ಎಡವಟ್ಟು ಆಗಿಬಿಟ್ಟರೆ ಏನು ತಾನೆ ಮಾಡಲು ಸಾಧ್ಯ? ಈಗ ಬಹುತೇಕ ಎಲ್ಲಾ ಚಾನೆಲ್ಗಳಲ್ಲಿಯೂ, ಎಲ್ಲಾ ಭಾಷೆಗಳಲ್ಲಿಯೂ ಸುದ್ದಿಗಳು ನೇರಪ್ರಸಾರದಲ್ಲಿಯೇ ನಡೆಯುವುದು ಉಂಟು. ಅಂಥ ಸಂದರ್ಭದಲ್ಲಿ ನ್ಯೂಸ್ ರೀಡರ್ ಸುದ್ದಿ ಓದುವಾಗಲೇ ನೇರಪ್ರಸಾರದಲ್ಲಿ ಕುರ್ಚಿ ಬಿದ್ದುಬಿಟ್ಟಿರುವ ಅಬ್ಬಾ ಎನ್ನುವ ಘಟನೆ ನಡೆದಿದೆ.
ಗಂಡಸರಿಗೂ ಬೇಡವಾಯ್ತು ಈ ಸುಂದರಿ: ಯುವತಿ ಬಿಟ್ಟು ಅಜ್ಜನ ಕೈಗೆ ಕೀಲಿ ಕೊಟ್ಟ ಶೇ.97ರಷ್ಟು ಮಂದಿ!
ಅದೃಷ್ಟವಶಾತ್ ಆ ಲೇಡಿ ನ್ಯೂಸ್ ರೀಡರ್ ಬೀಳಲಿಲ್ಲ. ಕುರ್ಚಿ ಬೀಳುತ್ತಿದ್ದಂತೆಯೇ ಆರಂಭದಲ್ಲಿ ಸ್ವಲ್ಪ ವಿಚಲಿತರಾಗಿ ಕಂಡರೂ, ಅಲ್ಲಿಯೇ ಸಾವರಿಸಿಕೊಂಡು ಗಾಳಿಯಲ್ಲಿಯೇ ಕುಳಿತು ಸುದ್ದಿಯನ್ನು ಮುಂದುವರೆಸಿದ್ದಾರೆ. ನೇರಪ್ರಸಾರ ಆಗಿರುವ ಕಾರಣ, ಅದೂ ಸುದ್ದಿಯನ್ನು ಓದುತ್ತಿರುವಾಗ ಅಲ್ಲಿ ಕಟ್ ಮಾಡುವುದು ಸಾಧ್ಯವೇ ಇರುವುದಿಲ್ಲ. ಎಲ್ಲರೂ ಆ ಸಮಯದಲ್ಲಿ ಅಸಾಯಕರೇ ಆಗಿರುತ್ತಾರೆ. ಅಷ್ಟಕ್ಕೂ ಈ ಘಟನೆಯಲ್ಲಿ ಕ್ಯಾಮೆರಾಮನ್ಗೆ ಕೂಡ ಅಲ್ಲಿ ಏನಾಗಿದೆ ಎಂದು ತಿಳಿದಿರಲಿಕ್ಕಿಲ್ಲ. ಆದರೆ ಆ್ಯಂಕರ್ ಮಾತ್ರ ಸಾವರಿಸಿಕೊಂಡು ಸುದ್ದಿ ಮುಂದುವರೆಸಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.
ಇದಕ್ಕೇ ವೃತ್ತಿಪರತೆ ಎನ್ನುವುದು ಎಂದು ಹಲವರು ಶ್ಲಾಘಿಸಿದ್ದಾರೆ. ಇದು ಎಲ್ಲಿಯ ವಿಡಿಯೋ ಎನ್ನುವುದು ತಿಳಿದಿಲ್ಲ. ಆದರೆ ಅಲ್ಲಿರುವ ಭಾಷೆ ಎಲ್ಲವೂ ನೋಡಿದರೆ ಇದು ಉಜ್ಬೇಕಿಸ್ತಾನದ್ದು ಎಂದು ತಿಳಿದುಬರುತ್ತದೆ. ಭಾಷೆ, ದೇಶ ಯಾವುದಾದರೇನು? ವೃತ್ತಿಧರ್ಮವನ್ನು ಕಾಪಾಡಿಕೊಳ್ಳುವುದು ಎಂದರೆ ಇದೇ ಎಂದು ವಿವಿಧ ಭಾಷೆಗಳಲ್ಲಿ ಕಮೆಂಟ್ ಮಾಡಲಾಗಿದೆ. ಹಿಂಬದಿ ಕ್ಯಾಮೆರಾದಲ್ಲಿ ಆ್ಯಂಕರ್ಗೆ ಹೀಗೆ ಆಗಿರುವುದು ದಾಖಲಾಗದೇ ಇದ್ದಲ್ಲಿ ಯಾರಿಗೂ ಬಹುಶಃ ಇದು ಗೊತ್ತಾಗುತ್ತಲೇ ಇರಲಿಲ್ಲ.
ಸುಂದರಿಯರು ಹೆಚ್ಚಿರೋ ಭಾರತದ ರಾಜ್ಯ ಯಾವುದು ಗೊತ್ತಾ? ಕರ್ನಾಟಕಕ್ಕೆ ಸ್ಥಾನ ಇದ್ಯಾ? ಇಲ್ಲಿದೆ ಡಿಟೇಲ್ಸ್
