ಜೂಮ್ ಕಾಲ್‌ನಲ್ಲಿದ್ದಾಗಲೇ ಹಸ್ತಮೈಥುನ, ಪತ್ರಕರ್ತ ಸಸ್ಪೆಂಡ್!
ಜೂಮ್ ಕಾಲ್ ವೇಳೆ ಹಸ್ತಮೈಥುನ| ಪತ್ರಕರ್ತನ ಅಮಾನತ್ತುಗೊಳಿಸಿದ ಸಂಸ್ಥೆ| ಕ್ಷಮೆ ಯಾಚಿಸಿದ ಪತ್ರಕರ್ತ
ವಾಷಿಂಗ್ಟನ್(ಅ.24): ಕೊರೋನಾ ಮಹಾಮಾರಿ ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ನಿಂದಾಗಿ ಹೇರಲ್ಪಟ್ಟ ವರ್ಕ್ ಫ್ರಂ ಹೋಂನಿಂದ ಉದ್ಯೋಗಿಗಳ ಕಾರ್ಯವೈಖರಿ ಬದಲಾಗಿದೆ. ಮನೆ ಕೋಣೆಗಳೇ ಸದ್ಯ ಆಫೀಸ್‌ಗಳಾದರೆ, ವಿಡಿಯೋ ಕಾಲಿಂಗ್ ಆಪ್‌ಗಳು ಹೊಸ ವರ್ಚುವಲ್ ಕಾನ್ಫರೆನ್ಸ್ ಹಾಲ್‌ಗಳಾಗಿ ಬದಲಾಗಿವೆ. ಆದರೆ ಈ ವರ್ಚುವಲ್ ಮೀಟಿಂಗ್ ಹಾಲ್‌ಗಳು ಅನೇಕ ಮುಜುಗರವುಂಟು ಮಾಡುವ ಘಟನೆಗೆ ಸಾಕ್ಷಿಯಾಗಿವೆ. ಸದ್ಯ ನ್ಯೂ ಯಾರ್ಕರ್‌ನ ವರದಿಗಾರನೊಬ್ಬ ಸಹೋದ್ಯೋಗಿಗಳ ಜೊತೆ ಜೂಮ್ ಕಾನ್ಫರೆನ್ಸ್ ಕಾಲ್ ನಡೆಯುತ್ತಿದ್ದ ವೇಳೆ ಹಸ್ತಮೈಥುನ ಮಾಡಿ ಸಿಕ್ಕಾಕೊಂಡಿದ್ದಾನೆ.
ಜೆಫ್ರಿ ಟೂಬಿನ್ ಹೆಸರಿನ ವರದಿಗಾರನೇ ಕಳೆದ ವಾರ ನಡೆದ ಮೀಟಿಂಗ್ ವೇಳೆ ಹಸ್ತಮೈಥುನ ಮಾಡಿ ಸಿಕ್ಕಾಕೊಂಡವರು. ಇಂತಹ ವರ್ತನೆಗೆ ಸದ್ಯ ಅವರನ್ನು ಹುದ್ದೆಯಿಂದ ಅಮಾನತ್ತುಗೊಳಿಸಲಾಗಿದೆ.
ಖುಲ್ಲಂ, ಖುಲ್ಲಾ...! ಮಾಲ್‌ಲ್ಲಿ ಹಸ್ತಮೈಥುನ ಮಾಡ್ಕೊಂಡ ಯುವತಿ, ವಿಡಿಯೋ ವೈರಲ್!
ಇನ್ನು ಘಟನೆ ಬೆನ್ನಲ್ಲೇ ಕ್ಷಮೆ ಯಾಚಿಸಿರುವ ವರದಿಗಾರ ನಾನು ಕ್ಯಾಮೆರಾ ಆಫ್ ಇದೆ ಎಂದು ಭಾವಿಸಿ, ಇಂತಹ ಮುಜುಗರಕ್ಕೀಡಾಗುವ ಕೃತ್ಯವೆಸಗಿದ್ದೇನೆ. ನನ್ನ ಈ ವರ್ತನೆಗೆ ನಾನು ನನ್ನ ಹೆಂಡತಿ, ಕುಟುಂಬ ಸದಸ್ಯರು, ಮಿತ್ರರು ಹಾಗೂ ಸಹೋದ್ಯೋಗಿಗಳ ಬಳಿ ಕ್ಷಮೆ ಯಾಚಿಸುತ್ತೇನೆ. ಎಂದಿದ್ದಾರೆ.
ಇನ್ನು ಈ ಮೀಟಿಂಗ್‌ನಲ್ಲಿ ಅನೇಕ ವಿಭಾಗದ ಮುಖ್ಯಸ್ಥರೂ ಇದ್ದರು ಎನ್ನಲಾಗಿದೆ. ಇನ್ನು ಮೀಟಿಂಗ್ ನಡುವೆ ಚಿಕ್ಕದೊಂದು ಬ್ರೇಕ್ ನೀಡಲಾಗಿತ್ತು. ಈ ವೇಳೆ ಟೂಬಿನ್ ಬೇರೊಂದು ಕರೆಯಲ್ಲಿ ವ್ಯಸ್ಥನಾಗಿದ್ದ. ಈ ನಡುವೆ ಬೇರೆ ಉದ್ಯೋಗಿಗಳು ಬ್ರೇಕ್ ಮುಗಿಸಿ ಮರಳುವಷ್ಟರಲ್ಲಿ ಟೂಬಿನ್ ತನ್ನ ಲ್ಯಾಪ್‌ಟಾಪ್ ಕ್ಯಾಮೆರಾವನ್ನು ಕೆಳಗ್ಗೆ ಬಗ್ಗಿಸಿಟ್ಟು, ಹಸ್ತಮೈಥುನ ಮಾಡಿಕೊಂಡಿದ್ದರು. ಇದಾದ ಬಳಿಕ ಟೂಬಿನ್ ಈ ಮೀಟಿಂಗ್‌ನಿಂದ ಹೊರ ಹೋಗಿ, ಸ್ವಲ್ಪ ಸಮಯದ ಬಳಿಕ ಮತ್ತೆ ಮರಳಿ ಬಂದಿದ್ದರು. ಆದರೆ ಈ ನಡುವೆ ತಮ್ಮ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಇದೆ ಎಂಬುವುದನ್ನು ಅವರು ಸಂಪೂರ್ಣವಾಗಿ ಮರೆತಿದ್ದರೆಂಬುವುದು ಇತರ ಉದ್ಯೋಗಿಗಳ ಮಾತಾಗಿದೆ.
ಸದ್ಯ ಟೂಬಿನ್‌ನನ್ನು ಸ್ಸಪೆಂಡ್ ಮಾಡಲಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ನ್ಯೂ ಯಾರ್ಕರ್‌ನ ವಕ್ತಾರ ನತಾಲ್ ರಾಬ್ ತಿಳಿಸಿದ್ದಾರೆ.
ಈ ಹಿಂದೆಯೂ ಜೂಮ್ ಕರೆ ವೇಳೆ ಕ್ಯಾಮೆರಾ ಆಫ್ ಮಾಡಲು ಮರೆತು ಅನೇಕ ಮಂದಿ ಗಣ್ಯರು ಇಂತಹ ಮುಜುಗರ ಹುಟ್ಟಿಸುವ ಕೃತ್ಯವೆಸಗಿದ ಪ್ರಕರಣಗಳು ವರದಿಯಾಗಿವೆ.