ಬಹರೈನ್(ಡಿ.01)‌: ಇಲ್ಲಿ ಭಾನುವಾರ ತಡರಾತ್ರಿ ನಡೆದ ಬಹರೈನ್‌ ಫಾರ್ಮುಲಾ ಒನ್‌ ಗ್ರಾಂಡ್‌ ಪ್ರಿಕ್ಸ್‌ ಕಾರು ರೇಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. 

ರೋಮೈನ್‌ ಗ್ರಾಸ್‌ಜೀನ್‌ ಮೊದಲನೇ ಲ್ಯಾಪ್‌ನಲ್ಲಿ 3ನೇ ಬದಿಯಲ್ಲಿದ್ದರು. ಡೇನಿಯಲ್‌ ಕ್ವಾಟ್‌ ಅವರ ಹಾಸ್‌ ಕಾರ್‌ಗೆ ಸ್ಪರ್ಷಿಸಿತು. ಗ್ರಾಸ್‌ಜೀನ್‌ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಅಪಘಾತಕ್ಕೀಡಾಯಿತು. 

ಕ್ಷಣಾರ್ಧದಲ್ಲೇ ಕಾರು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಚಾಲಕ ಗ್ರಾಸ್‌ಜೀನ್‌ ಕಾರಿನೊಳಗಿದ್ದರು. ಕೆಲವೇ ಸೆಕೆಂಡ್‌ಗಳಲ್ಲಿ ಗ್ರಾಸ್‌ಜೀನ್‌ ಕಾರಿನಿಂದ ಹೊರ ಬಂದರು. ಅಲ್ಲಿದ್ದ ರಕ್ಷಣಾ ಸಿಬ್ಬಂದಿಗಳು ಗ್ರಾಸ್‌ಜೀನ್‌ರನ್ನು ಪ್ರಥಮ ಚಿಕಿತ್ಸೆಗೆ ಕರೆದುಕೊಂಡು ಹೋದರು. ಗ್ರಾಸ್‌ಜೀನ್‌ಗೆ ಸಣ, ಪುಟ್ಟಗಾಯಗಾಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಟ್‌ ಸೀಟಲ್ಲಿ ಕ್ಯಾಪ್ಟನ್ ಕೊಹ್ಲಿ; ವಿರಾಟ್ ನಾಯಕತ್ವದ ಬಗ್ಗೆ ಅಸಮಾಧಾನ

ಭೀಕರ ಅಪಘಾತಕ್ಕೆ ತುತ್ತಾಗಿದ್ದ ಕಾರು ಚಾಲಕ ಗ್ರಾಸ್‌ಜೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಷ್ಟು ಬೇಗ ಗುಣಮುಖವಾಗಲಿ ಎನ್ನುವ ಕಾಳಜಿ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಗ್ರಾಸ್‌ಜೀನ್ ಟ್ವೀಟ್‌ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.