ಅಮೆರಿಕ ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತಿದ್ದು, ಭಾರತವನ್ನು 'ಅಸಹಕಾರ' ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ತಾತ್ಕಾಲಿಕ ವೀಸಾದಲ್ಲಿರುವವರ ಮಕ್ಕಳಿಗೆ ಪೌರತ್ವ ನೀಡುವ ನಿಯಮ ಬದಲಿಸಲಾಗಿದೆ. ಇದೀಗ ಪೋಷಕರಿಗೆ ಗ್ರೀನ್ ಕಾರ್ಡ್ ಇರಲೇಬೇಕು. ಅಕ್ರಮ ವಲಸಿಗರು ಭಾರತದ ಮರ್ಯಾದೆಗೆ ಧಕ್ಕೆ ತರುತ್ತಿದ್ದಾರೆ ಎಂಬ ವಾದವೂ ಇದೆ.

ಕಾಡು ಮೇಡು, ಬೆಟ್ಟ-ಗುಡ್ಡ ದಾಟಿ, ಏಜೆಂಟ್​ಗಳಿಂದ ಲಕ್ಷ ಲಕ್ಷ ಹಣ ಕೊಟ್ಟು ಅಮೆರಿಕದೊಳಗೆ ನುಸುಳಿದ್ದ ಭಾರತೀಯರಿಗೆ ಅಮೆರಿಕ ಇದಾಗಲೇ ಗೇಟ್​ಪಾಸ್​ ನೀಡುತ್ತಿದೆ. ಅಕ್ರಮ ವಲಸಿಗರ ಪಟ್ಟಿ ಮಾಡಿರುವ ಅಮೆರಿಕ, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಕಾನೂನಿನ (ICE) ಅಡಿ ಇದಾಗಲೇ ಭಾರತವನ್ನು 'ಅಸಹಕಾರ' ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಇದು ಟ್ರಂಪ್ ಆಡಳಿತ, ಕ್ಯೂಬಾ, ಇರಾನ್, ಪಾಕಿಸ್ತಾನ, ರಷ್ಯಾ ಮತ್ತು ವೆನೆಜುವೆಲಾದಂತಹ ರಾಷ್ಟ್ರಗಳೊಂದಿಗೆ ಭಾರತದ ಅಕ್ರಮ ವಲಸಿಗರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣವಾಗಿದೆ. ICE ಯೊಂದಿಗೆ ಸಹಕರಿಸಲು ವಿಫಲವಾದ ದೇಶಗಳನ್ನು ಅಸಹಕಾರ ಅಥವಾ ಪ್ರತಿಭಟನಾಶೀಲ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗುತ್ತದೆ. ಅಮೆರಿಕ, ದಾಖಲೆ ರಹಿತವಾಗಿ ನೆಲೆಸಿರುವ ವಲಸಿಗರನ್ನು ಕಾನೂನು ಬದ್ಧವಾಗಿ ಹಿಂದಕ್ಕೆ ಕರೆಸಿಕೊಳ್ಳುವಂತೆ ಆಯಾ ದೇಶಗಳಿಗೆ ಮನವಿ ಮಾಡುತ್ತದೆ. ಆದರೆ, ವಲಸಿಗರು ಹೋಗದೇ ಇದ್ದರೆ, ಹೀಗೆ ಅಸಹಕಾರ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗುತ್ತದೆ. ಅದೇ ರೀತಿ ಭಾರತದ ಸ್ಥಿತಿ ಕೂಡ ಆಗಿದೆ.

ಇದೀಗ ಈ ಬಗ್ಗೆ ಭಾರತದಲ್ಲಿ ಭಾರಿ ಗದ್ದಲ ಶುರುವಾಗಿದೆ. ಕಾಂಗ್ರೆಸ್​ನವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಭಾರತೀಯರನ್ನು ಸರಿಯಾದ ಕ್ರಮದಲ್ಲಿ ವಾಪಸ್​ ಕರೆಸಿಕೊಳ್ಳಲಿಲ್ಲ ಎಂದು ಗುಡುಗುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಕನ್ನಡತಿ ಶೋಭಾ ಅವರು, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಇದರ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ. ಅವರ ಬಾಯಲ್ಲೇ ಹೇಳುವುದಾದರೆ... 'ಅಕ್ರಮ ವಲಸಿಗರಿಗೆ ಗೇಟ್​ ಪಾಸ್​ ಕೊಟ್ಟು ಡೊನಾಲ್ಡ್​ ಟ್ರಂಪ್​ ಆರ್ಡರ್​ ಮಾಡಿದ್ದಾರೆ. ಸೆನೆಟ್​ ಅಪ್ರೂವ್​ ಮಾಡಿದ ಮೇಲೆ ಕಾನೂನು ಜಾರಿಗೆ ಬರುತ್ತದೆ. ಈಗ ಗಲಾಟೆ ಇರುವುದು ಅಕ್ರಮ ವಲಸಿಗರ ಬಗ್ಗೆ. ಆದರೆ ಅದನ್ನು ಹೊರತುಪಡಿಸಿ ನಮ್ಮಂಥವರು ತಾತ್ಕಾಲಿಕವಾಗಿ ಲೀಗಲ್​ ಆಗಿ ವಲಸೆ ಕಾರ್ಡ್​ ಪಡೆದುಕೊಂಡಿದ್ದೇವೆ. ಇಂಥವರು ಲಕ್ಷಾಂತರ ಮಂದಿ ಇಲ್ಲಿದ್ದಾರೆ. ಎಚ್​1 ಬಿ ವೀಸಾ, ಎಲ್​1 ವೀಸಾ, ಎಫ್​1 ಸ್ಟುಡೆಂಡ್​ ವೀಸಾ, ಜೆ1 ಸ್ಟುಡೆಂಟ್​ ವೀಸಾ, ಟೂರಿಸ್ಟ್​ ವೀಸಾ ಹೀಗೆ ಕಾನೂನಾತ್ಮಕವಾಗಿ ತಾತ್ಕಾಲಿಕ ವೀಸಾಗಳು ಇವು. ಕೆಲವು ವರ್ಷಗಳವರೆಗೆ ಈ ವೀಸಾ ನೀಡಲಾಗುತ್ತದೆ. ಇಲ್ಲಿಯವರೆಗಿನ ಕಾನೂನು ಹೇಗಿತ್ತು ಎಂದರೆ, ಅಪ್ಪ-ಅಮ್ಮ ಇಬ್ಬರೂ ಈ ವೀಸಾದಲ್ಲಿ ಇದ್ದರೂ ಮಗು ಹುಟ್ಟಿದರೆ ಅದಕ್ಕೆ ಹುಟ್ಟಿನಿಂದಲೇ ಅಮೆರಿಕದ ಪೌರತ್ವ ಸಿಗುತ್ತಿತ್ತು. ನಮ್ಮ ಇಬ್ಬರು ಮಕ್ಕಳಿಗೂ ಪೌರತ್ವ ಸಿಕ್ಕಿದೆ ಎಂದು ಶೋಭಾ ಹೇಳಿದ್ದಾರೆ.

ಭಾರತಕ್ಕೆ ಅತಿದೊಡ್ಡ ಶಾಕ್ ಕೊಟ್ಟ ಟ್ರಂಪ್; ಭವಿಷ್ಯದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಕೊಕ್ಕೆ?

ಆದರೆ, ಇನ್ನು ಮುಂದೆ ಆ ರೀತಿ ಇರುವುದಿಲ್ಲ. ಮಕ್ಕಳಿಗೆ ಪೌರತ್ವ ಸಿಗಬೇಕು ಎಂದರೆ, ಅಪ್ಪ-ಅಮ್ಮ ಇಬ್ಬರಲ್ಲಿ ಒಬ್ಬರಿಗಾದರೂ ಗ್ರೀನ್​ ಕಾರ್ಡ್​ ಇರಬೇಕು, ಅಮೆರಿಕದ ಕಾಯಂ ಪ್ರಜೆಯಾಗಿರಬೇಕು. ಅವರೇನಾದರೂ ತಾತ್ಕಾಲಿಕ ವೀಸಾದಲ್ಲಿ ಬಂದಿದ್ದರೆ ಅವರ ಮಕ್ಕಳಿಗೆ ಪೌರತ್ವ ಸಿಗುವುದಿಲ್ಲ. 2020 ಆದ ಮೇಲೆ ಹುಟ್ಟಿದ ಮಕ್ಕಳಿಗೆ ಪೌರತ್ವ ಕ್ಯಾನ್ಸಲ್​ ಮಾಡಲಾಗುವುದು ಎಂಬ ಸುದ್ದಿ ಇದೆ. ಆದರೆ ಈ ಬಗ್ಗೆ ಎಲ್ಲಿಯೂ ಟ್ರಂಪ್​ ಅಧಿಕೃತವಾಗಿ ಹೇಳಲಿಲ್ಲ. ಆದ್ದರಿಂದ ಈ ಬಗ್ಗೆ ಗೊತ್ತಿಲ್ಲಅಮೆರಿಕದವರು ಹೀಗೆ ಮಾಡಿದರೆ, ಭಾರತದಲ್ಲಿ ಇರುವ ಅಮೆರಿಕನ್ನಗಿರೂ ಇದೇ ಸ್ಥಿತಿ ಆಗುತ್ತದೆ. ಆದ್ದರಿಂದ ಇಷ್ಟು ಸುಲಭವಲ್ಲ ಇದನ್ನು ಮಾಡುವುದು ಎಂದು ಶೋಭಾ ಹೇಳಿದ್ದಾರೆ. 

ಆದರೆ ಸದ್ಯ ಇರುವುದು ಅಕ್ರಮ ವಲಸಿಗರ ಬಗ್ಗೆ ಹೇಳುವುದಾದರೆ, ಇಲ್ಲಿ ಹೇಗೇಗೋ ಬಂದು ಮಕ್ಕಳು ಮಾಡಿಕೊಂಡು ಬಿಡುತ್ತಾರೆ. ಅವರಿಗೆ ಅಮೆರಿಕದ ನಾಗರಿಕತ್ವ ಪಡೆದುಕೊಂಡು ಬಿಡುತ್ತಾರೆ. ಆ ಸಮಯದಲ್ಲಿ ಅವರು ಭಾರತದ ಮರ್ಯಾದೆಯನ್ನು ತೆಗೆಯುವ ಕೆಲಸ ಮಾಡುತ್ತಾರೆ. ಅಮೆರಿಕದ ಡಾಲರ್​ನ ಹಣದ ಆಸೆಗೆ ಬಿದ್ದು ಬರುವ ಇಂಥವರು ತಮಗೆ ಭಾರತದಲ್ಲಿ ರಕ್ಷಣೆ ಇಲ್ಲ, ಹಾಗೇ ಹೀಗೇ ಹೇಳಿಕೊಂಡು ಇಲ್ಲಿ ರೆಫ್ಯುಜಿ ವೀಸಾಕ್ಕೆ ಟ್ರೈ ಮಾಡುತ್ತಾರೆ. ಅದು ಕೂಡ ಸಿಗುವುದು ಆರೆಂಟು ವರ್ಷವಾಗುತ್ತದೆ. ಅಲ್ಲಿಯವರೆಗೂ ಅಕ್ರಮವಾಗಿಯೇ ಇದ್ದು, ಮಕ್ಕಳನ್ನು ಮಾಡಿಕೊಂಡು ಅವರಿಗೆ ಪೌರತ್ವ ಪಡೆದುಕೊಳ್ಳುತ್ತಾರೆ. ಇದು ಭಾರತಕ್ಕೆ ಅವರು ಮಾಡುತ್ತಿರುವ ಅವಮಾನ ಆಗದೇ ಮತ್ತಿನ್ನೇನೂ ಅಲ್ಲ ಎಂದಿದ್ದಾರೆ ಶೋಭಾ. ಭಾರತದಲ್ಲಿ ಬಾಂಗ್ಲಾದೇಶಿಗರು ಅಕ್ರಮವಾಗಿ ನುಸುಳಿ ಮಾಡುವ ಕಿತಾಪತಿಗಳನ್ನು ಕೇಳಿರಬಹುದು. ಹಾಗೆಂದು ಅವರನ್ನು ಅಲ್ಲಿಯೇ ಇಟ್ಟುಕೊಳ್ಳಲು ಆಗುತ್ತದೆಯೆ ಎಂದು ಪ್ರಶ್ನಿಸಿರುವ ಶೋಭಾ ಅವರು, ಅಮೆರಿಕದಿಂದ ಗಡಿಪಾರು ಮಾಡುವ ಅಕ್ರಮ ವಲಸಿಗರ ಬಗ್ಗೆ ಕಾಳಜಿ ತೋರುವುದು ಕೂಡ ಹಾಸ್ಯಾಸ್ಪದ ಎಂದು ಪರೋಕ್ಷವಾಗಿ ಹೇಳಿದ್ದಾರೆ. 

ಕೆನಡಾ, ಗ್ರೀನ್‌ಲ್ಯಾಂಡ್‌ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಣ್ಣು ಈಗ ಗಾಜಾ ಮೇಲೆ!

YouTube video player