ಮೆಲ್ಬರ್ನ್‌(ಡಿ.09): ನ್ಯೂಜಿಲೆಂಡ್‌ನಲ್ಲಿ ಕಳೆದ ವರ್ಷ 51 ಮುಸ್ಲಿಮರ ನರಮೇಧ ಮಾಡಿದ ಆಸ್ಪ್ರೇಲಿಯಾ ಮೂಲದ ದಾಳಿಕೋರ ಬ್ರಂಟನ್‌ ಟರೆಂಟ್‌ ಭಾರತದಲ್ಲೂ 3 ತಿಂಗಳು ಕಾಲ ಕಳೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

792 ಪುಟಗಳ ರಾಯಲ್‌ ಕಮಿಶನ್‌ ತನಿಖಾ ವರದಿಯಲ್ಲಿ ಈ ಸ್ಪೋಟಕ ಮಾಹಿತಿ ಬಹಿರಂಗಪಡಿಸಲಾಗಿದೆ. ಮೊದಲು ಆಸ್ಪ್ರೇಲಿಯಾದಲ್ಲಿ ಜಿಮ್‌ ಟ್ರೈನರ್‌ ಆಗಿದ್ದ ಆತ 2012ರಲ್ಲಿ ಕೆಲಸ ಬಿಟ್ಟ. ನಂತರ 2014ರಿಂದ 2017ರವರೆಗೆ ವಿಶ್ವದ ವಿವಿಧ ಭಾಗಗಳಲ್ಲಿ ಸುತ್ತಾಡಿದ.

ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಮಾತ್ರ ಇಂಡೋನೇಷ್ಯಾದಲ್ಲಿ ಅವಕಾಶ!

ಈ ನಡುವೆ 2015ರ ನವೆಂಬರ್‌ 21ರಿಂದ 2016ರ ಫೆಬ್ರವರಿ 18ರವರೆಗೆ ಭಾರತದಲ್ಲೂ ಕಾಲ ಕಳೆದಿದ್ದ ಎಂದು ವರದಿ ಹೇಳಿದೆ. ಆದರೆ ಭಾರತದಲ್ಲಿ ಏನು ಮಾಡುತ್ತಿದ್ದ ಎಂಬ ಯಾವುದೇ ವಿವರವನ್ನು ವರದಿ ತಿಳಿಸಿಲ್ಲ.

ಆದರೆ, ವಿಶ್ವದ ವಿವಿಧ ಉಗ್ರ ಸಂಘಟನೆಗಳ ಜತೆ ಆತ ಸಂಪರ್ಕದಲ್ಲಿದ್ದ. ಈ ಅವಧಿಯಲ್ಲಿ ಉಗ್ರಗಾಮಿ ತರಬೇತಿ ಪಡೆದುಕೊಂಡು ಬಂದಿದ್ದ ಎಂದು ‘ನ್ಯೂಜಿಲೆಂಡ್‌ ಹೆರಾಲ್ಡ್‌’ ಪತ್ರಿಕೆ ವರದಿ ಮಾಡಿದೆ. ಅಲ್ಲದೆ, ಮುಸ್ಲಿಂ ವಿರೋಧಿ ಸಾಹಿತ್ಯಗಳನ್ನು ಓದಿಕೊಂಡಿದ್ದ ಎಂದು ತಿಳಿದುಬಂದಿದೆ. ಈಗ ಬಂಧಿಯಾಗಿರುವ ಟೆರಂಟ್‌ ಆಜೀವ ಜೈಲುವಾಸ ಅನುಭವಿಸುತ್ತಿದ್ದಾನೆ.