ಅತ್ಯಂತ ಬಲಿಷ್ಠ ಸೌರಜ್ವಾಲೆ ಹೊರಹಾಕಿದ ಸೂರ್ಯ, ಚಿತ್ರ ರಿಲೀಸ್ ಮಾಡಿದ ನಾಸಾ!

ನಿರಂತರವಾಗಿ ಸೂರ್ಯನ ಚಲನೆಗಳ ಮೇಲೆ ನಿಗಾ ಇಡುವ ಸೋಲಾರ್‌ ಡೈನಾಮಿಕ್ಸ್‌ ಅಬ್ಸರ್ವೇಟರಿ ಜುಲೈ 2 ರಂದು ಸೂರ್ಯನ ಚಿತ್ರ ತೆಗೆದಿದ್ದು, ಇದರ ಬೆನ್ನಲ್ಲಿಯೇ ನಾಸಾ ಎಚ್ಚರಿಕೆಯನ್ನು ರವಾನಿಸಿದೆ.
 

NASA releases pic Sun emits strong solar flare san

ನವದೆಹಲಿ (ಜು.4): ಈವರೆಗಿನ ಅತ್ಯಂತ ಬಲಿಷ್ಠವಾದ ಸೌರಜ್ವಾಲೆಯನ್ನು ಸೂರ್ಯ ಹೊರಗೆ ಉಗುಳಿದ್ದಾನೆ ಎಂದು ನಾಸಾ ತಿಳಿಸಿದೆ. ಜುಲೈ 2 ರಂದು ಯುರೋಪಿನ್‌ ಕಾಲಮಾನ ಸಂಜೆ 7.14ರ ವೇಳೆಗೆ ಬಾಹ್ಯಾಕಾಶದಲ್ಲಿ ಈ ವಿದ್ಯಮಾನ ಜರುಗಿದೆ. ಸೂರ್ಯ ಪ್ರತಿ ಬೆಳವಣಿಗೆಯ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ನಾಸಾ ಸ್ಥಾಪನೆ ಮಾಡಿರುವ ಸೋಲಾರ್‌ ಡೈನಾಮಿಕ್ಸ್ ಅಬ್ಸರ್ವೇಟರಿ (ಎಸ್‌ಡಿಓ) ಸೂರ್ಯನಲ್ಲಿರುವ ಆಗಿರುವ ಈ ವಿದ್ಯಮಾನವನ್ನು ದಾಖಲೆಯ ಸಮೇತ ತಿಳಿಸಿದೆ. ಎಸ್‌ಡಿಓ ಇದರ ಚಿತ್ರವನ್ನು  ತೆಗೆದಿದ್ದು ನಾಸಾ ಇದನ್ನು ಹಂಚಿಕೊಂಡಿದೆ. ಸೌರಜ್ವಾಲೆಗಳು ಎನ್ನುವುದು ಬಾಹ್ಯಾಕಾಶದಲ್ಲಿ ಆಗುವ ಅತ್ಯಂತ ಶಕ್ತಿಯುತ ಸ್ಪೋಟಗಳು. ಸೂರ್ಯನ ಪಾಲಿಗೆ ಇದು ಸಣ್ಣ ಬೆಳವಣಿಗೆಯಾಗಿದ್ದರು, ಭೂಮಿ ಸೇರಿದಂತೆ ಇತರ ಗ್ರಹಗಳ ಮೇಲೆ ಇದು ಪರಿಣಾಮ ಬೀರುತ್ತವೆ. ಸೌರಜ್ವಾಲೆಗಳು ಮತ್ತು ಸೌರ ಸ್ಪೋಟಗಳು, ಭೂಮಿಯ ಮೇಲಿನ ರೇಡಿಯೋ ಸಂವಹನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು, ಪವರ್‌ ಗ್ರಿಡ್‌ಗಳು, ನ್ಯಾವಿಗೇಷನ್‌ ಸಂಕೇತಗಳು, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳಿಗೆ ದೊಡ್ಡ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತದೆ.

ಈ ಸೌರಜ್ವಾಲೆಯನ್ನು ನಾಸಾ ಎಕ್ಸ್‌ 1.0 ಎಂದು ವರ್ಗೀಕರಣ ಮಾಡಿದೆ. ಎಕ್ಸ್‌ ಕ್ಲಾಸ್‌ ವರ್ಗೀಕರಣ ಎನ್ನುವುದು ಸೂರ್ಯನ ಅತ್ಯಂತ ಬಲಿಷ್ಠವಾದ ಸೌರಜ್ವಾಲೆ. ಇನ್ನು ಅದರ ಮುಂದಿರುವ ನಂಬರ್‌ಗಳು ಸೌರಜ್ವಾಲೆಯ ಶಕ್ತಿಯ ಬಗ್ಗೆ ತಿಳಿಸುವ ಮಾಹಿತಿಗಳಾಗಿರುತ್ತದೆ.

ಆದರೆ, ಸೌರಜ್ವಾಲೆ ಭೂಮಿಯ ಬಳಿ ಬರಲು ಇನ್ನೂ ಹಲವು ದಿನಗಳು ಹಿಡಿಯುತ್ತದೆ. ಇದರಿಂದ ಭೂಮಿಯ ಮೇಲೆ ಆಗುವ ಪರಿಣಾಮವನ್ನು ಈಗಲೇ ಊಹೆ ಮಾಡುವುದು ಕಷ್ಟ ಎಂದು ನಾಸಾ ಹೇಳಿದೆ.  ನಾಸಾ ಸೂರ್ಯನ ಚಟುವಟಿಕೆಯಿಂದ ಸೌರ ವಾತಾವರಣದವರೆಗೆ ಮತ್ತು ಭೂಮಿಯ ಸುತ್ತಲಿನ ಬಾಹ್ಯಾಕಾಶದಲ್ಲಿನ ಕಣಗಳು ಮತ್ತು ಕಾಂತೀಯ ಕ್ಷೇತ್ರಗಳವರೆಗೆ ಎಲ್ಲವನ್ನೂ ಅಧ್ಯಯನ ಮಾಡುವ ಬಾಹ್ಯಾಕಾಶ ನೌಕೆಯೊಂದಿಗೆ ನಿರಂತರವಾಗಿ ಸೂರ್ಯ ಮತ್ತು ನಮ್ಮ ಬಾಹ್ಯಾಕಾಶ ಪರಿಸರವನ್ನು ಗಮನಿಸುತ್ತಲೇ ಇರುತ್ತದೆ.

ಮೂಲಗಳ ಪ್ರಕಾರ, ಸೋಲಾರ್‌ ಸೈಕಲ್‌ 25ರಲ್ಲಿ 18ನೇ ಎಕ್ಸ್‌ ಕ್ಲಾಸ್‌ ಸೌರಜ್ವಾಲೆಯಾಗಿದೆ. ಭೂಮಿಯ ಮೇಲೆ ರೇಡಿಯೋ ಸಂಕೇತಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ!

ಹೆಚ್ಚಿನ ಮಾಹಿತಿಗಾಗಿ NOAA ನ ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಕೇಂದ್ರ https://spaceweather.gov/ ಗೆ ಭೇಟಿ ನೀಡಿ, ಬಾಹ್ಯಾಕಾಶ ಹವಾಮಾನ ಮುನ್ಸೂಚನೆಗಳು,  ಎಚ್ಚರಿಕೆಗಳು ಮತ್ತು ಅಲರ್ಟ್‌ಗಾಗಿ ಅಮೆರಿಕ ಸರ್ಕಾರದ ಅಧಿಕೃತ ಮೂಲವಾಗಿದೆ. ನಾಸಾ ರಾಷ್ಟ್ರದ ಬಾಹ್ಯಾಕಾಶ ಹವಾಮಾನ ಪ್ರಯತ್ನದ ಸಂಶೋಧನಾ ಅಂಗವಾಗಿ ಕಾರ್ಯನಿರ್ವಹಿಸುತ್ತದೆ.

James Webb Space Telescope: ಶನಿಯ ಸ್ವರ್ಣದುಂಗುರ, ಈ ಬ್ರಹ್ಮಾಂಡ ಎಷ್ಟು ಸುಂದರ

Latest Videos
Follow Us:
Download App:
  • android
  • ios