ಭಾರತದ ಕೊರೋನಾ ಲಸಿಕೆಗೆ ಸಿಕ್ತು 9 ಯುರೋಪಿಯನ್ ರಾಷ್ಟ್ರದ ಅನುಮತಿ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದ 9 ರಾಷ್ಟ್ರ ತಮ್ಮ ರಾಷ್ಟ್ರೀಯ ಪ್ರಯಾಣ ಪಟ್ಟಿಯಲ್ಲಿ ಕೋವಿಶೀಲ್ಡ್ ಲಸಿಕೆ ಸೇರ್ಪಡೆ

ನವದೆಹಲಿ(ಜು.01): ಭಾರತದ ಕೊರೋನಾ ಲಸಿಕೆ ಕೋವಿಡ್ ವಿರುದ್ದದ ಹೋರಾಟದಲ್ಲಿ ಹೆಚ್ಚು ಪರಿಣಾಮಕಾರಿ ಅನ್ನೋದು ಈಗಾಗಲೇ ಸಾಬೀತಾಗಿದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಕೋವಿಶೀಲ್ಡ್ ಲಸಿಕೆಗೆ 9 ಯುರೋಪಿಯನ್ ರಾಷ್ಟ್ರಗಳು ಅನುಮತಿ ನೀಡಿದೆ. ಈ ಮೂಲಕ ಈ 9 ರಾಷ್ಟ್ರಗಳ ಪ್ರಯಾಣಕ್ಕೆ ಕೋವಿಶೀಲ್ಡ್ ಲಸಿಕೆ ಪಡೆವರಿಗೆ ಅನುಮತಿ ನೀಡಿದೆ. ಈ ಮಾನ್ಯತೆ ಇಂದಿನಿಂದ ಅನ್ವಯವಾಗುತ್ತಿದೆ.

ವಿದೇಶಕ್ಕೆ ತೆರಳುವವರಿಗೆ 2ನೇ ಡೋಸ್‌ ಲಸಿಕೆಯ ಅಂತರ 4 ವಾರಕ್ಕೆ ಇಳಿ​ಕೆ!

9 ಯುರೋಪಿಯನ್ ರಾಷ್ಟ್ರಗಳು ಇದೀಗ ಕೋವಿಶೀಲ್ಡ್ ಲಸಿಕೆಗೆ ತಮ್ಮ ದೇಶದಲ್ಲಿ ಅಧೀಕೃತ ಮಾನ್ಯತೆ ನೀಡಿದೆ. ಇದರಿಂದ ಕೋವಿಶೀಲ್ಡ್ ಲಸಿಕೆ ಪಡೆದವರು ಜರ್ಮನಿ, ಐಲ್ಯಾಂಡ್, ಸ್ಪೇನ್ ಸ್ಪಿಟ್ಜರ್‌ಲೆಂಡ್. ಆಸ್ಟ್ರಿಯಾ, ಸ್ಲೋವೆನಿಯಾ, ಗ್ರೀಸ್, ಎಸ್ಟೋನಿಯಾ ಹಾಗೂ ಐರ್ಲೆಂಡ್ ದೇಶಗಳಿಗೆ ಮುಕ್ತವಾಗಿ ಪ್ರಯಾಣ ಮಾಡಲು ಅನುಮತಿ ನೀಡಲಾಗಿದೆ.

ವಿಶೇಷ ಅಂದರೆ ಎಸ್ಟೋನಿಯಾ ಭಾರತದ ಎಲ್ಲಾ ಲಸಿಕೆಗೆ ಅನುಮತಿ ನೀಡಿದೆ. ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆಗೂ ಅನುಮತಿ ಸಿಕ್ಕಿದೆ. ಈ ಮೂಲಕ ಯುರೋಪಿಯನ್ ಒಕ್ಕೂಟದ ಪೈಕಿ ಎಸ್ಟೋನಿಯಾ ಭಾರತದ ಎಲ್ಲಾ ಲಸಿಕೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರವಾಗಿದೆ.

Scroll to load tweet…

ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಇದೀಗ ಕೋವಿಶೀಲ್ಡ್ ಲಸಿಕೆಯನ್ನು ತಮ್ಮ ಗ್ರೀನ್ ಪಾಸ್‌ಪಪೋರ್ಟ್ ಪಟ್ಟಿಗೆ ಸೇರಿಸಿಕೊಂಡಿದೆ. ಈ ಮೂಲಕ ಭಾರತದ ಬಹುದೊಡ್ಡ ಅಡೆ ತಡೆಯೊಂದು ನಿವಾರಣೆಯಾಗಿದೆ. ಭಾರತದ ಮನವಿಯ ಹೊರತಾಗಿಯೂ ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ಪ್ರಯಾಣ ಪಟ್ಟಿಗೆ ಸೇರಿಸಿಕೊಳ್ಳಲು ನಿರಾಕರಿಸಿತ್ತು.

ಇಮ್ಯುನಿಟಿ ವೃದ್ಧಿಸಲು ಲಸಿಕೆ ಡೋಸ್ ನಡುವೆ 3 ತಿಂಗಳ ಅಂತರ ಅಗತ್ಯ: ಆಕ್ಸ್‌ಫರ್ಡ್.

ಭಾರತದ ವಿದೇಶಾಂಕ ಸಚಿವಾಲಯ ಈ ಕುರಿತು ಯುರೋಪಿಯನ್ ಒಕ್ಕೂಟಕ್ಕೆ ಖಡಕ್ ಎಚ್ಚರಿಕೆ ನೀಡಿತ್ತು. ಯುರೋಪಿಯನ್ ರಾಷ್ಟ್ರಗಳಿಗೆ ಕ್ವಾರಂಟೈನ್ ನೀತಿಯಲ್ಲಿ ನೀಡಿರುವ ವಿನಾಯಿತಿಗಳನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಭಾರತದ ನಡೆಯಿಂದ ಎಚ್ಚೆತ್ತ ಯುರೋಪಿಯನ್ ಒಕ್ಕೂಟ ಸಭೆ ನಡೆಸಿತ್ತು. ಕೋವಿಶೀಲ್ಡ್ ಲಸಿಕೆ ಫಲಿತಾಂಶ ವರದಿಯನ್ನು ಆಧರಿಸಿ ಇದೀಗ ಈ ನಿರ್ಧಾರ ತೆಗೆದುಕೊಂಡಿದೆ.