ನಿಂತಲ್ಲೇ ನಡುಗಿದ ಪಾಕ್, ವಿಷಪ್ರಾಶನಕ್ಕೆ ಮುಂಬೈ ದಾಳಿ ಮಾಸ್ಟರ್‌ಮೈಂಡ್ ಉಗ್ರ ಹಫೀಝ್ ಸ್ಥಿತಿ ಗಂಭೀರ!

ಮುಂಬೈ ದಾಳಿ ಮಾಸ್ಟರ್‌ಮೈಂಡ್ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವಿಶಪ್ರಾಶಾನದಿಂದ ತೀವ್ರ ಅಸ್ವಸ್ಥಗೊಂಡಿರುವ ಹಫೀಝ್ ಸಯೀದ್‌ಗೆ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದಲ್ಲಿ ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಅನ್ನೋ ಮಾತುಗಳು ಜೋರಾಗುತ್ತಿರುವ ಬೆನ್ನಲ್ಲೇ ಇದೀಗ ಪಾಕಿಸ್ತಾನ ನಿಂತಲ್ಲೇ ನಡುಗಿ ಹೋಗಿದೆ
 

Mumbai Attack Mastermind Terrorist Hafiz Saeed battles in pakistan Hospital after complaining of poisoning ckm

ಲಾಹೋರ್(ಏ.07) ಪಾಕಿಸ್ತಾನದಲ್ಲಿ ಮತ್ತೆ ಅಪರಿಚಿತನ ಅಬ್ಬರ ಆರಂಭಗೊಂಡಿದೆ. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡೆ ಉಗ್ರರು ಒಬ್ಬರ ಹಿಂದೆ ಒಬ್ಬರು ಅಪರಿಚಿತರ ದಾಳಿಗೆ ಬಲಿಯಾಗುತ್ತಿದ್ದಾರೆ. ಇದರ ಹಿಂದೆ ಭಾರತದ ಕೈವಾಡವಿದೆ ಅನ್ನೋ ವರದಿ ಇತ್ತೀಚೆಗೆ ಕೋಲಾಹಲ ಸೃಷ್ಟಿಸಿದೆ. ಈ ಚರ್ಚೆ, ವಾದ ವಿವಾದಗಳು ತೀವ್ರಗೊಳ್ಳುತ್ತಿದ್ದಂತೆ ಇದೀಗ ಮುಂಬೈ ದಾಳಿ ಮಾಸ್ಟರ್ ಮೈಂಡ್, ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಸಂಸ್ಥಾಪಕ, ಜಾಗತಿಕ ಭಯೋತ್ಪಾದಕ ಹಣೆಪಟ್ಟಿ ಹೊತ್ತಿರುವ ಉಗ್ರ ಹಫೀಝ್ ಸಯೀದ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಿಶಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿರುವ ಹಫೀಝ್ ಸಯೀದ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಭಾರಿ ಭದ್ರತೆಯಲ್ಲಿರುವ ಉಗ್ರ ಹಫೀಜ್ ಸಯೀದ್‌ಗೆ ಆಹಾರ ಸೇವಿಸಿದ ಕೆಲ ಹೊತ್ತಲ್ಲೇ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ರಕ್ತ ವಾಂತಿ ಮಾಡಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಲಾಹೋರ್‌ನ ಮೇಯೋ ಆಸ್ಪತ್ರಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಐಸಿಯು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಫೀಜ್ ಸಯೀದ್ ವಿಶಪ್ರಾಶನಾದಿಂದ ಅಸ್ವಸ್ಥರಾಗಿದ್ದಾರೆ ಎಂದು ಮೇಯೋ ಆಸ್ಪತ್ರೆ ಮೂಲಗಳು ಹೇಳುತ್ತಿವೆ. 

ಪಾಕ್ ಚುನಾವಣೆ ಫಲಿತಾಂಶ, ಮುಂಬೈ ದಾಳಿಕೋರ ಹಫೀಜ್ ಸಯೀದ್ ಪುತ್ರನಿಗೆ ಹೀನಾಯ ಸೋಲು!

ಏಪ್ರಿಲ್ 7ರ ಮಧ್ಯಾಹ್ನ ಊಟ ಮುಗಿಸಿದ ಬಳಿಕ ವಿಶ್ರಾಂತಿಗೆ ಜಾರಿದ್ದ ಹಫೀಜ್ ಸಯೀದ್ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ರಕ್ತ ವಾಂತಿ ಮಾಡಿದ್ದಾರೆ. ಭಾರಿ ಭದ್ರತೆಯೊಂದಿಗ ಮೇಯೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ಸ್ಪೆಷಲ್ ಐಸಿಯೂ ವಾರ್ಡ್‌ನಲ್ಲಿ ಹಫೀಜ್ ಸಯೀದ್ ದಾಖಲಿಸಲಾಗಿದೆ. ಈ ವಾರ್ಡ್‌ಗೆ ಯಾರಿಗೂ ಪ್ರೇಶವಿಲ್ಲ. ಲಷ್ಕರ್ ಸಂಘಟನೆ ಮಿಲಿಟರಿ ಪಡೆ, ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ಆಸ್ಪತ್ರೆ ಸುತ್ತುವರಿದಿದೆ.

ಪಾಕಿಸ್ತಾನದಲ್ಲಿರುವ ಭಾರತಕ್ಕೇ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರನ್ನು ಭಾರತ ಸ್ಲೀಪರ್ ಸೆಲ್ಸ್ ಮೂಲಕ ಹತ್ಯೆ ಮಾಡುತ್ತಿದೆ ಅನ್ನೋ ಗಂಭೀರ ಆರೋಪವನ್ನು ಪಾಕಿಸ್ತಾನ ಮಾಡಿದೆ. ಇದರ ಬೆನ್ನಲ್ಲೇ ಬ್ರಿಟನ್ ಪತ್ರಿಕೆ ದಿ ಗಾರ್ಡಿಯನ್ ಇತ್ತೀಚೆಗೆ ಪ್ರಕಟಿಸಿದ ವರದಿ ಪಾಕಿಸ್ತಾನದ ನಡುಕ ಹೆಚ್ಚಿಸಿತ್ತು. ಪಾಕಿಸ್ತಾನದಲ್ಲಿ ಅಪರಿಚಿತರ ದಾಳಿಗೆ ಬಲಿಯಾದ ಉಗ್ರರು ಭಾರತದ ಟಾರ್ಗೆಟ್ ಆಗಿತ್ತು. ಈ ಹತ್ಯೆ ಹಿಂದೆ ಭಾರತದ ಎಜೆನ್ಸಿ ಕೈವಾಡವಿದೆ ಎಂದು ವರದಿ ನೀಡಿತ್ತು. 

ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಅಪರಿಚಿತರ ಗುಂಡೇಟಿಗೆ ಬಲಿ

ಅಪರಿಚಿತರ ದಾಳಿ ಆತಂಕ ಹೆಚ್ಚಾಗುತ್ತಿದ್ದಂತೆ ಭಾರಿ ಭದ್ರತೆಯಲ್ಲಿದ್ದ ಉಗ್ರ ಹಫೀಜ್ ಸಯೀದ್‌ಗೆ ವಿಷಪ್ರಾಶಾನ ಮಾಡಲಾಗಿದೆ ಅನ್ನೋ ಸುದ್ದಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. 
 

Latest Videos
Follow Us:
Download App:
  • android
  • ios