ಆಗಸದಿಂದ ಬಿತ್ತು ಒಂದೇ ಒಂದು ಮೀನು; ಇಡೀ ನಗರಕ್ಕೆ ಆವರಿಸಿತು ಕತ್ತಲು!
ಮೀನಿನ ಮಳೆ, ಕೆಂಪು ಮಳೆ, ಆಲಿ ಕಲ್ಲು ಮಳೆ ನೀವು ಕೇಳಿರುತ್ತೀರಿ. ಇದು ಮಳೆಯಲ್ಲಿ ಕೇವಲ ಒಂದೇ ಒಂದು ಮೀನು ಆಗಸದಿಂದ ಬಿದ್ದಿದೆ. ಇಷ್ಟೇ ನೋಡಿ ಇಡೀ ನಗರದಲ್ಲಿ ಕತ್ತಲಲ್ಲಿ ಮುಳುಗಿದೆ. ಜನರು ಆತಂತಗೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕೌತುಕ ಹಾಗೂ ದುಗುಡವನ್ನು ಬಿಚ್ಚಿಟ್ಟಿದ್ದಾರೆ. ಈ ಘಟನೆ ಹಿಂದಿರುವ ಪವಾಡವೇನು?
ನ್ಯೂಜರ್ಸಿ(ಆ.18) ಕಾಲ ಸರಿ ಇಲ್ಲ ಅನ್ನೋ ಮಾತನ್ನು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತೇವೆ. ಪ್ರವಾಹ, ಗುಡ್ಡ ಕುಸಿತ, ಹಿಂದೆಂದು ಕಾಣದಂತೆ ಮಳೆ, ಬರಗಾಲ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ಕೆಂಪು ನೀರಿನ ಮಳೆ, ಮೀನಿನ ಮಳೆ, ಆಲಿಕಲ್ಲು ಮಳೆ ಸೇರಿದಂತೆ ಹಲವು ಮಳೆಗಳು ಪ್ರಳಯದ ಆತಂಕ, ಸರ್ವನಾಶದ ಸೂಚನೆ ಅನ್ನೋ ಊಹಾಪೋಹಳನ್ನು ಹೆಚ್ಚಿಸಿದೆ. ಈ ಬೆಳವಣಿಗೆ, ಆತಂಕದ ನಡುವೆ ಆಗಸದ ಮೇಲಿನಿಂದ ದೊಡ್ಡ ಗಾತ್ರದ ಮೀನೊಂದು ಬಿದ್ದಿದೆ. ಮರುಕ್ಷಣದಲ್ಲೇ ಇಡೀ ನಗರಕ್ಕೆ ಕತ್ತಲು ಆವರಿಸಿದ ಘಟನೆ ಅಮೆರಿಕದ ನ್ಯೂಜರ್ಸಿಯಲ್ಲಿ ನಡೆದಿದೆ.
ನ್ಯೂಜರ್ಸಿ ನಗರದಲ್ಲಿ ನಡೆದ ಈ ಘಟನೆಯಿಂದ ಜನರು ಭಯಭೀತಗೊಂಡಿದ್ದರು. ಸಂದೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಡೀ ನಗರ ಕತ್ತಲಲ್ಲಿ ಮುಳುಗಿದಿದೆ. ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಏನಾಗಿದೆ ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆಗಸದಿಂದ ಮೀನೊಂದು ಬಿದ್ದು ನಗರ ಕತ್ತಲಲ್ಲಿ ಮುಳುಗಿದೆ ಅನ್ನೋ ಸುದ್ದಿ ಹರಿದಾಡಿದೆ. ಇದು ನಿಜ ಕೂಡ. ಆಗಸದಿಂದ ಬಿದ್ದ ಮೀನಿನಿಂದ ನಗರ ಕತ್ತಲಲ್ಲಿ ಆವರಿಸಿದೆ ಎಂದು ನ್ಯೂಜರ್ಸಿ ಕೇಂದ್ರ ವಿದ್ಯುತ್ ಘಟಕದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬಿಲ್ ಕಟ್ಟದ ಕಾರಣ ವಿದ್ಯುತ್ ಕಡಿತದ ಅಲರ್ಟ್ ಮೆಸೇಜ್, ಲಿಂಕ್ ಕ್ಲಿಕ್ ಮಾಡಿ ಕೆಟ್ಟ ಗ್ರಾಹಕ!
ಅಷ್ಟಕ್ಕೂ ಆಗಿದ್ದೇನು? ನ್ಯೂಜರ್ಸಿಯ ಸೆಂಟ್ರಲ್ ಎಲೆಕ್ಟ್ರಿಸಿಟಿ ಆ್ಯಂಡ್ ಲೈಟ್ ಘಟಕದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರು. ನೋಡ ನೋಡುತ್ತಿದ್ದಂತೆ ಆಗಸದಿಂದ ಸಣ್ಣ ವಸ್ತುವೊಂದು ಭೂಮಿಗೆ ಅಪ್ಪಳಿಸುತ್ತಿರುವ ದೃಶ್ಯ ಕಂಡಿದೆ. ಸಿಬ್ಬಂದಿಯೊರ್ವ ಇದನ್ನು ಗಮನಿಸಿದ್ದಾನೆ. ದಿಟ್ಟಿಸಿ ನೋಡುತ್ತಿದ್ದಂತೆ ಅದು ದೊಡ್ಡ ಗಾತ್ರದ ಮೀನು. ಆಗಸದಿಂದ ಭೂಮಿಯತ್ತ ತೂರಿಬರುತ್ತಿದ್ದ ಮೀನು, ವಿದ್ಯುತ್ ಕೇಂದ್ರ ಘಟಕದ ಮುಖ್ಯ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ. ಈ ಮೀನು ಬಿದ್ದ ರಭಸದಿಂದ ಟ್ರಾನ್ಸ್‌ಫಾರ್ಮ್ ವಿದ್ಯುತ್ ಪ್ರವಹಿಸಿ ಸ್ಫೋಟಗೊಂಡಿದೆ.
ಟ್ರಾನ್ಸ್‌ಫಾರ್ಮ್‌ಗೆ ಬಿದ್ದ ಮೀನು ಬಳಿಕ ಅರ್ಧ ಸುಟ್ಟು ಕೆಳಕ್ಕೆ ಬಿದ್ದರೆ, ಇತ್ತ ಮುಖ್ಯ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಪಕ್ಕದಲ್ಲಿದ್ದ ವೈಯರ್, ಇತರ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದೆ. ವೈಯರ್‌ಗಳು ಸುಟ್ಟು ಹೋಗಿದೆ. ಈ ಕುರಿತು ನ್ಯೂಜರ್ಸಿ ಪೊಲೀಸ್ ಅದಿಕಾರಿಗಳು ಮಾಡಿದ ಪ್ರಕಟಣೆ ಮತ್ತಷ್ಟು ವೈರಲ್ ಆಗಿದೆ. ಆಗಸದಿಂದ ಮೀನೊಂದು ಬಿದ್ದು ಟ್ರಾನ್ಸ್‌ಫಾರ್ಮ್ ಸುಟ್ಟು ಹೋಗಿದೆ. ಇದೀಗ ಮೀನು ಕೆಳಕ್ಕೆ ಬೀಳಿಸಿದ ಗಿಡುಗನಿಗಾಗಿ ಹುಡುಕಾಟ ಆರಂಭಗೊಂಡಿದೆ. ಈ ಗಿಡುಗ ದಕ್ಷಿಣದತ್ತ ಹಾರಿರುವ ಮಾಹಿತಿಯೂ ಲಭ್ಯವಾಗಿದೆ. ಈ ಗಿಡುಗನ ಕುರಿತು ಯಾವುದೇ ಮಾಹಿತಿ ಸಿಕ್ಕರೆ, ನಮ್ಮ ಹಿರಿಯ ಅಧಿಕಾರಿ ಜಾನ್ ಸಿಲ್ವರ್‌ಗೆ ಮಾಹಿತಿ ನೀಡಿ. ಕಾರಣ ಈ ಮೀನಿನ ಪ್ರಕರಣವನ್ನು ಅವರೇ ತನಿಖೆ ಮಾಡುತ್ತಿದ್ದಾರೆ ಎಂದಿದೆ.
ಲವರ್ ಮೀಟ್ ಆಗೋಕೆ ಪ್ರತೀ ರಾತ್ರಿ ಗ್ರಾಮದ ಟ್ರಾನ್ಸ್‌ಫಾರ್ಮರ್ ಫ್ಯೂಸ್ ತೆಗೀತಿದ್ದ ಯುವತಿ!
ಹೌದು, ಹಾರಾಡುತ್ತಿದ್ದ ಗಿಡುಗನ ಕಾಲುಗಳಿಂದ ಮೀನು ಜಾರಿ ಟ್ರಾನ್ಸ್‌ಫಾರ್ಮ್ ಮೇಲೆ ಬಿದ್ದಿದೆ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದುರಸ್ಥಿ ಕಾರ್ಯಗಳು ನಡೆಯುತ್ತದಿ.ಮುಖ್ಯ ಟ್ರಾನ್ಸ್‌ಫಾರ್ಮ್ ಹಾಗೂ ಸಬ್ ಟ್ರಾನ್ಸ್‌ಫಾರ್ಮ್‌ಗಳು ಸುಟ್ಟು ಹೋಗಿರುವ ಕಾರಣ, ಎಲ್ಲಾ ವಿದ್ಯುತ್ ಸಂಪರ್ಕ ಸ್ಥಗಿತಗೊಳಿ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಅಡಚಣೆಗಾಗಿ ಕ್ಷಮಿಸಿ ಎಂದು ನ್ಯೂಜರ್ಸಿ ವಿದ್ಯುತ್ ಘಟಕದ ಅಧಿಕಾರಿಗಳು ಹೇಳಿದ್ದಾರೆ.