Asianet Suvarna News Asianet Suvarna News

ಭಾರತೀಯರು ಸೇರಿ 72 ಪ್ರಯಾಣಿಕರಿದ್ದ ನೇಪಾಳ ವಿಮಾನ ಪತನ: ಸಾವಿನ ಸಂಖ್ಯೆ 68ಕ್ಕೆ ಏರಿಕೆ!

ಐವರು ಭಾರತೀಯರು ಸೇರಿ 70 ಜನರಿದ್ದ ನೇಪಾಳ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ಇನ್ನೇನು ಲ್ಯಾಂಡ್ ಆಗಬೇಕು ಎನ್ನುಷ್ಟರಲ್ಲಿ ಪತನವಾಗಿದ್ದು, ದುರಂತದಲ್ಲಿ ಮಡಿದವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.

Nepal Yeti Airlines flight carrying 72 people crashed in Pokhara 40 died in mishap akb
Author
First Published Jan 15, 2023, 2:43 PM IST

ನವದೆಹಲಿ/ಕಠ್ಮಂಡು: ಐವರು ಭಾರತೀಯರು ಸೇರಿ 70 ಪ್ರಯಾಣಿಕರಿದ್ದ ನೇಪಾಳ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ಇನ್ನೇನು ಲ್ಯಾಂಡ್ ಆಗಬೇಕು ಎನ್ನುಷ್ಟರಲ್ಲಿ ಪತನವಾಗಿದೆ.  ಈ ದುರಂತದಲ್ಲಿ ಬಲಿಯಾದವರ ಸಂಖ್ಯೆ 68ಕ್ಕ ಏರಿಕೆಯಾಗಿದೆ. ವಿಮಾನವೂ ಇಂದು ಮುಂಜಾನೆ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮ ನೇಪಾಳದಲ್ಲಿರುವ ಪೊಖರೊಗೆ ಹೊರಟಿದ್ದ ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪತನವಾಗಿದೆ.  ಈ ವಿಮಾನದಲ್ಲಿ 68 ನಾಗರಿಕರು ಹಾಗೂ ನಾಲ್ವರು ವಿಮಾನ ಸಿಬ್ಬಂದಿ ಇದ್ದರು. ಪೊಖರೋದ ಹಳೆ ವಿಮಾನ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣದ ನಡುವೆ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ನಾಳೆ ಮುಂಜಾನೆಯಿಂದ ಮತ್ತೆ ಆರಂಭಗೊಳ್ಳಲಿದೆ.

ಯೇಟಿ ಏರ್‌ಲೈನ್ಸ್‌ಗೆ (Yeti Airlines) ಸೇರಿದ ಅವಳಿ ಇಂಜಿನ್ ಇದ್ದ ಎಟಿಆರ್ 72 ವಿಮಾನವೂ ನೇಪಾಳದ ಕಠ್ಮಂಡುವಿನಿಂದ ಹೊರಟಿತ್ತು. ಇದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10  ವಿದೇಶಿ ಪ್ರಜೆಗಳಿದ್ದರು ಎಂದು ಯೇಟಿ ಏರ್‌ಲೈನ್ಸ್‌ನ ವಕ್ತಾರ ಸುದರ್ಶನ್ ಬರ್ತೌಲ್ (Sudarshan Bartaula) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  68 ಜನರಲ್ಲಿ ಐವರು ಭಾರತೀಯರು ಕೂಡ ಸೇರಿದ್ದಾರೆ. ಇವರ ಜೊತೆಗೆ ನಾಲ್ವರು ರಷ್ಯನ್ನರು ( Russian),  ಓರ್ವ ಐರಿಷ್, ಓರ್ವ ಕೊರಿಯನ್ (Korean), ಓರ್ವ ಅರ್ಜೆಂಟೀನಾ ಪ್ರಜೆ ಹಾಗೂ  ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ತಿಳಿದು ಬಂದಿದೆ.

Air Crash Death : ಕಾಪ್ಟರ್‌ ದುರಂತಗಳಲ್ಲಿ ಸಾವಿಗೀಡಾದ ಭಾರತದ ಗಣ್ಯರು 

ವಿಮಾನ ದುರಂತದ ನಂತರ ಹತ್ತಿಕೊಂಡ ಬೆಂಕಿ ಇಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.  ಘಟನೆಗೆ ಸಂಬಂಧಿಸಿದಂತೆ ನೇಪಾಳ ಪ್ರಧಾನಿ (Nepal Prime Minister) ಪುಷ್ಪ ಕಮಲ್ ದಹಲ್ (Pushpa Kamal Dahal) ಪ್ರಚಂಡ ತುರ್ತು ಕ್ಯಾಬಿನೆಟ್ ಸಭೆ ಕರೆದಿದ್ದಾರೆ.  ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ ಈ ನತದೃಷ್ಟ ವಿಮಾನ ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  (Tribhuvan International Airport)ಬೆಳಗ್ಗೆ 10.33ರ ಸುಮಾರಿಗೆ ಟೇಕಾಫ್ ಆಗಿತ್ತು. ಇನ್ನೇನು ಸ್ವಲ್ಪದರಲ್ಲಿ ನೇಪಾಳದ ಪೊಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಅಷ್ಟರಲ್ಲಿ ಸೇತಿ ನದಿ ದಡದ ಕಂದಕಕ್ಕೆ ಉರುಳಿ ಬಿದ್ದಿದೆ. ಟೇಕಾಫ್ ಆದ ಕೇವಲ 20 ನಿಮಿಷದಲ್ಲಿ ಈ ದುರಂತ ಸಂಭವಿಸಿದೆ. 

ಈ ದುರಂತದಲ್ಲಿ ಬದುಕುಳಿದವರು ಇದ್ದಾರೆಯೇ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತುಲಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  ಅಪಘಾತಕ್ಕೀಡಾಗುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ರಕ್ಷಣಾ ಸಿಬ್ಬಂದಿ ಬದುಕುಳಿದವರ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಂಸ್ಥೆ ಮುಖ್ಯಸ್ಥ ಜ್ಯೋತಿರಾದಿತ್ಯ ಸಿಂಧಿಯಾ ಸಂತಾಪ ಸೂಚಿಸಿದ್ದಾರೆ.  ನೇಪಾಳದಲ್ಲಿ ನಡೆದ ವಿಮಾನ ದುರಂತ ಘಟನೆ ದುರಾದೃಷ್ಟಕರ, ದುರಂತದಲ್ಲಿ ಬಲಿಯಾದವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಅವರು ಟ್ವಿಟ್ ಮಾಡಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲೂ ನೇಪಾಳದಲ್ಲಿ ವಿಮಾನವೊಂದು ಪತನಗೊಂಡು ನಾಲ್ವರು ಭಾರತೀಯರು ಸೇರಿ ಒಟ್ಟು 22 ಜನ ಸಾವನ್ನಪ್ಪಿದ್ದರು. ನೇಪಾಳ ತಾರಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಪತನಗೊಂಡ ಪರಿಣಾಮ 16 ನೇಪಾಳಿಗರು ಹಾಗೂ ನಾಲ್ವರು ಭಾರತೀಯರು ಮೃತಪಟ್ಟಿದ್ದರು. 

 

 

 

Follow Us:
Download App:
  • android
  • ios