ನ್ಯೂಯಾರ್ಕ್[ಜ.07]: ಹೊಸ ವರ್ಷ ಬಂತೆಂದರೆ ಸಾಕು ಕಂಠಪೂರ್ತಿ ಕುಡಿದು, ಕೇಕ್‌ ಕತ್ತರಿಸಿ, ಸಿಕ್ಕ-ಸಿಕ್ಕವರಿಗೆ ಹಸ್ತಲಾಘವ ಮಾಡಿ ಶುಭಾಶಯ ಹೇಳಲಾಗುತ್ತದೆ. ಆದ್ರೆ, ಹಾಲಿವುಡ್‌ ಸ್ಟಾರ್‌ ಡಾನ್ನಿ ವಹ್ಲ್‌ಬರ್ಗ್‌ ಅವರು ತಮ್ಮ ಪತ್ನಿ ಜೆನ್ನಿ ಮ್ಯಾಕ್‌ ಜೊತೆ ವಿಶೇಷವಾಗಿ ಹೊಸ ವರ್ಷಾಚರಣೆ ಆಚರಿಸಿದ್ದಾರೆ.

ಅದು ಹೇಗೆ ಅಂತೀರಾ, ಅಮೆರಿಕದ ಹೋಟೆಲ್‌ನಲ್ಲಿ ತಮ್ಮ ಆತಿಥ್ಯ ವಹಿಸಿದ್ದ ಮಹಿಳಾ ಸೇವಕಿಗೆ ಬರೋಬ್ಬರಿ 2020 ಡಾಲರ್‌(1.45 ಲಕ್ಷ ರು.) ಟಿಫ್ಸ್‌ ನೀಡಿ, ಹೊಸ ವರ್ಷದ ಶುಭ ಕೋರಿದ್ದಾರೆ.

ಅಂದರೆ, ಸುಮಾರು 5600 ರು. ಬಿಲ್‌ಗೆ 1.45 ಲಕ್ಷ ರು. ಟಿಫ್ಸ್‌ ನೀಡಿ ಡಾನ್ನಿ ವಹ್ಲ್‌ ಅವರು ಉದಾರತೆ ಮೆರೆದಿದ್ದಾರೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.