ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ ಕ್ಯಾನ್ಸರ್‌ಗೆ ಬಲಿ
ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ ಅವರು ಕ್ಯಾನ್ಸರ್‌ಗೆ ಬರಲಿಯಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಹಗೆ ಜಿಂಗೋಬ್ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕಚೇರಿ ಘೋಷಣೆ ಮಾಡಿದೆ.
ನಮೀಬಿಯಾ: ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೋಬ್ (ಹಗೆ ಗಿಂಗೋಬ್) ಅವರು ಕ್ಯಾನ್ಸರ್‌ಗೆ ಬರಲಿಯಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಹಗೆ ಜಿಂಗೋಬ್ (ಹಗೆ ಗಿಂಗೋಬ್) ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕಚೇರಿ ಘೋಷಣೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ಲ್ಲಿ ನಮೀಬಿಯಾ ಅಧ್ಯಕ್ಷರ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಜಿಂಗೋಬ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಲೇಡಿ ಪೊಹಂಬಾ ವೈದ್ಯಕೀಯ ತಂಡವೂ ಜಿಂಗೋಬ್ ಅವರ ಚೇತರಿಕೆಗಾಗಿ ಸಾಕಷ್ಟು ಪ್ರಯತ್ನಿಸಿತ್ತು. ಆದರೆ ಚಿಕಿತ್ಸೆಫಲಕೊಡದ ಹಿನ್ನೆಲೆಯಲ್ಲಿ ಜಿಂಗೋಬ್ (Hage Geingob) ಪತ್ನಿ ಮೋನಿಕಾ ಜಿಂಗೋಬ್ ಮತ್ತು ಮಕ್ಕಳು ಜೊತೆಗಿದ್ದಾಗಲೇ ನಿಧನರಾದರು ಎಂದು ಈ ಪೋಸ್ಟ್ ಮಾಹಿತಿ ನೀಡಿದೆ.
82 ವರ್ಷ ಜಿಂಗೋಬ್ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ 8 ರಂದು ಅವರಿಗೆ ಕೊಲೊನೋಸ್ಕೋಪಿ (colonoscopy) ಮತ್ತು ಗ್ಯಾಸ್ಟ್ರೋಸ್ಕೋಪಿ (gastroscopy) ಮಾಡಲಾಗಿತು, ನಂತರ ಬಯಾಪ್ಸಿ ಮಾಡಲಾಯಿತು ಎಂದು ಅವರ ಕಚೇರಿ ಕಳೆದ ತಿಂಗಳು ತಿಳಿಸಿತ್ತು. ಜಿಂಗೋಬ್ ನಿಧನಕ್ಕೆ ನಮೀಬಿಯಾದ ಹಂಗಾಮಿ ಅಧ್ಯಕ್ಷ ಅಂಗೋಲೊ ಎಂಮುಂಬಾ (Angolo Mbumba) ಅವರು ಸಂತಾಪ ಸೂಚಿಸಿದ್ದು, ಶಾಂತವಾಗಿರುವಂತೆ ಕರೆ ನೀಡಿದ್ದಾರೆ. ಅಲ್ಲದೇ ಜಿಂಗೋಬ್ ಅವರಿಗೆ ಅಗತ್ಯ ರಾಜ್ಯ ಮರ್ಯಾದೆ ವ್ಯವಸ್ಥೆ ಮಾಡಲು ಕ್ಯಾಬಿನೆಟ್ ಶೀಘ್ರವೇ ಕ್ರಮ ಕೈಗೊಳ್ಳುವುದು ಎಂದು ಹೇಳಿದ್ದಾರೆ.
ಕುನೋ ಅರಣ್ಯದಲ್ಲಿ ನಮೀಬಿಯಾದ ಮತ್ತೊಂದು ಚೀತಾ ಸಾವು, 10ಕ್ಕೇರಿದ ಸಂಖ್ಯೆ!
2015 ರಿಂದ ದಕ್ಷಿಣ ಆಫ್ರಿಕಾ ಖಂಡದ ನಮೀಬಿಯಾ ರಾಷ್ಟ್ರದ ಅಧ್ಯಕ್ಷರಾಗಿದ್ದ ಜಿಂಗೋಬ್ ಅವರು ಈ ವರ್ಷ ತಮ್ಮ ಎರಡನೇ ಮತ್ತು ಅಂತಿಮ ಅವಧಿಯನ್ನು ಪೂರ್ಣಗೊಳಿಸಲು ನಿರ್ಧರಿಸಿದರು. 2014 ರಿಂದಲೂ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಲಿ ಅಧ್ಯಕ್ಷರ ನಿಧನದ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡಲು ನಮೀಬಿಯಾ ಚುನಾವಣೆಗಳನ್ನು ನಡೆಸಲಿದೆ.
ರೇಡಿಯೋ ಕಾಲರ್, ತೇವದಿಂದ ಸೋಂಕು: 2 ಚೀತಾಗಳ ಸಾವಿಗೆ ಸೆಪ್ಟಿಕ್ ಕಾರಣ: ತಜ್ಞ