ವಿದೇಶಿಗರು ಸೇರಿ 6 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ನಾಪತ್ತೆಯಾಗಿದೆ. ಮೌಂಟ್ ಎವರೆಸ್ಟ್ ಸೌಂದರ್ಯ ವೀಕ್ಷಿಸಲು ತೆರಳಿದ್ದ ಪ್ರವಾಸಿಗರನ್ನು ಮರಳಿ ಕಾಠ್ಮಂಡುವಿಗೆ ಕರೆ ತರುತ್ತಿದ್ದ ವೇಳೆ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡಿದೆ. ಮೌಂಟ್ ಎವರೆಸ್ಟ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಿರುವ ಸಾಧ್ಯತೆ ಇದೆ.

ಕಾಠ್ಮಂಡು(ಜು.11) ಮೌಂಟ್ ಎವರೆಸ್ಟ್ ಶಿಖರ ಹಾಗೂ ಸುತ್ತಮುತ್ತಲಿನ ಪರ್ವತಗಳ ಸೌಂದರ್ಯ ಸವಿಯಲು ತೆರಳಿದ್ದ ವಿದೇಶಿ ಪ್ರಯಾಣಿಕರಿದ್ದ ನೇಪಾಳ ಹೆಲಿಕಾಪ್ಟರ್ ನಾಪತ್ತೆಯಾಗಿದೆ. ಸೊಲೊಕುಂಬುವಿನಿಂದ ಕಾಠ್ಮಂಡುವಿಗೆ ಮರಳುತ್ತಿದ್ದ ಹೆಲಿಕಾಪ್ಟರ್ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಸಂಪರ್ಕ ಕಳೆದುಕೊಂಡಿದೆ. ನೇಪಾಳದ ಮನಾಂಗ್ ಏರ್ ಹೆಲಿಕಾಪ್ಟರ್ 10.05ಕ್ಕೆ ಸುಲೊಕುಂಬುವಿನಿಂದ ಕಾಠ್ಮಂಡುವಿಗೆ ಪ್ರಯಾಣ ಬೆಳೆಸಿದೆ. 10.15ರ ಸುಮಾರಿಗೆ ಹೆಲಿಕಾಪ್ಟರ್ ರೆಡಾರ್ ಸಂಪರ್ಕ ಕಳೆದುಕೊಂಡಿದೆ ಎಂದು ಕಾಠ್ಮಂಡು ವಿಮಾನ ನಿಲ್ದಾಣದ ಮಾಹಿತಿ ಅಧಿಕಾರಿ ಗ್ಯಾನೇಂದ್ರ ಭುಲ್ ಹೇಳಿದ್ದಾರೆ. ಆದರೆ ಸ್ಥಳೀಯ ಮಾಧ್ಯಮದ ಪ್ರಕಾರ ಹೆಲಿಕಾಪ್ಟರ್ ಪತನಗೊಂಡಿದೆ. 6 ಮಂದಿ ಪೈಕಿ ಐವರು ಮೃತಪಟ್ಟಿದ್ದಾರೆ. ಮತ್ತೊರ್ವನ ಪತ್ತೆ ಇಲ್ಲ ಎಂದು ವರದಿ ಮಾಡಿದೆ.

ಮೌಂಟ್ ಎವರೆಸ್ಟ್ ಸೌಂದರ್ಯ ಸವಿಯಲು ಹೆಲಿಕಾಪ್ಟರ್ ಮೂಲಕ ತೆರಳಿದ್ದ ಐವರು ಮೆಕ್ಸಿನ್ ಪ್ರಜೆಗಳು ಹಾಗೂ ನೇಪಾಳ ಪೈಲೆಟ್ ಸುಳಿವಿಲ್ಲ. ನೇಪಾಳದ ನಾಗರೀಕಯಾನ ಸಚಿವಾಲಯ ಈ ಕುರಿತು ಅಧಿಕೃತ ಹೇಳಿಕೆ ನೀಡಿದೆ. ಇಷ್ಟೇ ಅಲ್ಲ ರಕ್ಷಣಾ ತಂಡಗಳ ಮೂಲಕ ಕಾರ್ಯಾಚರಣೆ ಆರಂಭಿಸಿದೆ.ನೇಪಾಳ ಮಾಧ್ಯಮಗಳ ವರದಿ ಪ್ರಕಾರ, ಹೆಲಿಕಾಪ್ಟರ್ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಪತನಗೊಂಡಿದೆ ಎಂದಿದೆ.ಈ ಪೈಕಿ ಐವರು ಮೃತದೇಹ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ವರದಿ ಮಾಡಿದೆ.

ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ, ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು 40 ದಿನ ಬಳಿಕ ಜೀವಂತ ಪತ್ತೆ!

ಸೊಲೊಕುಂಬು ಜಿಲ್ಲೆಯ ಲಮ್ಜುರಾ ಪರ್ವತ ಶ್ರೇಣಿಯಲ್ಲಿ ವಿಮಾನ ಪತನಗೊಂಡಿದೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ. ಬಾರಿ ಶಬ್ದ ಕೇಳಿಸಿದೆ. ಬಳಿಕ ದಟ್ಟ ಹೊಗೆಯೂ ಕಾಣಿಸಿಕೊಂಡಿದೆ. ಪರ್ವತ ಶ್ರೇಣಿ ದಾಟಿದ ಶಬ್ದ ಬಂದ ಸ್ಥಳಕ್ಕೆ ತೆರಳಿದ ಸ್ಥಳೀಯರು ಪತನಗೊಂಡ ಹೆಲಿಕಾಪ್ಟರ್ ಪತ್ತೆ ಹಚ್ಚಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಒಟ್ಟು 6 ಮಂದಿಯ ಪೈಕಿ ಐವರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬರ ಸುಳಿವಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ನೇಪಾಳ ಈ ಕುರಿತು ಅಧಿಕೃತ ಪ್ರಕಟಣೆ ನೀಡಿಲ್ಲ. ಇತ್ತ ಕಾರ್ಯಾಚರಣೆ ಮುಂದುವರಿದಿದೆ ಎಂಬ ಮಾಹಿತಿಯನ್ನು ನೇಪಾಳ ವಿಮಾನಯಾನ ಸಚಿವಾಲಯ ಹೇಳಿದೆ.

ಸೇನಾ ಲಘು ವಿಮಾನ ಪತನ: ಇಬ್ಬರು ಸೇನಾ ಸಿಬ್ಬಂದಿ ಸೇರಿ ಮೂವರು ಬಲಿ

ಮನಾಂಗ್ ಏರ್ ಸಂಸ್ಥೆ 1997ರಿಂದ ಹೆಲಿಕಾಪ್ಟರ್ ಸೇವೆ ಆರಂಬಿಸಿದೆ. ಕಾಠ್ಮಂಡು ಮೂಲದ ಕಮರ್ಷಿಯಲ್ ಏರ್ ಸರ್ವೀಸ್ ನೀಡುವ ಸಂಸ್ಥೆಯಾಗಿರುವ ಮನಾಂಗ್, ನೇಪಾಳ ವಿಮಾನಯಾನ ಸಚಿವಾಲಯದಿಂದ ಅಧಿಕೃತ ಪರವಾನಗಿ ಪಡೆದಿದೆ. ಮನಾಂಗ್ ಏರ್ ವಿಶೇಷವಾಗಿ ಸಾಹಸಿ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇರಿದಂತೆ ಇತರ ಏರ್‌ಕ್ರಾಫ್ಟ್ ಸರ್ವೀಸ್ ನೀಡಲಿದೆ. ಮೌಂಟ್ ಎವರೆಸ್ಟ್ ಸಾಹಸಿಗಳಿಗೆ, ಎವರೆಸ್ಟ್ ಸೌಂದರ್ಯ ವೀಕ್ಷಣೆ ಸೇರಿದಂತೆ ಹಲವು ಪರ್ವತಶ್ರೇಣಿಗಳಲ್ಲಿ ಮನಾಂಗ್ ಪ್ರವಾಸಿಗರಿಗೆ ಸೇವೆ ನೀಡುತ್ತಿದೆ.