Asianet Suvarna News Asianet Suvarna News

ಬ್ರೆಜಿಲ್‌ನಲ್ಲಿ ಹಬ್ಬಿದ 'ಸೂಪರ್ ಕೋವಿಡ್ 19': ಆತಂಕದಲ್ಲಿ ವಿಶ್ವ, ಲಸಿಕೆಯೂ ನಿಷ್ಪ್ರಯೋಜಕ!

ಕೊರೋನಾ ಲಸಿಕೆ ಬಂತೆಂದು ಖುಷಿ ಪಟ್ಟವರಿಗೆ ಮತ್ತೆ ಶಾಕ್| ಬ್ರೆಜಿಲ್‌ನಲ್ಲಿ ಪತ್ತೆಯಾಯ್ತು ರೂಪಾಂತರಿ ಕೊರೋನಾ ವೈರಸ್| ಬಲು ಡೇಂಜರ್, ಲಸಿಕೆಗೂ ಜಗ್ಗಲ್ಲ

Brazil Scientists See Signs of New Virus Mutations Amid Outbreak pod
Author
Bangalore, First Published Jan 16, 2021, 4:36 PM IST

ಬ್ರೆಜಿಲಗ್(ಜ.16): ಕೊರೋನಾ ಮಹಾಮಾರಿಯಿಂದ ಕಂಗೆಟ್ಟಿರುವ ಬ್ರೆಜಿಲ್‌ನಲ್ಲಿ ಕೊರೋನಾ ರೂಪಾಂತರಗೊಂಡಿದ್ದು, ಇದು ಪ್ರಾಣಹಾನಿಯುಂಟು ಮಾಡುತ್ತಿದೆ.  ಅಧ್ಯಯನವೊಂದರಲ್ಲಿ ಶಾಕಿಂಗ್ ಮಾಹಿತಿ ಬಯಲಾಗಿದ್ದು, ಪ್ರಸ್ತುತ ವರ್ಷ ಆಸ್ಪತ್ರೆಗೆ ದಾಖಲಾಗಿದ್ದ ಶೇ. 40ರಷ್ಟು ರೋಗಿಗಳು ಈ ಮಾರಕ ವೈರಸ್‌ನಬಿಂದಲೇ ಮೃತಪಟ್ಟಿದ್ದಾರೆಂಬ ವಿಚಾರ ಬಯಲಾಗಿದೆ. ಸದ್ಯ ರೂಪಾಂತರಗೊಂಡ ಈ ವೈರಸ್ ಅಮೆರಿಕಾಗೆ ಕಾಲಿಟ್ಟಿದ್ದು, ವಿಶ್ವಾದ್ಯಂತ ಭೀತಿ ಹುಟ್ಟಿಸಿದೆ ಎನ್ನಲಾಗಿದೆ. 

ಇನ್ನು ಕೊರೋನಾದ ಈ ಹೊಸ ಮಾದರಿ ಲಸಿಕೆಯೂ ಜಗ್ಗಲ್ಲ ಎಂಬುವುದು ತಜ್ಞರ ಮಾತಾಗಿದೆ. ಸದ್ಯ ಅಪಾಯದಲ್ಲಿರುವ ಬ್ರೆಜಿಲ್‌ ಭಾರತದ  ಬಳಿ ಕೊರೋನಾ ಲಸಿಕೆಗೆ ಮನವಿ ಮಾಡಿದೆ ಎಂದೂ ವರದಿಗಳು ತಿಳಿಸಿವೆ. ಅಷಷ್ಟಕ್ಕೂ ಈ ಹೊಸ ವೈರಸ್ ಯಾವುದು? ಇಲ್ಲಿದೆ ವಿವರ

ರೋಗಿಗಳಿಂದ ತುಂಬಿದ ಆಸ್ಪತ್ರೆಗಳು

ಕೊರೋನಾದ ಈ ಹೊಸ ರೂಪ ಬ್ರೆಜಿಲ್‌ನ ಅಮೆಜಾನಾಸ್ ಎಂಬ ರಾಜ್ಯದಿಂದ ವಿಶ್ವಾದ್ಯಂತ ಹರಡಿಕೊಳ್ಳಲಾರಮಭಿಸಿದೆ. ಈ ನೂತನ ವೈರಸ್ ಕಳೆದ ಜುಲೈನಿಂದಲೇ  ಬ್ರೆಜಿಲ್‌ನಲ್ಲಿ ಹರಡಿಕೊಳ್ಳಲಾರಂಭಿಸಿದೆ ಎಂಬುವುದು ವಿಜ್ಞಾನಿಗಳ ಮಾತು. ಇನ್ನು ಬ್ರೆಜಿಲ್‌ನ ಉತ್ತರ ಹಾಗೂ ಪೂರ್ವ ಭಾಗದಲ್ಲಿ ಆರೋಗ್ಯ ಸೇವೆ ಬಹಳ ವಿರಳವಾಗಿದೆ. ಕೆಲವರಿಗಷ್ಟಟೇ ವೈದ್ಯಕೀಯ ಸೇವೆ ಲಭಿಸುತ್ತಿದೆ. ಹೀಗಿರುವಾಗ ಕೊರೋನಾದ ಈ ಹೊಸ ಮಾದರಿ ಈ ಪ್ರದೇಶದಲ್ಲಿ ರಣಕೇಕೆ ಹಾಕಲಾರಂಭಿಸಿದ್ದು, ಸಾವಿನ ಸಂಖ್ಯೆಯೂ ಹೆಚ್ಚಲಾರಂಭಿಸಿದೆ.

Follow Us:
Download App:
  • android
  • ios