ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ನಿರ್ಧಾರ ವಿರೋಧಿಸಿ ಜೆನ್‌ಜಿ ಸಮೂಹ ಭಾರಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ನೇಪಾಳದಲ್ಲಿ ಕೋಲಾಹಲ ಸೃಷ್ಟಿಸಿದ ಪ್ರತಿಭಟನೆ ಬೆನ್ನಲ್ಲೇ ಗೃಹ ಸಚಿವರು ರಾಜೀನಾಮೆ ನೀಡಿದ್ದಾರೆ .
ಕಾಠ್ಮಂಡು (ಸೆ.08) ನೇಪಾಳ ಸರ್ಕಾರ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದೆ. ಸರ್ಕಾರದ ಈ ನಿರ್ಧಾರ ವಿರೋಧಿಸಿ ಝೆನ್‌ಜಿ ಸೇರಿದಂತೆ ಯುವ ಸಮೂಹ ಭಾರಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನೇಪಾಳ ಸಂಸತ್ತು, ಪ್ರಧಾನಿ ಕೆಪ ಒಲಿ ಶರ್ಮಾ ಮನೆ ಮೇಲೂ ದಾಳಿಯಾಗಿದೆ. ಹಿಂಸಾಚಾರದ ಪ್ರತಿಭಟನೆಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ನೇಪಾಳದ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಗಾಯಗೊಂಡರವರ ಸಂಖ್ಯೆ 300ಕ್ಕೂ ಹೆಚ್ಚಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ನೇಪಾಳ ಸರ್ಕಾರ ಸೋಶಿಯಲ್ ಮೀಡಿಯಾ ಬ್ಯಾನ್ ತೆರವುಗೊಳಿಸಲು ಮುಂದಾಗಿದೆ. ಇತ್ತ ನೇಪಾಳ ಗೃಹ ಸಚಿವರು ರಮೇಶ್ ಲೇಖರ್ ರಾಜೀನಾಮೆ ನೀಡಿದ್ದಾರೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ
ನೇಪಾಳ ಗೃಹ ಸಚಿವ ರಮೇಶ್ ಲೇಖಕ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ತಿ ಪಾಸ್ತಿಗಳು ನಾಶವಾಗಿದೆ. ಹೀಗಾಗಿ ತಾನು ಗೃಹ ಸಚಿವನವಾಗಿ ಮುಂದುವರಿಯುತ್ತಿಲ್ಲ ಎಂದು ರಮೇಶ್ ಲೇಖಕ್ ಹೇಳಿದ್ದಾರೆ. ಸಾವು ನೋವು ಸಂಭವಿಸಿದ ಬಳಿಕ ಹುದ್ದೆಯಲ್ಲಿ ಮುಂದುವರಿಯುತ್ತಿಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಮೇಶ್ ಲೇಖಕ್ ಹೇಳಿದ್ದಾರೆ.
ಫೇಸ್‌ಬುಕ್,ವ್ಯಾಟ್ಸಾಪ್ ಸೇರಿ ಸೋಶಿಯಲ್ ಮೀಡಿಯಾ ಬ್ಯಾನ್, ನೇಪಾಳದಲ್ಲಿ ಭಾರಿ ಪ್ರತಿಭಟನೆ
ಝೆನ್‌ಜಿ ಸಮೂಹ ನಡೆಸುತ್ತಿರುವ ಪ್ರತಿಭಟನೆಯಲ್ಲಿ 19 ಮಂದಿ ಮೃತಪಟ್ಟಿದ್ದರೆ 347 ಮಂದಿ ಗಾಯಗೊಂಡಿದ್ದಾರೆ.ಪ್ರತಿಭಟನೆ ಕೈಮೀರುತ್ತಿದ್ದಂತೆ ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆಶ್ರುವಾಯು, ಜಲಫಿರಂಗಿ, ಲಾಠಿ ಚಾರ್ಜ್ ಮೂಲಕ ಪ್ರತಿಭಟನಕಾರರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಲಕ್ಷಾಂತರ ಮಾಡಿ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂಸಾರೂಪ ತಳೆದಿದೆ.
ಪ್ರತಿಭಟನಾಕಾರರು ಬೈಕ್ ಸೇರಿದಂತೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಹಲವು ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿಯಾಗಿದೆ. ನೇಪಾಳದ ಹಲೆವೆಡೆ ಕರ್ಫ್ಯೂ ಜಾರಿಯಾಗಿದೆ. ನೇಪಾಳ ಸಂಸತ್ತಿನ ನಿರ್ಬಂಧಿತ ಪ್ರದೇಶಕ್ಕೂ ಪ್ರತಿಭಟನಕಾರರು ಎಂಟ್ರಿಕೊಟ್ಟಿದ್ದಾರೆ. ನೇಪಾಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಶಿಯಲ್ ಮೀಡಿಯಾ ಬ್ಯಾನ್ ತೆರವಿಗೆ ಮುಂದಾಗುತ್ತಾ ಸರ್ಕಾರ
ಭಾರಿ ಪ್ರತಿಭಟನೆಯಿಂದ ಸರ್ಕಾರವೇ ಅಲುಗಾಡುವು ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಮೇಲೆ ವಿಧಿಸಿರುವ ನಿರ್ಬಂಧ ತೆರುವುಗೊಳಿಸವು ಸಾಧ್ಯತೆಗಳು ಕಾಣುತ್ತಿದೆ. ಈ ಕುರಿತು ಅಧಿಕೃತವಾಗಿ ಯಾವುದೇ ನಿರ್ಧಾರ ಘೋಷಣೆಯಾಗಿಲ್ಲ. ಇಷ್ಟೇ ಅಲ್ಲ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದ್ದಂತೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾ ಸಂಸ್ಥೆಗಳು ನೇಪಾಳ ಐಟಿ ನಿಯಮದ ಅನುಸಾರ ನೋಂದಣಿ ಮಾಡಿಕೊಳ್ಳಬೇಕು. ಆದರೆ ಯಾವ ಕಂಪನಿಗಳು ನೋಂದಣಿ ಮಾಡಿಕೊಂಡಿಲ್ಲ. 7 ದಿನದ ಗಡುವು ನೀಡಿದ್ದ ಸರ್ಕಾರ ಇದೀಗ ಸೋಶಿಯಲ್ ಮೀಡಿಯಾ ಮೇಲೆ ನಿಷೇಧ ಹೇರಿದೆ. ಇದರ ವಿರುದ್ಧ ವಿದ್ಯಾರ್ಥಿಗಳು ಸೇರಿದಂತೆ ಝೆನ್‌ಜಿ ಜನರೇಶನ್ ಪ್ರತಿಭಟನೆ ಮಾಡುತ್ತಿದೆ.
