ಕೊರೋನಾ ವೈರಸ್ ಭಾರತವನ್ನು ಹಿಂಡಿ ಹಿಪ್ಪೆ ಮಾಡಿದೆ. ಈಗಾಗಲೇ ಪಶ್ಚಿಮ ಬಂಗಾಳ, ಬ್ರೆಜಿಲ್, ಸೌತ್ ಆಫ್ರಿಕಾ ಸೇರಿದಂತೆ ಹಲೆವೆಡೆ  ಹೊಸ ಕೊರೋನಾ ತಳಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಕೊರೋನಾ ತಳಿ ಪತ್ತೆಯಾಗಿದ್ದು, ಇದು ಮಿಂಚಿನ ವೇಗದಲ್ಲಿ ಹರಡುವುದಲ್ಲೇ, 1 ಗಂಟೆ ಗಾಳಿಯಲ್ಲೂ ಸಕ್ರೀಯವಾಗಿರಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊಲೊಂಬೊ(ಏ.24): ಕೊರೋನಾ ವೈರಸ್ ಆರ್ಭಟ ಮುಂದುವರಿಯುವುದರ ಜೊತೆಗೆ ಹೊಸ ಹೊಸ ತಳಿಗಳು ಪತ್ತೆಯಾಗುತ್ತಿದೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಶ್ರೀಲಂಕಾದಲ್ಲಿ ಹೊಸ ಕೊರೋನಾ ವೈರಸ್ ತಳಿ ಪತ್ತೆಯಾಗಿದೆ. ಇದು ಮಿಂಚಿನ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ.

ಬ್ರೆಜಿಲ್‌ನಲ್ಲಿ ಹಬ್ಬಿದ 'ಸೂಪರ್ ಕೋವಿಡ್ 19': ಆತಂಕದಲ್ಲಿ ವಿಶ್ವ, ಲಸಿಕೆಯೂ ನಿಷ್ಪ್ರಯೋಜಕ!

ಲಂಕಾದಲ್ಲಿ ಪತ್ತೆಯಾಗಿರುವ ಹೊಸ ಕೊರೋನಾ ತಳಿ ಮತ್ತೊಂದು ಆತಂಕಕಾರಿ ವಿಚಾರ ಎಂದರೆ, ಇದು 1 ಗಂಟೆ ಕಾಲ ಗಾಳಿಯಲ್ಲಿ ಸಕ್ರಿಯವಾಗಿರುತ್ತದೆ. ದೆಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಅತೀ ವೇಗದಲ್ಲಿ ಕುಗ್ಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಜನರು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಹೊಸ ತಳಿ ಪತ್ತೆ ಹಚ್ಚಿದ ಕೊಲೊಂಬೊದ ಜಯವರ್ದನಪುರ ವಿಶ್ವವಿದ್ಯಾಲಯ ಹೇಳಿದೆ.

ಶ್ರೀಲಂಕಾದಲ್ಲಿ ಪತ್ತೆಯಾದ ಕೊರೋನಾ ತಳಿಗಳ ಪೈಕಿ ಇದೀಗ ಪತ್ತೆಯಾಗಿರುವ ಈ ತಳಿ ಅತ್ಯಂತ ಅಪಾಯಕಾರಿ ಹಾಗೂ ಅತೀ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಶ್ರೀಲಂಕಾ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಜನರು ಕಟ್ಟು ನಿಟ್ಟಾಗಿ ಕೊರೋನಾ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ.