Asianet Suvarna News Asianet Suvarna News

5ನೇ ಬಾರಿ ಇಸ್ರೇಲ್ ಪ್ರಧಾನಿಯಾದ ನೆತನ್ಯಾಹುಗೆ ಪಿಎಂ ಮೋದಿ ಶುಭಾಶಯ!

ಐದನೇ ಬಾರಿ ಇಸ್ರೇಲ್‌ನ ಪ್ರಧಾನಿಯಾದ ಬೆಂಜಮಿನ್ | ನೆತನ್ಯಾಹುಗೆ ಪಿಎಂ ಮೋದಿ ಅಭಿನಂದನೆ| ಕೋರೋನಾ ಸಂಬಂಧ ಔಷಧಿ, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪಡಿಸುವ ಪ್ರಯತ್ನಗಳ ಬಗ್ಗೆಯೂ ಮಾತುಕತೆ

Narendra Modi and Netanyahu discuss expanding cooperation in research for vaccine to fight Corona pandemic
Author
Bangalore, First Published Jun 11, 2020, 4:36 PM IST

ನವದೆಹಲಿ(ಜೂ.11): ಬರೋಬ್ಬರಿ ಐದನೇ ಬಾರಿ ಇಸ್ರೇಲ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಬೆಂಜಮಿನ್ ನೆತನ್ಯಾಹುಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪಿಎಂ ಮೋದಿ 'ಇಡೀ ವಿಶ್ವ ಕೊರೋನಾ ವೈರಸ್‌ನಿಂದ ಮುಕ್ತವಾದ ಬಳಿಕ ಭಾರತ ಹಾಗೂ ಇಸ್ರೇಲ್ ಸಹಯೋಗ ಮುಂದುವರಿಸುವ ಕುರಿತು ಚರ್ಚೆ ನಡೆಸಿದ್ದೇನೆ. ಜೊತೆಗೆ ದಾಖಲೆಯ 5ನೇ ಬಾರಿ ಪ್ರಧಾನಿಯಾಗಿರುವುದಕ್ಕೆ ನಿಮಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಇಸ್ರೇಲ್ ಸಹಭಾಗಿತ್ವ ಮತ್ತಷ್ಟು ಸದೃಢವಾಗಲಿದೆ' ಎಂದು ಬರೆದಿದ್ದಾರೆ.

ಇಷ್ಟೇ ಅಲ್ಲದೇ ಫೋನ್ ಮೂಲಕವೂ ಉಭಯ ನಾಯಕರು ಕೋರೋನಾ ಸಂಬಂಧ ಔಷಧಿ, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪಡಿಸುವ ಪ್ರಯತ್ನಗಳ ಸಂಬಂಧ ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರ ವಿಸ್ತರಣೆ ಬಗ್ಗೆಯೂ ಚರ್ಚಿಸಿರುವುದಾಗ ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಆರೋಗ್ಯ ತಂತ್ರಜ್ಞಾನ, ಕೃಷಿ ನಾವೀನ್ಯತೆ, ರಕ್ಷಣಾ-ಸಹಕಾರ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತ-ಇಸ್ರೇಲ್ ಸಹಯೋಗವನ್ನು ವಿಸ್ತರಿಸುದ್ದು, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಉದಯೋನ್ಮುಖ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪರಸ್ಪರ ಸಮಾಲೋಚಿಸಲು ಸದಾ ಸಂಪರ್ಕದಲ್ಲಿರಲು ಉಭಯ ನಾಯಕರು ಸಹಮತ ಸೂಚಿಸಿದ್ದಾರೆ.

Follow Us:
Download App:
  • android
  • ios