ಒಲಿ ನೇತೃತ್ವದ ಸರ್ಕಾರ ವಿಧಿಸಿದ ಸಾಮಾಜಿಕ ಮಾಧ್ಯಮ ನಿಷೇಧವು ದಂಗೆಗೆ ತಕ್ಷಣದ ಪ್ರಚೋದನೆಯಾಗಿತ್ತು. ಅಧಿಕೃತವಾಗಿ, ನಿಷೇಧವನ್ನು ನಿಯಂತ್ರಣವಾಗಿ ಪರಿಚಯಿಸಲಾಯಿತು, ಆದರೆ ಅನೇಕರು ಇದನ್ನು ಮುಕ್ತ ಅಭಿವ್ಯಕ್ತಿಯನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿರುವ ಸೆನ್ಸಾರ್‌ಶಿಪ್ ಎಂದು ವೀಕ್ಷಿಸಿದರು.
ಕಠ್ಮಂಡು: ನೂರಾರು ಪ್ರತಿಭಟನಾಕಾರರು ಕಚೇರಿಗೆ ನುಗ್ಗಿದ ನಂತರ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 4 ರಂದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸರ್ಕಾರ ನಿಷೇಧಿಸಿತ್ತು. ಸರ್ಕಾರದ ಈ ನಿರ್ಧಾರ ಖಂಡಿಸಿ ಜೆನ್ ಝಡ್ ನೇತೃತ್ವದ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಪ್ರತಿಭಟನೆ ಬೆನ್ನಲ್ಲೇ ಸರ್ಕಾರ ನಿಷೇಧ ಹಿಂತೆಗೆದುಕೊಂಡಿತ್ತು. ಈ ವೇಳೆಗಾಗಲೇ ರಾಜಕೀಯ ಮತ್ತು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದವು.
ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ನಿಷೇಧ ಹೇರಿದ್ದಕ್ಕೆ ಸೋಮವಾರ ಯುವಕರು ಸಿಡಿದೆದ್ದಿದ್ದು, ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಘಟನೆಯಲ್ಲಿ ಪೊಲೀಸರ ಗುಂಡಿಗೆ 20 ಮಂದಿ ಸಾವನ್ನಪ್ಪಿದ್ದಾರೆ. 250ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ನಿಷೇಧ ಏಕೆ?:
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಸುಳ್ಳುಸುದ್ದಿ, ಸೈಬರ್ ಅಪರಾಧಗಳನ್ನು ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದ ಕಾರಣ, ಇಂತಹ ಎಲ್ಲ ಸೋಷಿಯಲ್ ಮಿಡಿಯಾ ಆ್ಯಪ್‌ಗಳ ಕಾರ್ಯಾಚರಣೆಗೆ ನೇಪಾಳ ಸರ್ಕಾರ ನೋಂದಣಿ ಕಡ್ಡಾಯ ಮಾಡಿತ್ತು ಹಾಗೂ ಎಲ್ಲ ಆ್ಯಪ್ ಕಂಪನಿಗಳಲ್ಲಿ ದೂರು ಪರಿಹಾರ ವಿಭಾಗ ಸ್ಥಾಪನೆ ಆಗಬೇಕು ಎಮದು ಸೂಚಿಸಿತ್ತು.
ಆದರೆ ಸರ್ಕಾರದ ಆದೇಶ ಪಾಲನೆ ಆಗದ ಕಾರಣ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಕಳೆದ ಶುಕ್ರವಾರದಿಂದ ನಿಷೇಧಿಸಿದೆ ಇದು ವಿವಾದದ ಮೂಲ.


