Asianet Suvarna News Asianet Suvarna News

ಅಂತರಿಕ್ಷದಿಂದ ಹಿಮಾಲಯ, ನಾಸಾ ಗಗನಯಾತ್ರಿ ಹಂಚಿದ ಅದ್ಭುತ ದೃಶ್ಯಕಾವ್ಯ

* ಹಿಮಾಲಯದ ಮನಮೋಹಕ ದೃಶ್ಯ
* ನಾಸಾ ಹಂಚಿಕೊಂಡ ಅದ್ಭುತ ಚಿತ್ರಗಳು
* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಟೋಗಳು

NASA astronaut shares picture of Himalayas from space mah
Author
Bengaluru, First Published Jun 4, 2021, 2:58 PM IST

ನವದೆಹಲಿ(ಜೂ.  04)  ಭಾರತದ ಹೆಮ್ಮೆ ಹಿಮಾಲಯ ಪರ್ವತ ಶ್ರೇಣಿಗಳ ಬಗ್ಗೆ ಹೊಸದೇನೂ ಹೇಳುವುದು ಉಳಿದಿಲ್ಲ.  ನಾಸಾ ಹಿಮಾಲಯದ ಪೋಟೋಗಳನ್ನು ಹಂಚಿಕೊಂಡಿದ್ದು  ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಗಗನಯಾತ್ರಿ ಮಾರ್ಕ್ ಟಿ ವಂಡೆ ಹೀ ಅವರು ಟ್ವಿಟ್ಟರ್ ನಲ್ಲಿ ಮನಮೋಹಕವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಿಂದೆ ಇಂಥ ದೃಶ್ಯ ಎಂದೂ ನೋಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಯುಪಿಯಿಂದ ಕಾಣುತ್ತಿದೆ ಹಿಮಾಲಯ, ಪರಿಸರ ಶುದ್ಧ

ದಕ್ಷಿಣ ಮತ್ತು ಪೂರ್ವ ಏಷ್ಯಾದ ಶಿಖರ ಸರಣಿಗಳು ಭಾರತ ಖಂಡವನ್ನು ಟಿಬೆಟಿಯನ್ ಪ್ರಸ್ಥಭೂಮಿಯಿಂದ ಬೇರ್ಪಡಿಸುತ್ತದೆ. ಈ ಶ್ರೇಣಿಯು ನೇಪಾಳ ಮತ್ತು ಚೀನಾ ನಡುವಿನ ಗಡಿಯಲ್ಲಿರುವ ಎವರೆಸ್ಟ್ ಪರ್ವತ ಸೇರಿದಂತೆ ಭೂಮಿಯ ಅತ್ಯುನ್ನತ ಶಿಖರಗಳನ್ನು ಹೊಂದಿದೆ. ಹಿಮಾಲಯವು ಐವತ್ತಕ್ಕೂ ಹೆಚ್ಚು ಪರ್ವತಗಳನ್ನು ಒಳಗೊಂಡಿದೆ. ಹಿಮಾಲಯದ ಸೌಂದರ್ಯ ಮತ್ತೊಮ್ಮೆ ಕಣ್ಣು ತುಂಬಿಕೊಂಡು ಬನ್ನಿ 

ಹಿಮಾಲಯದ ಜನನ;  25 ಕೋಟಿ ವರ್ಷಗಳ ಹಿಂದೆ "ಪ್ಯಾಂಜಿಯ" ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು 4-7 ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು 3 ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಒತ್ತಡದಿಂದ ನಿರ್ಮಾಣವಾದ ಪರ್ವತಶ್ರೇಣೀ ಪ್ರತಿವರ್ಷ ಬೆಳೆಯುತ್ತಲೇ ಇದೆ. 

 

 

Follow Us:
Download App:
  • android
  • ios