ಚೀನಾ ಹೊಸ ಕುತಂತ್ರ: ನೇಪಾಳದ ಶಾಲೆಗಳಲ್ಲಿ ಮ್ಯಾಂಡರಿನ್‌ ಕಡ್ಡಾಯ!

ನೇಪಾಳದ ಶಾಲೆಗಳಲ್ಲಿ ಮ್ಯಾಂಡರಿನ್‌ ಕಡ್ಡಾಯ: ಚೀನಾ ಹೊಸ ಕುತಂತ್ರ| ಮ್ಯಾಂಡರಿನ್‌ ಕಲಿಸುವ ಶಿಕ್ಷಕರಿಗೆ ಚೀನಾದಿಂದ ವೇತನ ಪಾವತಿ!

Nepal schools make Mandarin compulsory China to pay teachers salaries

ಕಾಠ್ಮಂಡು(ಜೂ.16): ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಎಲ್ಲಾ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿರುವ ಚೀನಾ, ಇದೀಗ ನೇಪಾಳಿ ಶಾಲೆಗಳಲ್ಲಿ ಚೀನಾದ ಅಧಿಕೃತ ಭಾಷೆಯಾದ ಮ್ಯಾಂಡರಿನ್‌ ಕಲಿಸುವ ಶಿಕ್ಷಕರಿಗೆ ತಾನೇ ವೇತನ ಪಾವತಿಸುವ ಹೊಸ ಯೋಜನೆ ಜಾರಿಗೆ ತಂದಿದೆ.

ನೇಪಾಳ ಶಾಲೆಗಳಲ್ಲಿ ವಿದೇಶಿ ಭಾಷೆ ಕಲಿಕೆಗೆ ಅವಕಾಶ ಇದೆಯಾದರೂ, ಅದನ್ನು ಕಡ್ಡಾಯಗೊಳಿಸುವ ಅಧಿಕಾರ ಇಲ್ಲ. ಆದರೆ ಖಾಸಗಿ ಶಾಲೆಗಳು, ಉಚಿತವಾಗಿ ಶಿಕ್ಷಕರು ಸಿಗುವ ಆಸೆಯಿಂದಾಗಿ ಮ್ಯಾಂಡರಿನ್‌ ಭಾಷೆ ಕಲಿಕೆ ಕಡ್ಡಾಯ ಮಾಡಿದೆ. ಇದು ಹಂತಹಂತವಾಗಿ ನೇಪಾಳಿ ಜನರನ್ನು ಭಾವನಾತ್ಮಕವಾಗಿ ತನ್ನೊಂದಿಗೆ ಸೇರಿಸಿಕೊಳ್ಳುವ ಚೀನಾ ಯೋಜನೆಯ ಭಾಗವಾಗಿದೆ ಎಂದು ಹೇಳಲಾಗಿದೆ.

ನೇಪಾಳದ ಸೊಕ್ಕು ಸಮರ್ಥಿಸಿ ಉಂಡ ಮನೆ ಭಾರತಕ್ಕೆ ಎರಡು ಬಗೆದಳೇ ಮೊನಿಶಾ ಕೊಯಿರಾಲ?

ಚೀನಾದ ಕುಮ್ಮಕ್ಕಿನಿಂದಲೇ ನೇಪಾಳ ಸರ್ಕಾರ, ಇತ್ತೀಚೆಗೆ ಭಾರತದ ಹಲವು ಭಾಗಗಳನ್ನು ತನ್ನದೆಂದು ಸಾರುವ ಹೊಸ ನಕ್ಷೆ ಬಿಡುಗಡೆ ಮಾಡಿತ್ತು. ಇದರ ಜೊತೆಗೆ ಭಾರತ ವಿರೋಧಿಸಿರುವ ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟೀವ್‌(ಬಿಆರ್‌ಐ) ಯೋಜನೆಯನ್ನು ನೇಪಾಳದ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲು ಚೀನಾ ಬಯಸಿದೆ.

Latest Videos
Follow Us:
Download App:
  • android
  • ios