ನೇಪಾಳ(ಜೂ.25): ಹುಮ್ಲಾ, ಸಿಂಧೂಪಲ್‌ಚೌಕ್, ಗೂರ್ಖ, ರಸುವಾ, ಡೋಲಖ ಸೇರಿದಂತೆ 64 ಹೆಕ್ಟರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ನೇಪಾಳ ಗಡಿ ಪ್ರದೇಶದ ಹಳ್ಳಿಗಳು ಇದೀಗ ಚೀನಾ ಭಾಗವಾಗಿದೆ. ರಾತ್ರೋರಾತ್ರಿ ಚೀನಾ ಹಿಂಬಾಗಿಲ ಮೂಲಕ ತನ್ನ ಗಡಿ ಪ್ರದೇಶವನ್ನು ವಿಸ್ತರಿಸಿದೆ. ಇತಿಹಾಸ ಪುಟದಲ್ಲಿ ರಾಜ ಮಹರಾಜರುಗಳ ಆಕ್ರಮಣ, ಕೋಟೆ ವಶಪಡಿಸಿಕೊಳ್ಳುವಿಕೆಯನ್ನು ನಾವು ಕೇಳಿದ್ದೇವೆ. ಇದೀಗ ಕೊಂಚ ಮಾಡರ್ನ್ ಆಗಿ ಚೀನಾ ಇದೇ ಕೆಲಸವನ್ನು ಮಾಡುತ್ತಿದೆ.

ಚೀನಾ ಹೊಸ ಕುತಂತ್ರ: ನೇಪಾಳದ ಶಾಲೆಗಳಲ್ಲಿ ಮ್ಯಾಂಡರಿನ್‌ ಕಡ್ಡಾಯ

ಭಾರತದ ಗಡಿ ಪ್ರದೇಶದೊಳಗೆ ನುಗ್ಗಿ ಭಾರತೀಯ ಸೈನಿಕರ ಮೇಲೆ ಎರಗಿದ ಚೀನಾಗೆ ಭಾರತ ತಕ್ಕ ತಿರುಗೇಟು ನೀಡಿದೆ. ಭಾರತದ ಭೂ ಭಾಗ ಆಕ್ರಮಿಸಿಕೊಳ್ಳುವುದು ಕಷ್ಟ ಎಂದರಿತ ಚೀನಾ ಇದೀಗ ನೇಪಾಳ ಬರೋಬ್ಬರಿ 65 ಹೆಕ್ಟರ್ ಪ್ರದೇಶವನ್ನು ಗುಳುಂ ಮಾಡಿದೆ. ಇತ್ತ ನೇಪಾಳ ಕಾಂಗ್ರೆಸ್, ಸರ್ಕಾರಕ್ಕೆ ಒಂದಿಂಚು ಜಾಗ ಬಿಡದೆ ಹಿಂಪಡೆಯಲು ಒತ್ತಾಯಿಸಿದೆ.

ಭಾರತದ ಭೂಮಿ ಗುಳುಂ: ಮಸೂದೆ ಪಾಸ್‌, ನಕ್ಷೆಗೆ ನೇಪಾಳ ಅಸ್ತು!.

ನೇಪಾಳದ ಬರೋಬ್ಬರಿ 64 ಹೆಕ್ಟರ್ ಪ್ರದೇಶ ಇದೀಗ ಚೀನಾದ ಕೈವಶವಾಗಿದೆ. ಇಲ್ಲಿ ವಾಸಿಸುತ್ತಿರುವ 72ಕ್ಕೂ ಹೆಚ್ಚು ಕುಟುಂಬಗಳು ಇದೀಗ ಚೀನಾ ಭೂಬಾಗಕ್ಕೆ ಒಳಪಟ್ಟಿದ್ದಾರೆ. ಗಡಿ ಪ್ರದೇಶದಲ್ಲಿನ ನೇಪಾಳದ ಪ್ರಮುಖ ನದಿಯನ್ನು ಚೀನಾ ತಿರುಗಿಸುತ್ತಿದೆ. ಚೀನಾ ಆಕ್ರಮಣಕ್ಕೆ ನೇಪಾಳದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ವ ಪಕ್ಷ ಸಭೆಯಲ್ಲಿ ಚೀನಾ ಕಾಂಗ್ರೆಸ್ ಪಕ್ಷ ಕೆಪಿ ಶರ್ಮಾ ಒಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಂದಿಂಚು ಜಾಗ ಬಿಡದೆ ನೇಪಾಳ ಭೂ ಪ್ರದೇಶವನ್ನು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.

ತಕ್ಷಣವೇ ಬೀಜಿಂಗ್ ಜೊತೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದೆ. ಭಾರತದ ಭೂ ಭಾಗ ಆಕ್ರಮಿಸಿ ಹೊಸ ಮ್ಯಾಪ್ ಬಿಡುಗಡೆ ಹಿರಿ ಹಿರಿ ಹಿಗ್ಗಿದ ನೇಪಾಳಕ್ಕೆ ತನ್ನ 64 ಹೆಕ್ಟೆರ್ ಪ್ರದೇಶ ಕೈಜಾರಿ ಹೋಗಿದ್ದು ಇದೀಗ ಗೊತ್ತಾಗಿದೆ.