ವೊಯೇಜರ್‌ ಜೊತೆ ನಾಸಾದ ಸಂಪರ್ಕ ಕಟ್‌: ವಿಜ್ಞಾನಿಗಳ ತಪ್ಪು ಕಮಾಂಡ್‌ನಿಂದಾಗಿ ದೋಷ

ಬಾಹ್ಯಾಕಾಶದ ರಹಸ್ಯ ಅರಿಯಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ 2018ರಲ್ಲಿ ಹಾರಿಬಿಟ್ಟಿದ್ದ ವೊಯೇಜರ್‌ 2 ವ್ಯೋಮನೌಕೆಯ ಜೊತೆಗೆ ನಾಸಾ ಸಂಪರ್ಕ ತಾತ್ಕಾಲಿಕವಾಗಿ ಕಟ್‌ ಆಗಿರುವ ವಿಷಯ ಬೆಳಕಿಗೆ ಬಂದಿದೆ.

NASAs communication cut with Voyager Error due to wrong command by scientists akb

ನ್ಯೂಯಾರ್ಕ್: ಬಾಹ್ಯಾಕಾಶದ ರಹಸ್ಯ ಅರಿಯಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ 2018ರಲ್ಲಿ ಹಾರಿಬಿಟ್ಟಿದ್ದ ವೊಯೇಜರ್‌ 2 ವ್ಯೋಮನೌಕೆಯ ಜೊತೆಗೆ ನಾಸಾ ಸಂಪರ್ಕ ತಾತ್ಕಾಲಿಕವಾಗಿ ಕಟ್‌ ಆಗಿರುವ ವಿಷಯ ಬೆಳಕಿಗೆ ಬಂದಿದೆ.

ಕಳೆದ ಜು.21ರಂದು ನಾಸಾ ವಿಜ್ಞಾನಿಗಳು ಕಳುಹಿಸಿದ ಕಮ್ಯಾಂಡ್‌ ತಪ್ಪಾಗಿದ್ದ ಕಾರಣ 1230 ಕೋಟಿ ಮೈಲು ದೂರದ ಬಾಹ್ಯಾಕಾಶದಲ್ಲಿ ಭೂಮಿಯ ಕಡೆಗೆ ಮುಖ ಮಾಡಿದ್ದ ವೊಯೇಜರ್‌ನ ಆ್ಯಂಟೆನಾ ಶೇ.2ರಷ್ಟು ಬೇರೆ ಕಡೆಗೆ ತಿರುಗಿಕೊಂಡಿತು. ಹೀಗಾಗಿ ಅದರ ಜೊತೆಗಿನ ಸಂಪರ್ಕವನ್ನು ಭೂಮಿಯ ಮೇಲಿರುವ ನಾಸಾದ ಡೀಪ್‌ ಸ್ಪೇಸ್‌ ನೆಟ್‌ವರ್ಕ್ (ಡಿಎಸ್‌ಎನ್‌) ಕೇಂದ್ರವು ಕಡಿದುಕೊಂಡಿತ್ತು. ಬಳಿಕ ಅಲ್ಲಿಂದ ಯಾವುದೇ ಸಂದೇಶಗಳೂ ಡಿಎಸ್‌ಎನ್‌ಗೆ ರವಾನೆಯಾಗಿಲ್ಲ. ಆದರೆ ಇದೇ ನೌಕೆಯ ಸಂದೇಶಗಳನ್ನು ಸ್ವೀಕರಿಸಲು ಆಸ್ಪ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಕೇಂದ್ರವಿದ್ದು, ಈ ಕೇಂದ್ರ ಯಾವುದೇ ಅಡೆತಡೆ ಇಲ್ಲದೆ ಸಂದೇಶ ಸ್ವೀಕರಿಸುತ್ತಿರುವ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಮಂಗಳ ಗ್ರಹಕ್ಕೆ ಸೂಪರ್‌ಫಾಸ್ಟ್‌ ಪ್ರಯಾಣ, ನ್ಯೂಕ್ಲಿಯರ್‌ ಚಾಲಿತ ನೌಕೆ ಸಿದ್ಧಪಡಿಸಲಿರುವ ನಾಸಾ!

ಒಂದು ವೇಳೆ ಕ್ಯಾನ್‌ಬೆರಾ ಕೇಂದ್ರ ಇರದೇ ಹೋಗಿದ್ದರೆ, ವೊಯೇಜರ್‌ನ ಸಂದೇಶ ಪಡೆಯಲು ನಾಸಾ ಮುಂದಿನ ಅಕ್ಟೋಬರ್‌ವರೆಗೂ ಕಾಯಬೇಕಿತ್ತು. ಕಾರಣ, ನೌಕೆಯು ತಂತಾನೆ ತನ್ನ ಆ್ಯಂಟೆನಾದ ದೃಷ್ಟಿಯನ್ನು ಭೂಮಿಯ ಕಡೆಗೆ ಸರಿಪಡಿಸುವ ತಂತ್ರಜ್ಞಾನವನ್ನು ಹೊಂದಿದ್ದು, ಮುಂದಿನ ಇಂಥ ಪ್ರಕ್ರಿಯೆ ಅ.15ರಂದು ನಡೆಯಲಿದೆ. ಅದಾದ ನಂತರ ಮತ್ತೆ ಡಿಎಸ್‌ಎನ್‌ ಕೇಂದ್ರಕ್ಕೆ ಮತ್ತೆ ಎಂದಿನಂತೆ ಸಂದೇಶ ರವಾನೆಯಾಗಲಿದೆ. ವೋಯೇಜರ್‌ 2 ನೌಕೆ ರವಾನಿಸಿದ ಸಂದೇಶವು ಭೂಮಿಯನ್ನು ತಲುಪಲು 18 ಗಂಟೆ ಬೇಕಾಗುತ್ತದೆ.  1977ರಲ್ಲಿ ವೋಯೇಜರ್‌ 1 ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಎರಡನೇ ನೌಕೆ 2018ರಲ್ಲಿ ಉಡ್ಡಯನಗೊಂಡಿತ್ತು.

ಅತ್ಯಂತ ಬಲಿಷ್ಠ ಸೌರಜ್ವಾಲೆ ಹೊರಹಾಕಿದ ಸೂರ್ಯ, ಚಿತ್ರ ರಿಲೀಸ್ ಮಾಡಿದ ನಾಸಾ!

 

Latest Videos
Follow Us:
Download App:
  • android
  • ios