ನವದೆಹಲಿ(ಮೃ.28): ಚೀನಾ ಕುಮ್ಮಕ್ಕಿನಿಂದಾಗಿ ಭಾರತಕ್ಕೆ ಸೇರಿದ ಭೂಭಾಗವನ್ನು ಒಳಗೊಂಡ ತನ್ನ ದೇಶದ ಹೊಸ ಭೂಪಟ ಬಿಡುಗಡೆ ಮಾಡಿದ್ದ ನೆರೆಯ ನೇಪಾಳ ಇದೀಗ, ತನ್ನ ನಿರ್ಧಾರಕ್ಕೆ ಬ್ರೇಕ್‌ ಹಾಕಿದೆ. ನೇಪಾಳದ ಹೊಸ ಭೂಪಟಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮತ್ತೊಂದೆಡೆ ನೇಪಾಳಿ ಕಾಂಗ್ರೆಸ್‌ ಪಕ್ಷ ಕೂಡಾ ತನ್ನ ಕೇಂದ್ರೀಯ ಮಂಡಳಿ ಸಭೆಯ ಬಳಿಕವಷ್ಟೇ ಪ್ರಸ್ತಾಪವನ್ನು ಅನುಮೋದಿಸುವುದಾಗಿ ಹೇಳಿತ್ತು. ಅದರ ಬೆನ್ನಲ್ಲೇ ನೇಪಾಳ ಸರ್ಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ನೇಪಾಳದಲ್ಲಿ ಕೊರೋನಾ ಹರಡಲು ಭಾರತ ಕಾರಣ; ಪ್ರಧಾನಿ ಕೆಪಿ ಶರ್ಮಾ!

ಭಾರತ ಸರ್ಕಾರ, ಮಾನಸ ಸರೋವರಕ್ಕೆ ತೆರಳಲು ಉತ್ತರಾಖಂಡದಲ್ಲಿ ಇತ್ತೀಚೆಗೆ ಹೊಸ ಮಾರ್ಗ ಆರಂಭಿಸಿತ್ತು. ಆದರೆ ಈ ಪ್ರದೇಶಗಳು ತನಗೆ ಸೇರಿದ್ದು ಎಂದು ವಾದಿಸಿದ್ದ ನೇಪಾಳ ದಿಢೀರನೆ, ಭಾರತದ ಭೂಭಾಗಗಳಾದ ಕಾಲಾಪಾನಿ, ಲಿಂಪಿಯಧುರಾ ಹಾಗೂ ಲಿಪುಲೇಖಾ ತನಗೆ ಸೇರಿದ ಪ್ರದೇಶಗಳೆಂದು ಬಿಂಬಿಸುವ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿತ್ತು.

ಪಾಕ್, ಚೀನಾ ಬೆನ್ನಲ್ಲೇ ಗಡಿ ಕ್ಯಾತೆ ತೆಗೆದ ನೇಪಾಳ: ಭಾರತದ ಭೂಭಾಗ ಸೇರಿಸಿ ಹೊಸ ನಕ್ಷೆ!

ಇದಕ್ಕಾಗಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಸಂವಿಧಾನಕ್ಕೇ ತಿದ್ದುಪಡಿ ತರಲು ನಿರ್ಧರಿಸಿದ್ದರು. ಆದರೆ ಈ ಯೋಜನೆಗೆ ಅವರು ಇತರೆ ಪಕ್ಷಗಳ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದಾರೆ. ಓಲಿ ಅವರ ಈ ಯತ್ನವು ಗೋರ್ಖಾ ರಾಷ್ಟ್ರೀಯತೆ ವಿಷಯವನ್ನು ಮುನ್ನೆಲೆಗೆ ತರುವ ಮೂಲಕ ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಯತ್ನವಾಗಿದೆ ಎಂಬ ಸಂಶಯವು, ವಿಪಕ್ಷಗಳು ಯೋಜನೆಯನ್ನು ಬೆಂಬಲಿಸಲು ಹಿಂದೇಟು ಹಾಕುವಂತೆ ಮಾಡಿದೆ ಎನ್ನಲಾಗಿದೆ.