ಇಟಲಿ(ಜೂ.01): ಕೊರೋನಾ ವೈರಸ್ ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಇಟಲಿ ಭೀಕರತೆಗೆ ಸಾಕ್ಷಿಯಾಗಿತ್ತು. ಇದೀಗ ಕೊಂಚ ಸುಧಾರಿಸುತ್ತಿದೆ. ಕೊರೋನಾಗೆ ಮೃತರಾದ ಗರಿಷ್ಠ ಸಂಖ್ಯೆಯಲ್ಲಿ ಇಟಲಿ 3ನೇ ಸ್ಥಾನದಲ್ಲಿದೆ. ಕೊರೋನಾ ವೈರಸ್‌ನಿಂದ ಇಟಲಿಯಲ್ಲಿ 33,415 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಇಟಲಿಯ ಸ್ಯಾನ್ ರಫೈಲೇ ಆಸ್ಪತ್ರೆ ವೈದ್ಯ ಆಲ್ಬರ್ಟ್ ಝಂಗ್ರಿಲೋ ಅಧ್ಯಯನ ವರದಿ ಜನರಲ್ಲಿ ನೆಮ್ಮದಿ ತಂದಿದೆ.

ರಾಜ್ಯದಲ್ಲಿ ಭಾನುವಾರ 299, ಸೋಮವಾರ ಎಷ್ಟಾಗಲಿದೆ ಕೊರೋನಾ ಕೇಸ್..?.

ಹೊಸ ಕೊರೋನಾ ವೈರಸ್‌ ಶಕ್ತಿ ಕ್ಷೀಣಿಸಿದೆ. ಆರಂಭದಲ್ಲಿ ವೈರಸ್ ಹೆಚ್ಚು ಶಕ್ತಿಶಾಲಿಯಾಗಿತ್ತು. ಇಷ್ಟೇ ಅಲ್ಲ ಮಾರಕವಾಗಿತ್ತು. ಆದರೆ ಈಗ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕೊರೋನಾ ವೈರಸ್ ಸಾಮರ್ಥ್ಯ ಕುಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೋನಾ ಆರ್ಭಟ ಕಡಿಮೆಯಾಗಲಿದೆ ಎಂದು ಆಲ್ಬರ್ಟ್ ಝಂಗ್ರಿಲೋ  ಹೇಳಿದ್ದಾರೆ.

120 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿ: ಕೊರೋನಾ ಲಸಿಕೆ ಎಲ್ಲಿಗೆ ಬಂತು?.

ವೈರಸ್ ಕುರಿತು ಅಧ್ಯಯನ ಮಾಡಿದ ಆಲ್ಬರ್ಟ್ ಝಂಗ್ರಿಲೋ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಎರಡು ತಿಂಗಳ ಮೊದಲಿನ ವೈರಸ್ ಸಾಮರ್ಥ್ಯ ಹಾಗೂ ಅದು ಸೃಷ್ಟಿಸುತ್ತಿದ್ದ ಭೀಕರತೆ ಹೆಚ್ಚಿತ್ತು. ಆದರೆ ಈಗ ಕಾಣಿಸಿಕೊಳ್ಳುತ್ತಿರುವ ಕೊರೋನಾ ವೈರಸ್ ಶಕ್ತಿ ಕಳೆಗುಂದಿದೆ. ಹೀಗಾಗಿ ಕೊರೋನಾ ವೈರಸ್ ಇತರ ರೋಗದಂತೆ ಸೈಲೆಂಟ್ ಆಗಲಿದೆ ಎಂದು ಆಲ್ಬರ್ಟ್ ಝಂಗ್ರಿಲೋ ಹೇಳಿದ್ದಾರೆ.