Asianet Suvarna News Asianet Suvarna News

ಪರೀಕ್ಷೆಯ ವೇಳೆ 1500ಕ್ಕೂ ಅಧಿಕ ಪ್ರಾಣಿಗಳ ಸಾವು, ಎಲಾನ್‌ ಮಸ್ಕ್‌ಗೆ ಫೆಡರಲ್‌ ತನಿಖೆಯ ಬಿಸಿ!

ನ್ಯೂರಾಲಿಂಕ್ 2018 ರಿಂದ 280 ಕ್ಕೂ ಹೆಚ್ಚು ಹಂದಿಗಳು, ಮಂಗಗಳು ಮತ್ತು ಕುರಿಗಳು ಸೇರಿದಂತೆ 1,500 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಂದಿದೆ ಎಂದು ವರದಿಯಾಗಿದೆ.

Neuralink and Elon Musk Under Federal Probe For Reportedly Killing 1500 Animals san
Author
First Published Dec 6, 2022, 4:59 PM IST

ನವದೆಹಲಿ (ಡಿ.6): ಮುಂದಿನ ಆರು ತಿಂಗಳಲ್ಲಿ ಮಾನವನ ಮೆದುಳಿಗೆ ಚಿಪ್‌ ಹಾಕುವುದಾಗಿ ಘೋಷಣೆ ಮಾಡಿರುವ ಎಲಾನ್‌ ಮಸ್ಕ್‌ನ ನ್ಯೂರಾಲಿಂಕ್‌ ಕಂಪನಿ ಹಾಗೂ ಸ್ವತಃ ಎಲಾನ್‌ ಮಸ್ಕ್‌ ಈಗ ಅಮೆರಿಕದ ಫೆಡರಲ್‌ ಏಜೆನ್ಸಿಯ ತನಿಖೆಯ ಅಡಿಯಲ್ಲಿದೆ. ವೈದ್ಯಕೀಯ ಸಾಧನಗಳ ತಯಾರಿಕೆ ಮತ್ತು ಪರೀಕ್ಷೆಯಲ್ಲಿ ತೊಡಗಿರುವ ಕಂಪನಿಯ ಮೇಲೆ ಫೆಡರಲ್‌ ಏಜೆನ್ಸ್‌, ಪ್ರಾಣಿಗಳನ್ನು ಕೊಂದ ಆರೋಪ ಹೊರಿಸಲಾಗಿದೆ. ಪ್ರಾಣಿ-ಕಲ್ಯಾಣ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮೆರಿಕ ಸರ್ಕಾರವು ಕಂಪನಿಯ ಮೇಲೆ ತನಿಖೆ ಮಾಡುವತೆ ಸೂಚನೆ ನೀಡಿದೆ. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಆಂತರಿಕ ಸಿಬ್ಬಂದಿಯ ದೂರುಗಳ ನಡುವೆ ಕಾನೂನು ತಪಾಸಣೆ ನಡೆದಿದೆ. ಅವರ ಪ್ರಕಾರ, ಕಂಪನಿಯು ಪ್ರಾಣಿಗಳ ಮೇಲೆ ತನ್ನ ಉತ್ಪನ್ನಗಳ ಅನಗತ್ಯ ಪರೀಕ್ಷೆ ನಡೆಸುತ್ತಿದ್ದು, ಇವು ಸಾವುಗಳು ಮತ್ತು ಪ್ರಾಣಿಗಳಿಗೆ ತೊಂದರೆ ಉಂಟುಮಾಡುತ್ತದೆ. ನ್ಯೂರಾಲಿಂಕ್ ಕಾರ್ಪೊರೇಷನ್ ಮಾಸ್ಟರ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದೆ, ಅಲ್ಲಿನ ವಿಜ್ಞಾನಿಗಳ ತಂಡವು ಪಾರ್ಶ್ವವಾಯುವಿಗೆ ಒಳಗಾದ ಜನರು ದೈನಂದಿನ ಜೀವನವನ್ನು ಮರಳಿ ಪಡೆಯಲು ಸಹಾಯ ಮಾಡಲು ಅವರ ಮೆದುಳಿಗೆ ಚಿಪ್‌ ಅಳವಡಿಕೆ ಮಾಡುವ ಮಾರ್ಗಗಳನ್ನು ಅಭಿವೃದ್ಧಿ ಮಾಡುತ್ತಿದೆ. ಹಾಗೇನಾದರೂ ಮಸ್ಕ್‌ ಈ ಯೋಜನೆಯನ್ನು ಯಶಸ್ವಿಯಾದಲ್ಲಿ ಅಂಧರು ಹಾಗೂ ಪಾರ್ಶ್ವವಾಯುವಿಗೆ ತುತ್ತಾದವರಿಗೆ ದೊಡ್ಡ ಮಟ್ಟದ ಸಹಾಯವಾಗಲಿದೆ.

ನ್ಯೂರಾಲಿಂಕ್ 2018 ರಿಂದ 280 ಕ್ಕೂ ಹೆಚ್ಚು ಹಂದಿಗಳು, ಮಂಗಗಳು ಮತ್ತು ಕುರಿಗಳನ್ನು ಒಳಗೊಂಡಂತೆ 1,500 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಂದಿದೆ ಎಂದು ವರದಿಯಾಗಿದೆ. ಆದರೆ, ಈ ವಿಚಾರರವನ್ನು ತಿಳಿಸಿರುವ ಮೂಲವು, ಅಂಕಿ-ಅಂಶಗಳು ನಿಖರವಾಗಿಲ್ಲದೇ ಇರಬಹುದು ಎಂದೂ ಹೇಳಿದೆ. ಏಕೆಂದರೆ ನ್ಯೂರಾಲಿಂಕ್‌ ಕಂಪನಿಯು ಪರೀಕ್ಷೆಗಾಗಿ ಬಳಸುವ ಪ್ರಾಣಿಗಳ ಸಂಖ್ಯೆಯ ನಿಖರವಾದ ದಾಖಲೆಯನ್ನು ಎಂದಿಗೂ ಇರಿಸಿಲಿಲ್ಲ. ಇದರಲ್ಲಿ ಬಹುತೇಕ ಪ್ರಾಣಿಗಳು ಸಾವು ಕಂಡಿವೆ ಎಂದಿದ್ದಾರೆ.

ನ್ಯೂರಾಲಿಂಕ್‌ನ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಕೆಲವು ಫಲಿತಾಂಶಗಳನ್ನು ವೇಗವಾಗಿ ಪಡೆಯಲು ಮಸ್ಕ್‌ ತಮ್ಮ ಕೆಲಸಗಾರರಿಗೆ ಒತ್ತಾಯಿಸುತ್ತಿದ್ದಾರೆಂದು ತೋರುತ್ತದೆ. ವರದಿಗಳ ಪ್ರಕಾರ, ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಗೆ ಮತ್ತೆ ನಡೆಯಲು ಸಹಾಯ ಮಾಡುವ ಮೂಲಕ ಸ್ವಿಸ್ ಸಂಶೋಧಕರ ಎಲೆಕ್ಟ್ರಿಕಲ್ ಇಂಪ್ಲಾಂಟೇಶನ್‌ನಲ್ಲಿ ಹೊಸ ಸಾಧನೆಗಳ ಕುರಿತು ಎಲಾನ್‌ ಮಸ್ಕ್‌ ತಮ್ಮ ಕೆಲಸಗಾರರಿಗೆ ಫೆಬ್ರವರಿ 8 ರಂದು ಸುದ್ದಿ ಲೇಖನವನ್ನು ಹಂಚಿಕೊಂಡಿದ್ದಾರೆ ಎಂದು ಉದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ.

Elon Musk Neuralink : ಸಂಕಷ್ಟದಲ್ಲಿ ಟೆಸ್ಲಾ ಸಿಇಓ: ಸಂಶೋಧನೆ ಹೆಸರಲ್ಲಿ ಪ್ರಾಣಿಹಿಂಸೆ ಆರೋಪ!

ಇದರ ಸಹಾಯದಿಂದ ಪಾರ್ಶ್ವವಾಯುವಿಗೆ ತುತ್ತಾದ ವ್ತಕ್ತಿ, ತಮ್ಮ ಕೈಗಳನ್ನು ಬಳಸಿ ಕೆಲಸ ಮಾಡಲು ಆರಂಭಿಸಬಹುದು ಎಂದು ಅವರು ಟಿಪ್ಪಣಿ ಹಚಿಕೊಂಡಿದ್ದಾರೆ. ಇದರ ಬಳಿಕ ಸಿಟ್ಟಾಗಿದ್ದ ಮಸ್ಕ್‌ ತಮ್ಮ ಉದ್ಯೋಗಿಗಳೊಂದಿಗೆ ಹತಾಶೆಯ ಮೆಸೇಜ್‌ಅನ್ನು ಕೂಡ ಹಂಚಿಕೊಂಡಿದ್ದಾರೆ. ಇದು ಹೇಳೋದು ಏನೆಂದರೆ, ನಾವು ವೇಗವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅನ್ನೋದು. ಇದು ನನಗೆ ಹುಚ್ಚು ಹಿಡಿದಂತೆ ಮಾಡಿಸಿದೆ ಎಂದು ಅದರಲ್ಲಿ ಬರೆದಿದ್ದಾರೆ.

ಎಲಾನ್‌ ಮಸ್ಕ್‌ ಹೊಸ ಸಾಹಸ, ಮಾನವನ ಮೆದುಳಿಗೆ ಚಿಪ್‌!

ಮಸ್ಕ್‌ ಯೋಜನೆ ಏನು: ನ್ಯೂರಾಲಿಂಕ್‌ ಸಂಸ್ಥೆ, ಸರ್ಜಿಕಲ್‌ ರೋಬೋಟ್‌ (ಆರ್‌1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್‌ ಚಿಪ್‌ ಅಭಿವೃದ್ಧಿಪಡಿಸಿದೆ. ಅದನ್ನು ಮೆದುಳಿನಲ್ಲಿ ಅಳವಡಿಸಲಾಗುತ್ತದೆ. ಈ ಚಿಪ್‌ನ ಹೊರಭಾಗದಲ್ಲಿ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ವೈರ್‌ಗಳು (ಎಲೆಕ್ಟ್ರೋಡ್‌ಗಳು) ಇರಲಿದ್ದು, ಅವು ಎಲ್ಲೆಡೆ ಹರಡಿಕೊಂಡು ಮೆದುಳಿನ ಭಾಗದೊಂದಿಗೆ ಸಂಪರ್ಕ ಬೆಳೆಸಲಿವೆ. ಇದು ಮೆದುಳಿಗೆ ಬರುವ ಸಂದೇಶ ಸಂಗ್ರಹ ಹಾಗೂ ಮೆದುಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ. ಈ ಮೂಲಕ ವ್ಯಕ್ತಿಯು ಮನಸ್ಸಿನಲ್ಲಿ ಅಂದುಕೊಂಡ ವಿಷಯವನ್ನು ಮಾಡುವುದು ಸಾಧ್ಯವಾಗುತ್ತದೆ. ಅಂದರೆ ಚಿಪ್‌ ಅಳವಡಿಸಿದ ವ್ಯಕ್ತಿಯೊಬ್ಬ ತನ್ನ ತಲೆಯಲ್ಲಿ ಮೊಬೈಲ್‌ ಆನ್‌ ಮಾಡಬೇಕು ಅಥವಾ ಕರೆ ಮಾಡಬೇಕೆಂದು ಬಯಸಿದರೆ ಆ ಸಂದೇಶ ಚಿಪ್‌ ಮೂಲಕ ನೇರವಾಗಿ ಮೊಬೈಲ್‌ಗೆ ರವಾನೆಯಾಗಿ ಮೊಬೈಲ್‌ ಆನ್‌ ಆಗುತ್ತದೆ.

Follow Us:
Download App:
  • android
  • ios