ವೆಲ್ಲಿಂಗ್ಟನ್(ಡಿ.14): ಒಂದೆಡೆ ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗಲೇ ಅತ್ತ ನ್ಯೂಜಿಲೆಂಡ್ ಈ ಮಹಾಮಾರಿಯಿಂದ ಸಂಪೂರ್ಣ ಮುಕ್ತಗೊಂಡಿದೆ. ದೇಶದಲ್ಲಿ ಒಂದೂ ಕೊರೋನಾ ಪಾಸಿಟಿವ್ ಪ್ರಕರಣ ಇಲ್ಲದ ಹಿನ್ನೆಲೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ನ್ಯೂಜಿಲೆಂಡ್ ಈಗ ವಿಜಿಲೆನ್ಸ್‌ನ 1 ನೇ ಹಂತವನ್ನು ತಲುಪಿದೆ, ಇದು ದೇಶದ ಎಚ್ಚರಿಕೆ ವ್ಯವಸ್ಥೆಯಲ್ಲಿ ಅತ್ಯಂತ ಕೆಳ ಮಟ್ಟದಲ್ಲಿದೆ.

ನ್ಯೂಜಿಲೆಂಡಲ್ಲಿ 51 ಮುಸ್ಲಿಮರ ಕೊಂದವ ಭಾರತಕ್ಕೂ ಬಂದಿದ್ದ

ನೂತನ ನಿಯಮಗಳ ಅನ್ವಯ ನ್ಯೂಜಿಲೆಂಡ್‌ನಲ್ಲಿ ಜನರು ಒಗ್ಗೂಡಬಹುದಾಗಿದೆ ಹಾಗೂ ಸಾಮಾಜಿಕ ಅಂತರವೂ ಪಾಲಿಸಬೇಕೆಂದಿಲ್ಲ. ಹೀಗಿದ್ದರೂ ದೇಶದ ಗಡಿ ವಿದೇಶಿಗರಿಗೆ ಇನ್ನೂ ಕೆಲ ಸಮಯ ಮುಚ್ಚಿರಲಿವೆ. ಇನ್ನು ಕಳೆದೆರಡು ವಾರದಿಂದಲೂ ಇಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ 'ದೇಶದಲ್ಲಿ ಕೊರೋನಾ ಮುಕ್ತವಾಗಿದೆ ಎಂಬ ವಿಚಾರ ತಿಳಿದಾಗ ನಾಣು ಖುಷಿಯಿಂದ ಕುಣಿದು ಕುಪ್ಪಳಿಸಿದೆ' ಎಂದಿದ್ದಾರೆ.

ಫಾರ್ಮುಲಾ ಒನ್‌ ರೇಸಲ್ಲಿ ಭೀಕರ ಅಪಘಾತ: ಕಾರು ಭಸ್ಮ

ಈ ಬಗ್ಗೆ ಮಾತನಾಡಿದ ಪಿಎಂ ಜೆಸಿಂಡಾ 'ನಾವೊಂದು ಸುರಕ್ಷಿತ ಹಾಗೂ ಶಕ್ತಿಶಾಲಿ ವ್ಯವಸ್ಥೆಯಲ್ಲಿದ್ದೇವೆ. ಹೀಗಿದ್ದರೂ ಕೊರೋನಾ ದಾಳಿ ಇಡುವುದಕ್ಕೂ ಮೊದಲಿದ್ದ ಸ್ಥಿತಿಗೆ ತಲುಪುವುದು ಸುಲಭವಿಲ್ಲ. ಸದ್ಯ ನಮ್ಮ ಸಂಪೂರ್ಣ ಗಮನ ಆರೋಗ್ಯ ವ್ಯವಸ್ಥೆಯ ಬದಲು ಆರ್ಥಿಕ ವಿಕಾಸದ ಮೇಲೂ ಇರುತ್ತದೆ. ಇನ್ನೂ ನಮ್ಮ ಕೆಲಸ ಮುಗಿದಿಲ್ಲ. ಹೀಗಿದ್ದರೂ ಇದೊಂದು ದೊಡ್ಡ ಸಾಧನೆ ಎಂಬ ವಿಚಾರವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ದೇಶದ ಜನರಿಗೀ ಜೆಸಿಂಡಾ ಧನ್ಯವಾದ ತಿಳಿಸಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಮಾರ್ಚ್ 25ರಂದು ಲಾಕ್‌ಡೌನ್ ಹೇರಲಾಗಿತ್ತು. ಆದರೆ ಇಂದು ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.