Nepal Plane ನಾಪತ್ತೆಯಾದ ನೇಪಾಳ ವಿಮಾನ ಲಮ್ಚೆ ನದಿ ಬಳಿ ಅಪಘಾತ, ಪೈಲೆಟ್ ಫೋನ್‌ನಿಂದ ಸ್ಥಳ ಪತ್ತೆ!
- ಬೆಳಗ್ಗೆಯಿಂದ ನಾಪತ್ತೆಯಾದ ನೇಪಾಳ ವಿಮಾನ ಪತ್ತೆ
- ಮಸ್ತಾಂಗ್ ಜಿಲ್ಲೆಯ ನದಿ ಬಳಿ ವಿಮಾನ ಅಪಘಾತ
- ಸ್ಥಳ ಪತ್ತೆ ಹಚ್ಚಲು ನೆರವಾಯ್ತು ಪೈಲೆಟ್ ಫೋನ್
ನೇಪಾಳ(ಮೇ.29): ಬೆಳಗ್ಗೆಯಿಂದ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ನೇಪಾಳ ತಾರಾ ವಿಮಾನ ಇದೀಗ ಮಸ್ತಾಂಗ್ ಜಿಲ್ಲೆಯ ನದಿ ಬಳಿ ಅಪಘಾತವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ನಾಲ್ವರು ಭಾರತೀಯರು, ವಿಮಾನ ಸಿಬ್ಬಂದಿ ಸೇರಿ ಒಟ್ಟು 22 ಮಂದಿ ಪ್ರಯಾಣಿಕರಿದ್ದ ಈ ವಿಮಾನ ಅಪಘಾತದಲ್ಲಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ನೇಪಾಳದ ತಾರಾ ಏರ್ NAET ವಿಮಾನ ಇಂದು(ಮೇ.29) ಬೆಳಗ್ಗೆ 9.55ಕ್ಕೆ ನೇಪಾಳದ ಫೋಖರಾದಿಂದ ಜೋಮ್ಸ್‌ಗೆ ಪ್ರಯಾಣ ಬೆಳೆಸಿತ್ತು. ಕೆಲ ಹೊತ್ತಲ್ಲೆ ವಿಮಾನ ಸಂಪರ್ಕ ಕಡಿದುಕೊಂಡಿದೆ. ಇದೀಗ ಮಸ್ತಾಂಗ್ ಜಿಲ್ಲೆಯ ಲಮ್ಚೆ ನದಿ ಬಳಿ ವಿಮಾನ ಅಪಘಾತವಾಗಿರುವು ಮಾಹಿತಿ ಲಭ್ಯವಾಗಿದೆ. ವಿಮಾನ ಲಮ್ಚೆ ನದಿ ಬಳಿ ಪತ್ತೆಯಾಗಿದೆ ಎಂದು ನೇಪಾಳ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.
ನೇಪಾಳದಲ್ಲಿ 4 ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನ ನಾಪತ್ತೆ!
ತಾರಾ ಏರ್ ವಿಮಾನದಲ್ಲಿದ್ದ ಪೈಲೆಟ್ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ರಿಂಗ್ ಆಗುತ್ತಿತ್ತು. ಹೀಗಾಗಿ ಮೊಬೈಲ್ ಟವರ್ ಲೋಕೆಶನ್ ಆಧರಿಸಿ ನಿಯೋಜಿಸಲಾದ ಎರಡು ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನದಿ ಬಳಿ ವಿಮಾನ ಅಪಘಾತವಾಗಿರುವುದು ಪತ್ತೆಯಾಗಿದೆ.
ಇದೀಗ ನೇಪಾಳ ಸೇನೆ ಸ್ಥಳಕ್ಕೆ ಧಾವಿಸಿದೆ. ಅಪಘಾತದ ತೀವ್ರತೆ, ವಿಮಾನದಲ್ಲಿನ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಪರಿಸ್ಥಿತ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸೇನೆ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ.
ಈ ಲಘು ವಿಮಾನದಲ್ಲಿ ಮುಂಬೈ ಮೂಲದ ನಾಲ್ವರು, ಇಬ್ಬರು ಜರ್ಮನಿ ಪ್ರಜೆಗಳು ಹಾಗೂ 13 ನೇಪಾಳಿ ಪ್ರಜೆಗಳು ಪ್ರಯಾಣ ಮಾಡುತ್ತಿದ್ದರು. ಭಾರತೀಯ ಮೂಲದವರನ್ನು ಅಶೋಕ್ ಕುಮಾರ್ ತ್ರಿಪಾಠಿ, ದನುಶ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಹಾಗೂ ವೈಭವಿ ತ್ರಿಪಾಠಿ ಎಂದು ಗುರುತಿಸಿಲಾಗಿದೆ. ಒಂದೇ ಕುಟುಂಬದ ನಾಲ್ವರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಬೆಳಗ್ಗೆ 10.15ಕ್ಕ ಲ್ಯಾಂಡ್ ಆಗಬೇಕಿದ್ದ ವಿಮಾನ ಸಂಪರ್ಕ ಕಡಿದುಕೊಂಡಿದೆ. ಅಪಘಾತಕ್ಕೆ ಕಾರಣಗಳು ತಿಳಿದುಬಂದಿಲ್ಲ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ.
ಚೀನಾದಲ್ಲಿ ವಿಮಾನಕ್ಕೆ ಬೆಂಕಿ: 40 ಪ್ರಯಾಣಿಕರಿಗೆ ಗಾಯ
ಚೀನಾದ ಟಿಬೇಟ್ ಏರಲೈನ್ಸ್ ವಿಮಾನ ರನ್‌ವೇ ಆಚೆಗೆ ಜಾರಿ ಬೆಂಕಿಗೆ ಆಹುತಿಯಾಗಿದ್ದು, ವಿಮಾನದಲ್ಲಿದ್ದ 40ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ವರದಿಯಾಗಿದೆ. ಇದು ಕಳೆದ 2 ತಿಂಗಳಿನಲ್ಲಿ ಚೀನಾದಲ್ಲಿ ನಡೆದ 2ನೇ ವಿಮಾನ ಅಪಘಾತವಾಗಿದೆ.
113 ಪ್ರಯಾಣಿಕರು ಹಾಗೂ 9 ವಿಮಾನ ಸಿಬ್ಬಂದಿಗಳನ್ನೊಳಗೊಂಡ ಚಾಂಗ್ಕಿಂಗ್‌ನಿಂದ ನೈಂಗ್ಚಿಗೆ ತೆರಳುತ್ತಿದ್ದ ಟಿಬೇಟ್ ಏರಲೈನ್ಸ್ ವಿಮಾನ ಚಾಂಗ್ಕಿಂಗ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡುತ್ತಿರುವ ವೇಳೆಯಲ್ಲಿ ರನ್-ವೇ ಯಿಂದ ಜಾರಿದೆ. ಇದರಿಂದಾಗಿ ತಗುಲಿದ ಬೆಂಕಿಯಲ್ಲಿ 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಪ್ಪು ದಟ್ಟಹೊಗೆ ಆವರಿಸಿದ್ದು, ಪ್ರಯಾಣಿಕರು ತುರ್ತು ದ್ವಾರ ಬಳಸಿ ವಿಮಾನದಿಂದ ಹೊರ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ರನ್ ವೇಯಿಂದ ಜಾರಿದಾಗ ವಿಮಾನದ ಎಂಜಿನ್ ನೆಲಕ್ಕೆ ಉಜ್ಜಿ ಘರ್ಷಣೆಯಿಂದ ಬೆಂಕಿ ತಗುಲಿದೆ ಎಂದು ತನಿಖಾ ತಂಡ ತಿಳಿಸಿದೆ. ಈ ಮೊದಲು ಮಾಚ್‌ರ್ 12 ರಂದು ನಡೆದ ಬೋಯಿಂಗ್ ವಿಮಾನ ದುರಂತದಲ್ಲಿ 132 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಮೃತಪಟ್ಟಿದ್ದರು.